ಇನ್ನುಮುಂದೆ ಆರಾಮವಾಗಿ ಬಾರ್ ನಲ್ಲಿ ಕುಳಿತು ಕುಡಿಯಬಹುದು

ಇನ್ನುಮುಂದೆ ಆರಾಮವಾಗಿ ಬಾರ್ ನಲ್ಲಿ ಕುಳಿತು ಕುಡಿಯಬಹುದು

ಬೆಂಗಳೂರು-

ಮದ್ಯ ಪ್ರಿಯರಿಗೆ ಖುಷಿಯ ವಿಚಾರವನ್ನ ಸರಕಾರ ನೀಡಿದ್ದು, ಇಂದಿನಿಂದ ಬಾರ್-ರೆಸ್ಟೋರೆಂಟ್ ಪಬ್ ಸೇರಿದಂತೆ ಎಲ್ಲ ಮಾದರಿಯ ಮದ್ಯದಂಗಡಿಗಳು ಪ್ರಾರಂಭ ಮಾಡಲು ಆದೇಶ ಹೊರಡಿಸಿದೆ. ಹೀಗಾಗಿ ಇಂದಿನಿ ರಾಜ್ಯದಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ಆರಂಭವಾಗಿವೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಎಮ್ ಎಸ್ ಐ ಎಲ್ ಹಾಗೂ ವೈನ್ ಶಾಪ್ ಗಳಿಗೆ ಮಾತ್ರ ತೆರೆಯಲು ಅವಕಾಶ ನೀಡಲಾಗಿತ್ತು. ಅನೇಕರ ಒತ್ತಾಯ ಆರಂಭವಾದ ನಂತರ ಕೇಂದ್ರ ಸರಕಾರದಿಂದಲೂ ಹೊಸ ಮಾರ್ಗಸೂಚಿಗಳನ್ನ ಅನುಸರಿಸಿ ಮದ್ಯದ ಪಾರ್ಸಲ್ ಕೊಡುವುದಕ್ಕೆ ಪರವಾನಿಗೆ ನೀಡಲಾಗಿತ್ತು. ಇಂದಿಗೆ ಲಾಕ್ ಡೌನ್ ನ ಮತ್ತೊಂದು ಹಂತ ಮುಗಿದಿದ್ದು, ಇಂದಿನಿಂದ ಎಲ್ಲ ಪ್ರಕಾರದ ಮದ್ಯದ ಶಾಪ್ ಗಳು ಓಪನ್ ಆಗಲಿವೆ.

ಕೇಂದ್ರ ಸರಕಾರ ಹೊರಡಿಸಿರುವ ಎಸ್ ಓಪಿ ಆದೇಶದಲ್ಲಿ ತಿಳಿಸಿರುವ ಎಲ್ಲಾ ಅಂಶಗಳನ್ನ ಕಟ್ಟುನಿಟ್ಟಿನ ಷರತ್ತಿನೊಂದಿಗೆ ಆರಂಭಿಸಲು ಆದೇಶ ಮಾಡಲಾಗಿದೆ. ರಾಜ್ಯದಲ್ಲಿರುವ ಸಿಎಲ್-4, ಸಿಎಲ್-6ಎ, ಸಿಎಲ್-7, ಸಿಎಲ್-7ಎ (ನಮೂನೆ-14), ಸಿಎಲ್-7ಬಿ (ನಮೂನೆ-15), ಸಿಎಲ್-9, ಸಿಎಲ್-17, ಸಿಎಲ್-18, ವೈನ್ ಟಾವರಿನ್, ಬಾಟಲ್ಡ್ ಬೀರ್, ಆರ್ ವಿಬಿ(ಪಬ್) ಮತ್ತು ಮೈಕ್ರೋಬ್ರಿವರಿ ಸನ್ನದುಗಳಲ್ಲಿನ ರೆಸ್ಟೋರೆಂಟಗಳಲ್ಲಿ ಅಪ್ ಟು 50% ಸೀಟಿಂಗ್ ಕೆಪ್ಯಾಸಿಟಿಯೊಂದಿಗೆ ಆರಂಭಿಸಲು ಆದೇಶ ಮಾಡಲಾಗಿದೆ.

Previous ಬೆಲ್ ಬಾಟಮ್ ಸಿನಿಮಾ ಮಾದರಿಯಲ್ಲಿ ಕಳ್ಳತನ..!
Next ಸೂಪರ್ ಸ್ಟಾರ್ ಹೆಸರಿರೋ ಈ ನಾಯಕ ಯಾರ್ ಗೊತ್ತ..?

You might also like

0 Comments

No Comments Yet!

You can be first to comment this post!

Leave a Reply