ರಾಗಿಣಿ ಸಿಸಿಬಿ ಪೊಲೀಸರ ಮುಂದೆ ಬಾಯಿ ಬಿಟ್ಟ ಸತ್ಯವೇನು.?

ರಾಗಿಣಿ ಸಿಸಿಬಿ ಪೊಲೀಸರ ಮುಂದೆ ಬಾಯಿ ಬಿಟ್ಟ ಸತ್ಯವೇನು.?

ಬೆಂಗಳೂರು-

 ಈ ಹಿಂದೆಯೂ ಚಿತ್ರನಟಿ ರಾಗಣಿ ಹೆಸರು ಡ್ರಗ್ಸ್ ಮಾಫಿಯಾದಲ್ಲಿ ಕೇಳಿಬಂದಿತ್ತು. ಆದ್ರೆ ಈಗ ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾದ ಘಾಟು ನಟಿ ರಾಗಿಣಿ ಬಂಧನ ಸಾದ್ಯತೆಯನ್ನು ಹೆಚ್ಚಿಸಿದೆ. ಇಂದು ಬೆಳಗಿನ ಜಾವ ರಾಗಿಣಿ ಮನೆಗೆ ಬೇಟಿ ನೀಡಿದ ಸಿಸಿಬಿ ಪೊಲೀಸ್ ಮನೆಯನ್ನು ಜಾಲಾಡಿದ್ದಾರೆ ರಾಗಿಣಿ ಮನೆ ಮೇಲೆ ಬೆಳಗ್ಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿ, ನಟಿಯನ್ನು ಕಚೇರಿಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಕಚೇರಿಗೆ ಕರೆತಂದ ಬಳಿಕ ಸಿಸಿಬಿ ಅಧಿಕಾರಿಗಳು ರಾಗಿಣಿಗೆ ಕೊಂಚ ಸುಧಾರಿಸಲು ಸಮಯಾವಕಾಶ ಕೊಟ್ಟು ವಿಚಾರಣೆಗೆ ಒಳಪಡಿಸಿದ್ದಾರೆ.

 ಮತ್ತೊಂದೆಡೆ ಸದ್ಯ ಸಿಸಿಬಿ ಕಚೇರಿಯಲ್ಲಿ ಹಿರಿಯಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕೂಡ ನಡೆದಿದ್ದು, ರಾಗಿಣಿ ವಿಚಾರಣೆಯಲ್ಲಿ ಯಾವ ರೀತಿ ಪ್ರಶ್ನೆ ಕೇಳಬೇಕು. ರಾಗಿಣಿಯನ್ನ ಯಾವ ರೀತಿ ವಿಚಾರಣೆಗೆ ಒಳಪಡಿಸಬೇಕು ಅನ್ನೋದರ ಕುರಿತು ಸಿಸಿಬಿ ಅಧಿಕಾರಿಗಳು ಪಕ್ಕಾ ಪ್ಲಾನ್ ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

 ಸಿಸಿಬಿ ಪೊಲೀಸರು ಈಗಾಗಲೇ ರಾಗಿಣಿ ಆಪ್ತ ರವಿಶಂಕರ್ ಬಳಿಯಿಂದ ಮಹತ್ತರ ವಿಚಾರಗಳನ್ನ ಕಲೆ ಹಾಕಿದ್ದಾರೆ. ಆತನ ಹೇಳಿಕೆ ಮೆರೆಗೆ ನಟಿ ರಾಗಿಣಿಯನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ರಾಗಿಣಿಗೆ ಪ್ರಶ್ನೆಗಳ ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ.

Previous ನೂರು ಜನರ ಹೆರಗಿ ಮಾಡಿ ಜನರ ಮೆಚ್ಚುಗೆಗೆ ಪಾತ್ರವಾದ ಆಸ್ಪತ್ರೆ.
Next ರಾಗಿಣಿ ಪೊಲೀಸ್ ಬಲೆಯಿಂದ ತಪ್ಪಿಸಿಕೊಳ್ಳಲು ಮಾಡಿದ ಪ್ಲ್ಯಾನ್ ಟುಸ್ಸ್

You might also like

0 Comments

No Comments Yet!

You can be first to comment this post!

Leave a Reply