ನಮಗೂ ಇಂಥಾ ಮಾಸ್ತರ ಬೇಕು..!

ನಮಗೂ ಇಂಥಾ ಮಾಸ್ತರ ಬೇಕು..!

ಧಾರವಾಡ… ಕರೋನಾ ಮಾಹಾ ಮಾರಿ ಜನರ ಜೀವನವನ್ನು ಕಿತ್ತು ತಿಂದಿದೆ. ಒಂದು ಕಡೆ ಆರ್ಥಿಕ ಹಿಂಜರಿತ ಇನ್ನೊಂದು ಕಡೆ ಬಡತನ. ಹೀಗಿರುವಾಗ ಆನ್ ಲೈನ್ ಕ್ಲಾಸ್ ನಲ್ಲಿ ಪಾಟ ಕೇಳಿಸಿಕೊಳ್ಳೊದು ನಮ್ಮ ಹಳ್ಳಿ ಪ್ರದೇಶದ ಮಕ್ಕಳಿಗೆ ಮರಿಚಿಕೆಯೇ ಸರಿ. ಆದ್ರೆ ಇಲ್ಲೊಬ ಯುವಕ
ಶಾಲೆ ಬಾಗಿಲು ಹಾಕಿದ ಹಿನ್ನೆಲೆಯಲ್ಲಿ ಮಕ್ಕಳಿಗೆ ‌ಮನೆ ಪಾಠ ಮಾಡುವ ಮೂಲಕ ಮಕ್ಕಳ ನೆಚ್ಚಿನ ಟೀಚರ್ ಆಗಿದ್ದಾನೆ

.

ಒಂದು ಕಡೆ ಮನೆಯ ಯಜಮಾನರಿಗೆ ದುಡಿಯಲು ಕೆಲಸ ಇಲ್ಲಾ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ಗೆ ಕಳಿಸುವಷ್ಟು ಸಂಪಾದನೆಯೂ ಇಲ್ಲಾ. ಹೀಗಾಗಿ ಬಡತನ ಅರಿವಿರುವ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಮಿಶ್ರಿಕೋಟೆಯ ನಿವಾಸಿ ಈರಪ್ಪ ನಾಯ್ಕರ ಮಕ್ಕಳಿಗೆ ಉಚಿತವಾಗಿ ಮನೆ ಪಾಠ ಮಾಡಿ ಮಕ್ಕಳಿಗೆ ನೆಚ್ಚಿನ ಶಿಕ್ಷಕನಾಗಿದ್ದಾನೆ.

ಕೊರೋನಾ ವೈರಸ್ ಲಾಕ್ ಡೌನ್ ಪರಿಣಾಮ ಶಾಲೆಗಳ ಬಾಗಿಲು ಬಂದ್ ಆಗಿ ಆನ್ಲೈನ್ ಶಿಕ್ಷಣ ಜಾರಿಯಾಯ್ತು ಮೊಬೈಲ್ ಇಲ್ಲದವರಿಗೆ ಸರ್ಕಾರ ವಿದ್ಯಾಗಮ ಯೋಜನೆ ಜಾರಿಗೆ ತಂದರು ಮಕ್ಕಳಿಗೆ ಶಿಕ್ಷಣ ಪಡೆಯದ ಕಾರಣ ಬೆಳಿಗ್ಗೆ ಸಂಜೇ ಎರಡು ಹೊತ್ತು ಮನೆಪಾಠ ಕೇಳಲಿಕ್ಕೆ ಓಡೋಡಿ ಬರುವಂತೆ ಮಾಡಿದವನೇ ಈರಪ್ಪ ನಾಯ್ಕರ.

ಹುಬ್ಬಳ್ಳಿಯ ಕನಕದಾಸ ಶಿಕ್ಷಣ ಸಮಿತಿ ವಿಜಯನಗರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈರಪ್ಪ ನಾಯ್ಕರ. ಪ್ರಥಮ ವರ್ಷದ ಬಿ.ಇಡಿ ಮುಗಿಸಿದ್ದಾರೆ.ಕಾಲೇಜ್ ರಜೆ ಇರುವ ಕಾರಣ, ಮಿಶ್ರೀಕೊಟಿ ಗ್ರಾಮದ ಮಕ್ಕಳಿಗೆ ಉಚಿತವಾಗಿ ಮನೆ ಪಾಠದ ಶಿಕ್ಷಣದ ಜೊತೆ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಕಲಿಸುತಿದ್ದಾರ.‌ ಸಂಗೀತ ಹಾಡು ಹೀಗೆ ಮಕ್ಕಳಿಗೆ ಮನೆ ಪಾಠ ಬೇಸರವಾಗದ ರೀತಿಯಲ್ಲಿ ಪಾಠ ಮಾಡುವ ಮೂಲಕ ಹಳ್ಳಿಯ ನೆಚ್ಚಿನ ಶಿಕ್ಷಕ ಎನಿಸಿದ್ದಾರ.‌ ಕೊರೋನಾ ವೈರಸ್ ಮುಂಜಾಗ್ರತಾ ಕ್ರಮ ಸಾಮಾಜಿಕ ಅಂತರ ನಿಯಮದಂತೆ ಒಂದು ಬಾರಿ ಮೂರು ಮಕ್ಕಳಿಗೆ ಪಾಠ ಮಾಡುವ ಮೂಲಕ ಮುಂಜಾಗ್ರತೆ ವಹಿಸಿದ್ದಾರೆ.

Previous ಭಾರತದ ರಾಫೆಲ್ ಗೆ ಗಂಡಾತರ...!
Next ರಾಕಿಂಗ್ ಸನ್ ಡಿಫರಂಟ್ ನೇಮ್..!

You might also like

0 Comments

No Comments Yet!

You can be first to comment this post!

Leave a Reply