ಯಶ್ ಪುತ್ರನ ನಾಮಕರಣ, ಕೊನೆಗೂ ರಿವಿಲ್ ಯಾದ ಯಶ್ ಪುತ್ರನ ಹೆಸರು

ಯಶ್ ಪುತ್ರನ ನಾಮಕರಣ, ಕೊನೆಗೂ ರಿವಿಲ್ ಯಾದ ಯಶ್ ಪುತ್ರನ ಹೆಸರು

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಮಗನ ನಾಮಕರಣವನ್ನು ಮಾಡಿದ್ದಾರೆ. ಬಹುದಿನಗಳಿಂದ ಅಭಿಮಾನಿಗಳು ಕಾಯುತಿದ್ದ ರಾಕಿ ಬಾಯ್ ತಮ್ಮ ಮಗನಿಗೆ ಏನೆಂದು ಹಸರಿಡಲಿದ್ದಾರೆ ಎಂದು ಕಾತುರದಿಂದ ಕಾಯುತ್ತಿದ್ದರು. ಆದ್ರೆ ಈಗ ಆ ಗಳಿಗೆ ಕೂಡಿಬಂದಿದ್ದು ಯಶ್ ತಮ್ಮ ಮಗನಿಗೆ ಯಥರ್ವ್ ಯಶ್ ಎಂದು ನಾಮಕರಣ ಮಾಡಿದ್ದಾರೆ. ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಯಶ್ ಅವರ ಮಗನ ಹೆಸರು ಆಯುಷ್ ಎಂದು ನಾಮಕರಣ ಮಾಡಿದ್ದಾರೆ. ಎಂದು ಗುಲ್ಲು ಎದಿತ್ತು. ಈ ಬಗ್ಗೆ ತಾಯಿ ರಾಧಿಕಾ ಪಂಡಿತ್ ಈ ವಿಷಯಕ್ಕೆ ಸ್ಪಷ್ಟನೆ ನೀಡಿದ್ದು ಮಗನ ಹೆಸರು ಆಯುಷ್ ಎಂದು ಅಲ್ಲಾ ಎಂದಿದ್ರು. ಹೀಗಾಗಿ ಅಭಿಮಾನಿಗಳಲ್ಲಿ ಯಶ್ ಪುತ್ರನ ಹೆಸರು ಏನು ಎನ್ನುವ ಕುತೂಹಲ ಮತ್ತಷ್ಟು ಹೆಚ್ಚಿತ್ತು.‌..

ರಾಕಿಂಗ್ ಸ್ಟಾರ್‌’ ಯಶ್ ಮತ್ತು ರಾಧಿಕಾ ಪಂಡಿತ್‌ ದಂಪತಿಗೆ ಕಳೆದ ವರ್ಷ ಗಂಡು ಮಗು ಜನಿಸಿತ್ತು. ಮಗ ಹುಟ್ಟಿ 10 ತಿಂಗಳಾದರೂ, ಮಗನ ಹೆಸರೇನು ಎಂಬುದು ಮಾತ್ರ ಬಹಿರಂಗಗೊಂಡಿರಲಿಲ್ಲ. ಇದೀಗ ಯಶ್‌ ಸರಳವಾಗಿ ಮಗನ ನಾಮಕರಣವನ್ನು ಮಾಡಿದ್ದು, ಹೆಸರನ್ನು ತಿಳಿಸಿದ್ದಾರೆ.

ಬಹಳ ಶಾಸ್ತ್ರೋಕ್ತವಾಗಿ ನಡೆದಿರುವ ಈ ನಾಮಕರಣದಲ್ಲಿ ಕುಟುಂಬದ ಕೆಲವೇ ಕೆಲವು ಮಂದಿ ಮಾತ್ರ ಭಾಗಿಯಾಗಿದ್ದಾರೆ. ನಾಮಕರಣ ಕಾರ್ಯಕ್ರಮದ ಕ್ಯೂಟ್ ವಿಡಿಯೋ ಮಾಡಿ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಯಶ್‌ ದಂಪತಿ. ಮಗಳು ಆಯ್ರಾ ಕ್ಯೂಟ್ ಆಗಿ ತಮ್ಮನ ಹೆಸರನ್ನು ಹೇಳಿರುವುದು ಈ ವಿಡಿಯೋದಲ್ಲಿ ಗಮನಸೆಳೆಯುತ್ತಿದೆ….

Previous ನಿರ್ಲಕ್ಷ್ಯಕ್ಕೆ ಒಳಗಾದ ಪುರಾಣ ಪ್ರಸಿದ್ಧ ಶಬರಿ ಕೊಳ ಮತ್ತು ಕಬಂದ ರಾಕ್ಷಸನ ಸ್ಥಳ
Next ಬೆಲ್ ಬಾಟಮ್ ಸಿನಿಮಾ ಮಾದರಿಯಲ್ಲಿ ಕಳ್ಳತನ..!

You might also like

0 Comments

No Comments Yet!

You can be first to comment this post!

Leave a Reply