ಹಡಗಲಿ ಸೇತುವೆ ದಿಢೀರನೆ ಕುಸಿತ ಕಾರು ಜಖಂ, ಸಂಪರ್ಕ ಕಡಿತ

ಹಡಗಲಿ ಸೇತುವೆ ದಿಢೀರನೆ ಕುಸಿತ ಕಾರು ಜಖಂ, ಸಂಪರ್ಕ ಕಡಿತ

ಬಳ್ಳಾರಿ-

ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೊದ್ಲಗಟ್ಟೆ ಆಂಜನೇಯಸ್ವಾಮಿ ದೇಗುಲದ ಬಳಿಯ ತುಂಗಭದ್ರಾ ಜಲಾಶಯಕ್ಕೆ ಕಟ್ಟಲಾಗಿರುವ ಸೇತುವೆ ಇಂದು ಬೆಳಗಿನ ಜಾವ ದಿಢೀರನೆ ಜಖಂಗೊಂಡಿದೆ. ಜಿಲ್ಲೆಯ ಹಡಗಲಿ  ಗದಗ ಮಾರ್ಗದಲ್ಲಿರುವ ಈ ಬ್ರಿಡ್ಜ್ ನ ಮಧ್ಯೆ ಭಾಗದಲ್ಲಿ ಎಕಾಏಕಿ ಕಂದಕ ಸೃಷ್ಠಿಯಾಗಿ ಭಾರೀ ಬಿರುಕು ಬಿಟ್ಟ ಪರಿಣಾಮ ಲಾರಿ ಮತ್ತು ಕಾರುಗಳು ಜಖಂಗೊಂಡಿವೆ.

2002 ನೇಯ ಇಸವಿಯಲ್ಲಿ ನಿರ್ಮಾಣಗೊಂಡಿದ್ದ ಈ ಬ್ರಿಡ್ಜ್ ಸಾಕಷ್ಟು ಶಿಥಿಲಾವಸ್ತೆಯಲ್ಲಿದ್ದರೂ ಕೂಡ ಲೋಕೋಪಯೋಗಿ ಇಲಾಖೆ ಮಾತ್ರ ಇತ್ತ ಗಮನಹರಿಸಿರಲಿಲ್ಲ. ಈ ಬ್ರಿಡ್ಜ್ ಪುನರ್  ನವೀಕರಣದ ಬಗ್ಗೆ ಅನೇಕ ಬಾರಿ ದೂರು ಸಲ್ಲಿಸಿದ್ದರೂ ಸಹ ಕ್ಯಾರೇ ಎಂದಿರಲಿಲ್ಲ. ಇಂದು ಬೆಳ್ಳಂಬೆಳಿಗ್ಗೆ ಬ್ರಿಡ್ಜ್ ಕುಸಿದಿದ್ದು ಲಾರಿ ಮತ್ತು ಕಾರು ಜಖಂಗೊಂಡಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಳಗಿನ ಜಾವ ಆಗಿದ್ದರಿಂದ ಸಂಚಾರ ಕಡಿಮೆ ಇತ್ತು.ಹೀಗಾಗಿ, ದೊಡ್ಡಮಟ್ಟದ ಅವಘಡ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇನ್ನೂ ಈ ಘಟನೆಯ ನಂತರ ಲೋಕೋಪಯೋಗಿ ಇಲಾಖೆಯ ಇಂಜನಿಯರ್ ಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Previous ವಿಶೇಷಚೇತನರಿಗೆ 9 ತಿಂಗಳಿಂದ ಸಿಗದ ಮಾಸಾಶನ
Next ಸರ್ಕಾರಿ ವಸತಿ ಶಾಲೆಯ ಹೊರಗುತ್ತಿಗೆ ನೌಕರರ ಸೇವೆಯನ್ನ ಕಾಯಂಗೊಳಿಸಲು ಮನವಿ

You might also like

0 Comments

No Comments Yet!

You can be first to comment this post!

Leave a Reply