ಗೋಂದಿ ಯೋಜನೆ ಅಡಿ ಕೆರೆಗಳಿಗೆ ನೀರು

ಗೋಂದಿ ಯೋಜನೆ ಅಡಿ ಕೆರೆಗಳಿಗೆ ನೀರು

ಚಿಕ್ಕಮಗಳೂರು-

 ಜಿಲ್ಲೆಯಲ್ಲಿ ಗೋಂದಿ ಯೋಜನೆಯಡಿ ರೂ. ೧೩೫೦ ಕೋಟಿ ವೆಚ್ಚದಲ್ಲಿ ಕಡೂರು, ತರೀಕೆರೆ, ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಹೋಬಳಿಯ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಪ್ರವಾಸೋದ್ಯಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಅವರು ಹೇಳಿದರು.

 ಕಳೆದ ವರ್ಷದಿಂದ ಕಳಸಾಪುರ ಕೆರೆಗೆ ಮೋಟರ್ ಪೈಪ್‌ಲೈನ್ ಮೂಲಕ ನೀರು ಹಾಯಿಸಲಾಗುತ್ತಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ೧೨೮ ಹೆಚ್‌ಪಿ ಮೋಟರ್ ಮೂಲಕ ನೀರು ಹಾಯಿಸಿ ಕೆರೆ ತುಂಬಿಸಲಾಗಿದೆ ಹಾಗೂ ರೂ. ೯.೫೦ ಕೋಟಿ ವೆಚ್ಚದಲ್ಲಿ ಎರಡನೇ ಹಂತದ ಕರಗಡ ಯೋಜನೆಗೆ ಮಂಜೂರಾತಿ ದೊರೆತಿದ್ದು ಟೆಂಡರ್ ಪ್ರಕ್ರಿಯೆ ಆಗಿದೆ ಎಂದರು.

 ಹಳೇಬೀಡು ಹಾಗೂ ಬೆಳವಾಡಿ ಕೆರೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ರೂ ೧೨೫ ಕೋಟಿ ವೆಚ್ಚದ ರಣಘಟ್ಟ ಯೋಜನೆಗೆ ಡಿಪಿಆರ್ ತಯಾರಾಗಿದ್ದು ಸಂಪುಟದಲ್ಲಿ ಅನುಮೋದನೆ ಬಾಕಿ ಇದೆ ಎಂದ ಅವರು ಬೈರಾಪುರ ಪಿಕಪ್‌ನಿಂದ ದಾಸರಹಳ್ಳಿ ಹಾಗೂ ಲಕ್ಯಾ ಹೋಬಳಿಯ ಮಾದರಸನ ಕೆರೆಗೆ ನೀರು ತುಂಬಿಸುವ ಯೋಜನೆಗೆ ರೂ. ೨೦ ಕೋಟಿ ಹಣಕ್ಕೆ ಮಾರ್ಚ್ ತಿಂಗಳಿನಲ್ಲೇ ಅನುಮೋದನೆ ದೊರೆತಿದ್ದು  ಅದರ ಟೆಂಡರ್ ಪ್ರಕ್ರಿಯೆ ಬಾಕಿಯಿದೆ ಎಂದು ತಿಳಿಸಿದರು.

 ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಉತ್ತಮ ಹದವಾದ ಮಳೆಯಾಗಿದ್ದು ಕೃಷಿ ಚಟುವಟಿಕೆಗಳು ಚುರುಕಾಗಿ ಜೋಳ, ರಾಗಿ, ಕಡಲೆ, ಈರುಳ್ಳಿ ಮುಂತಾದ ಬೆಳೆಗಳು ಸಮೃದ್ಧಿಯಾಗಿ ಬಂದಿದೆ ಹಾಗೂ ಕೆರೆ ಸೇರಿದಂತೆ ನದಿ ಮೂಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿದ್ದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಬೋರ್‌ವೆಲ್‌ಗಳು ಸುಸ್ಥಿಯಲ್ಲಿರಲಿವೆ ಎಂದು ಹೇಳಿದರು.

Previous ತಂಬಾಕು ಮಾರಾಟಗಾರರಿಗೆ ಪ್ರತ್ಯೇಕ ಉದ್ಯಮ ಪರವಾನಿಗೆ
Next ವಿಶೇಷಚೇತನರಿಗೆ 9 ತಿಂಗಳಿಂದ ಸಿಗದ ಮಾಸಾಶನ

You might also like

0 Comments

No Comments Yet!

You can be first to comment this post!

Leave a Reply