ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದ ವಿಶ್ವಕರ್ಮ ಗುರುಗಳು ಸಮಾಜಕ್ಕೆ ಮಾದರಿ

ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದ ವಿಶ್ವಕರ್ಮ ಗುರುಗಳು ಸಮಾಜಕ್ಕೆ ಮಾದರಿ

ಚಿಕ್ಕಮಗಳೂರು-

 ವಿವಿಧ ಪಂಚಕಸುಬುಗಳಲ್ಲಿ ನೈಪುಣ್ಯತೆ ಹೊಂದಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದ ವಿಶ್ವಕರ್ಮ ಗುರುಗಳು ತಾಂತ್ರಿಕತೆ ಪಿತಾಮಹರೆನಿಸಿಕೊಳ್ಳುವ ಮೂಲಕ ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ಹೇಳಿದರು.

 ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಶ್ರೀ ವಿಶ್ವಕರ್ಮ ಗುರುಗಳ ಜಯಂತಿ ಕಾರ್ಯಕ್ರಮವನ್ನು ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿಶ್ವಕರ್ಮ ಗುರುಗಳು ತಾಂತ್ರಿಕತೆಯ ಪಿತಾಮಹ, ನಾಗರೀಕತೆಯು ಪ್ರವರ್ಧಮಾನಕ್ಕೆ ಬರಲು ತಂತ್ರಜ್ಞಾನ ತುಂಬಾ ಪ್ರಾಮುಖ್ಯತೆ ಹೊಂದಿದ್ದು ಚಿನ್ನ, ಬೆಳ್ಳಿ, ಮರಗೆಲಸ, ಕಬ್ಬಿಣ, ಎರಕದಂತಹ ಪಂಚ ಕಸುಬುಗಳಲ್ಲಿ ಕಲಾನೈಪುಣ್ಯತೆ ಹೊಂದಿ ತಾಂತ್ರಿಕತೆಯ ಪಿತಾಮಹರೆನಿಸಿಕೊಳ್ಳುವ ಮೂಲಕ ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

 ಇತಿಹಾಸದ ಕಾಲಘಟ್ಟಗಳನ್ನು ಅಧ್ಯಯನ ಮಾಡಿದಲ್ಲಿ ದೇಶದಲ್ಲಿ ಶಾಸ್ತ್ರೋಕ್ತವಾಗಿ ನಿರ್ಮಿತಗೊಂಡಿರುವ ಬಹುತೇಕ ಪ್ರಸಿದ್ದ ದೇವಾಲಯಗಳಾದ ಬದಾಮಿ, ಹಂಪಿ, ಬೇಲೂರು, ಹಳೇಬೀಡು., ಅಜಂತಾ, ಎಲ್ಲೋರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಪೂರ್ವಜರ ತಾಂತ್ರಿಕ ಕಲಾಪರಂಪರೆಯ ನೈಪುಣ್ಯತೆ ಕಂಡು ಬರುತ್ತದೆ ಇದು ಅವರಲ್ಲಿನ ತಾಂತ್ರಿಕ ಕಲಾಸಕ್ತಿಯನ್ನು ತೋರುತ್ತದೆ ಎಂದರು.

 ಪೂರ್ವಿಕರ ತಂತ್ರಜ್ಞಾನ ಪ್ರಾವೀಣ್ಯತೆಗೆ ೨ ಸಾವಿರ ವರ್ಷಗಳ ಹಿಂದೆ ದೆಹಲಿಯಲ್ಲಿ ನಿರ್ಮಿತಗೊಂಡಿರುವ ಕಬ್ಬಿಣದ ಸ್ಥಂಭ ಇಂದಿಗೂ ತುಕ್ಕು ಹಿಡಿಯದೇ ಇರುವುದು ತಾಂತ್ರಿಕತೆಗೆ ಸಾಕ್ಷಿಯಾಗಲಿದೆ ವಿಶ್ವಕರ್ಮರು ಇಂತಹ ಕ್ಷೇತ್ರಗಳಲ್ಲಿ ಅಪಾರ ನೈಪುಣ್ಯತೆ ಹೊಂದಿ ಅದ್ವಿತೀಯ ಸಾಧನೆ ಮಾಡುವ ಮೂಲಕ ತಂತ್ರಜ್ಞಾನದ ಪಿತಾಮಹರೆನಿಸಿಕೊಂಡಿದ್ದಾರೆ. ಕೋವಿಡ್-೧೯ ಸಾಂಕ್ರಾಮಿಕ ರೋಗದ ಹಿನ್ನೆಲೆ ರಾಜ್ಯಾದ್ಯಂತ ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದ್ದು ಅವರ ತಾಂತ್ರಿಕ ಕಲಾ ಬದುಕು ಇಂದಿನ ಸಮಾಜಕ್ಕೆ ಮಾದರಿಯಾಗಲಿದೆ ಎಂದರು.

Previous ವಿಜಯನಗರ ಪ್ರತ್ಯೇಕ ಜಿಲ್ಲೆ ವಿಚಾರ: ಹೊಸ ಸುಳಿವು ನೀಡಿದ ಆನಂದ್ ಸಿಂಗ್
Next ಸಿಎಂ ಬದಲಾವಣೆ ಎಂಬುವುದು ಮಾಧ್ಯಮದ ಸೃಷ್ಟಿ:ಸಚಿವ ಜಗದೀಶ್ ಶೆಟ್ಟರ್

You might also like

0 Comments

No Comments Yet!

You can be first to comment this post!

Leave a Reply