ಮೃಗಾಲಯಕ್ಕೆ ಹರಿದು ಬಂತು ನೆರವಿನ ಮಹಾಪೂರ

ಮೃಗಾಲಯಕ್ಕೆ ಹರಿದು ಬಂತು ನೆರವಿನ ಮಹಾಪೂರ

ಮೈಸೂರು-

 ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ರಾಯಚೂರಿನ ಡಾ.ಪ್ರಶಾಂತ್ ಎಚ್.ಟಿ ಅವರು 5 ಸಾವಿರ ರೂ. ಪಾವತಿಸಿ  ಚಿರತೆ ಚೆಕ್ಕು, ಮೈಸೂರಿನ ಜಗನ್ ಮಹೋನ್ ಎಚ್.ಡಿ ಅವರು 7 ಸಾವಿರ ರೂ. ಪಾವತಿಸಿ ಕಾಳಿಂಗ ಸರ್ಪ ದತ್ತು ಪಡೆದಿದ್ದಾರೆ.

 ಇನ್ನರ್ ವೀಲ್ ಕ್ಲಬ್ ಮೈಸೂರು ಸೌತ್ ಈಸ್ಟ್ ವತಿಯಿಂದ 2 ಸಾವಿರ ರೂ. ಪಾವತಿಸಿ 2 ಲವ್ ಬರ್ಡ್, ಸಂಯುಕ್ತ ಲಯನ್ಸ್ ಕ್ಲಬ್ ಆಫ್ ಮೈಸೂರ್ ಅರಮನೆ ಸಿಟಿ ಕ್ಲಬ್ ವತಿಯಿಂದ 1 ಸಾವಿರ ರೂ. ಪಾವತಿಸಿ ಲವ್‍ಬರ್ಡ್, ಸೌಚಿಶೋನಶ್ರೇಯ ಅವರು 3,500 ರೂ. ಪಾವತಿಸಿ ನವಿಲು, ಎಸ್.ಆರ್.ಸತೀಶ್ ಚಂದ್ರ ಅವರು 3,500 ರೂ. ಪಾವತಿಸಿ ಬಿಳಿ ನವಿಲು, ಮೊಹಮ್ಮದ್ ಹಮ್ದಾನ್ ಅವರು 1 ಸಾವಿರ ರೂ. ಪಾವತಿಸಿ ಕಾಕಟೈಲ್ ಅನ್ನು ದತ್ತು ಪಡೆದಿದ್ದಾರೆ,

 ಬಿ.ಎನ್.ನಟರಾಜ್ ಅವರು 2 ಸಾವಿರ ರೂ. ಪಾವತಿಸಿ ನಕ್ಷತ್ರದ ಆಮೆ, ಸ್ನೇಹ ಜೆ. ಅವರು 3,500 ರೂ. ಪಾವತಿಸಿ ನವಿಲು, ವೈನವಿ ವಿನಯ್ ಅವರು 20 ಸಾವಿರ ರೂ. ಪಾವತಿಸಿ ಫ್ಲೆಮಿಂಗೊ, ಪ್ರವೀಣ್ ಎಸ್. ಅವರು 2 ಸಾವಿರ ರೂ. ಪಾವತಿಸಿ ನಕ್ಷತ್ರದ ಆಮೆ, ಯಾಶಿಕ ಅವರು 3,500 ರೂ. ಪಾವತಿಸಿ ಬಿಳಿ ನವಿಲು, ಮಂಜುಳ ಸಿ. ಅವರು 5 ಸಾವಿರ ರೂ. ಪಾವತಿಸಿ ನಾಲ್ಕು ಕೊಂಬಿನ ಜಿಂಕೆ ದತ್ತು ಸ್ವೀಕರಿಸಿರುತ್ತಾರೆ.

 ಸಮಾನ ಮನಸ್ಕರು ಅವರು 4 ಸಾವಿರ ರೂ. ಪಾವತಿಸಿ ರೈನ್‍ಬೊ ಲೊರಿಕೀಟ್ ಮತ್ತು ನಕ್ಷತ್ರದ ಆಮೆ, ರೇಖಾ ಎಂ. ಎಂಬುವವರು 7,500 ರೂ. ಪಾವತಿಸಿ ಜಿಂಕೆ, ಮಂಡ್ಯದ ಮೋಹನ ಕುಮಾರ ಅವರು 1 ಸಾವಿರ ರೂ. ಪಾವತಿಸಿ ಕೇರೆ ಹಾವು ಹಾಗೂ ಮುಂಬೈನ ಸೌರಭ್ ಪ್ರಮಣಿಕ್ ಅವರು 1 ಸಾವಿರ ರೂ. ಪಾವತಿಸಿ ಲವ್‍ಬರ್ಡ್ ಅನ್ನು ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿರುತ್ತಾರೆ.

 ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈಜೋಡಿಸಿದ ಎಲ್ಲರಿಗೂ ಮೃಗಾಲವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Previous ಜಂತುಹುಳು ನಿವಾರಣೆಗೆ ಮನೆಮನೆಗೆ ಮಾತ್ರೆ ವಿತರಣೆ
Next ಕೊರೋನಾ ಚಿಕಿತ್ಸೆಗೆ 19 ದಿನಕ್ಕೆ 11 ಲಕ್ಷ ಬಿಲ್, 11 ಲಕ್ಷದಲ್ಲಿ ಡಿಸ್ಕೌಂಟ್ ಕೊಟ್ಟಿದ್ದು ಕೇವಲ 1 ರೂಪಾಯಿ"

You might also like

0 Comments

No Comments Yet!

You can be first to comment this post!

Leave a Reply