ಇಂದ್ರಜೀತ ಲಂಕೇಶ್ ಹಿಂದೇಟು ಹಾಕಿದ್ದೇಕೆ..?

ಇಂದ್ರಜೀತ ಲಂಕೇಶ್ ಹಿಂದೇಟು ಹಾಕಿದ್ದೇಕೆ..?

ಬೆಂಗಳೂರು: ಅದು ಯಾಕೋ ಗೊತ್ತಿಲ್ಲಾ ಕಳೆದ ಒಂದು ವಾರದಿಂದ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಸುದ್ದಿ ಸದ್ದು ಮಾಡುತ್ತಿದೆ‌. ಕಳೆದ ಒಂದು ವಾರದ ಹಿಂದೆ ಕೊ‌ಚೆ ತೆರೆಯ ಮರೆಗೆ ಸರಿದ್ದಿ ಈ ಸುದ್ದಿ ಮತ್ತೆ ತೆರೆಯ ಮೇಲೆ ರಾರಾಜಿಸುವಂತೆ ಮಾಡಿದ್ದು ಇಂದ್ರಜೀತದ ಲಂಕೇಶ್ ಅವರ ಹೇಳಿಕೆ ಇಂದ. ಹೌದು ಇಂದ್ರಜಿತ್ ಲಂಕೇಶ್ ಅವರು ಕಲೆ ನಟರ ಹೆಸರು ಗಳನ್ನು ವಿನಾಕಾರಣ ಈ ಡ್ರಗ್ಸ್ ಮಾಫಿಯಾದಲ್ಲಿ ಎಳೆದು ತಂದಿದ್ದಾರೆ ಎಂದು ಕಲ‌ನಟರು ಅವರ ಮೇಲೆ ಹರಿಹಾಯ್ದಿದ್ದಾರೆ. ಅಲ್ಲದೆ ದೃವಸರ್ಜಾ ಇಂದ್ರಜಿತ್ ಲಂಕೇಶ್ ಅವರ ಮೇಲೆ ದೂರು ಸಹ ನೀಡಿದ್ದಾರೆ..

ಕನ್ನಡದ ಕೆಲ ಚಿತ್ರ ನಟ ನಟಿಯರು ಡ್ರಗ್ಸ್ ಸೇವೆನೆ ಮಾಡುತ್ತಾರೆ ಎಂದು ಹೇಳಿಕೆ ಕೊಡುವ ಜೊತೆಯಲ್ಲಿ ನನ್ನ ಬಳಿ ಇದಕ್ಕೆ ಕೆಲ ಪುರಾವೆಗಳಿವೆ ಎಂದಿದ್ದರು. ಹೀಗಾಗಿ ಇಂದ್ರಜಿತ್ ಲಂಕೇಶ್ ಅವರನ್ಮು ಬೆಂಗಳೂರಿನ ಸಿಸಿಬಿ ಪೊಲೀಸರು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಆದ್ರೆ ಪೊಲೀಸ್ ಕಚೇರೊಗೆ ಬೇಟಿ ನೀಡುವ ಸಂದರ್ಭದಲ್ಲಿ ಲಂಕೇಶ್ ಅವರ ಕೈಯಲ್ಲಿ ಒಂದು ಬ್ಲ್ಯಾಕ್ ಕಲರ್ ಬ್ಯಾಗ್ ಇತ್ತು. ಅದರಲ್ಲಿ ಎಲ್ಲ ದಾಖಲೆ ಇವೆ ಎಂದಿಕೊಂಡಿದ್ದ ಜನರಿಗೆ ಅಚ್ಚರಿ ಕಾದಿದೆ. ಯಾಕೆಂದರೆ ಇಂದ್ರಜಿತ್ ಲಂಕೇಶ್ ಅವರು ಪೊಲೀಸರ ಬಳಿ ಯಾವುದೇ ದಾಖಲೆ ಕೊಟಿಲ್ಲಾ ಮೇಲಾಗಿ ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿರುವ ನಟ ನಟೊಯರ ಹೆಸರನ್ನು ಸಹ ಅವರನ್ನು ಬಹಿರಂಗ ಪಡಿಸಿಲ್ಲಾ…

ಇನ್ನು ಇಷ್ಟೊಂದು ಕಾನ್ಫಿಡೆನ್ಸ್ ನಲ್ಲಿ ಇದ್ದ ಇಂದ್ರಜಿತ್ ‌ಲಂಕೇಶ್ ಅವರು ಪೊಲೀಸ್ ಬಳಿ ಯಾವುದೇ ಮಾಹಿತಿ ನೀಡಿಲ್ಲಾ ಯಾಕೆ ಎನ್ನುವ ಅನುಮಾನ ಮೂಡುತ್ತೆ. ಇಲ್ಲಾ ಇಂದ್ರಜಿತ್ ಲಂಕೇಶ್ ಅವರ ಬಳಿ ಯಾವುದೇ ಮಾಹಿತೆಯೇ ಇಲ್ಲಾ ಕೇವಲ ಗಾಳಿಯಲ್ಲಿ ಗುಂಡು ಹೊಡೆದ್ರಾ ಎನ್ನುವ ಮಾತುಗಳು ಸಹ ಕೇಳಿ ಬಂದಿವೆ. ಇನ್ನು ಕೆಲವರು ಇಂದ್ರಜಿತ್ ಲಂಕೇಶ್ ಅವರಿಗೆ ಒತ್ತಡ ಹೇರಲಾಗಿದೆ ಹೀಗಾಗಿ ಅವರು ಯಾರ ಹೆಸರನ್ನು ಸಹ ಹೇಳಿಲ್ಲಾ, ಒಂದು ವೇಳೆ ನಾ ಹೆಸರು ಹೇಳಿದ್ರೆ ಅವರ ಮೇಲೆ ಚಾರ್ಚ್ ಶೀಟ್ ಹಾಕಲ್ಲಾ ಹೀಗಾಗಿ ಹೆಸರನ್ನು ಬಹಿರಂಗ ಪಡಿಸಿಲ್ಲಾ ಎನ್ನಲಾಗಿದೆ…

ಇತ್ತ ಲಂಕೇಶ್ ಅವರ ವಿಚಾರಣೆ ಬಳಿಕ ಸಸಂದೀಪ್ ಪಾಟೀಲ್ ಅವರು ಹೇಳಿಕೆ ನೀಡಿದ್ದು , ಇಂದ್ರಜಿತ್ ನೀಡಿದ ಮಾಹಿತಿ ಆಧರಿಸಿ, ನಾವು ವಿಚಾರಣೆ ನಡೆಸುತ್ತೇವೆ, ಇನ್ನೆರಡು ದಿನ ಇಂದ್ರಜಿತ್ ಗೆ ಸಾಕ್ಷ್ಯಾಧಾರ ಸಲ್ಲಿಸಲು ಸಮಯಾವಕಾಶ ನೀಡಿರುವುದಾಗಿ ತಿಳಿಸಿದ್ದಾರೆ.

Previous ರಂಭಾಪುರಿ ಶ್ರೀಗಳಿಗೆ ಕರೋನಾ ಸೋಂಕು ದೃಡ
Next ಚೀನಾ ಮಗ್ಗುಲು ಮುರಿಯೋಕೆ ಮಾಸ್ಟರ್ ಪ್ಲ್ಯಾನ್..

You might also like

0 Comments

No Comments Yet!

You can be first to comment this post!

Leave a Reply