ಭಾರತದ ರಾಫೆಲ್ ಗೆ ಗಂಡಾತರ…!

ಭಾರತದ ರಾಫೆಲ್ ಗೆ ಗಂಡಾತರ…!

ನೆಲದಲ್ಲಿ ಕೊಳೆತು ನಾರುವ ಕಸಕ್ಕೂ ಆಕಶದಲ್ಲಿ ಹಾರಾಡುವ ರಾಫೆಲ್ ಗೆ ಸಂಬಂಧ ಇದಿಯಾ..?
ಭಾರತೀಯ ವಾಯು ಪಡೆಗೆ ಕಳೆದ ತಿಂಗಳಲ್ಲಿ ಸೇರ್ಪಡೆಯಾದ ರಾಫೆಲ್ ಯುದ್ದ ವಿಮಾನಗಳು ದೇಶದ ವಾಯುಪಡೆಗೆ ಭಾರಿ ಬಲವನ್ನೇ ತಂದಿದೆ. ಜತೆಗೆ, ನೆರೆ ರಾಷ್ಟ್ರಗಳಲ್ಲಿ ಭೀತಿಯನ್ನು ಮೂಡಿಸಿದೆ. ಅಂಥ ವಿಮಾನಗಳಿಗೆ ಈಗ ಈಗ ಗಂಡಾಂತರ ಎದುರಾಗಿದೆ. ಗಂಡಾತರ ಎದುರಾಗಿದ್ದು ವಾಯು ನಲೆಯ ಅಲ್ಲ ಪಕ್ಕದಲ್ಲಿ ಒರುವ ಕಸದಾ ರಾಶಿಯಿಂದ.

ಹೌದು…! ವಿಮಾನಗಳಿಗೆ ಎದುರಾಗಿರುವ ಗಂಡಾತರದ ಬಗ್ಗೆ ಸ್ವತಃ ಭಾರತೀಯ ವಾಯಪಡೆ ಕೂಡ ಆಕ ವ್ಯಕ್ತಪಡಿಸಿದೆ. ಸೇನೆಯ ಪರಿವೀಕ್ಷಣೆ ಹಾಗೂ ಸುರಕ್ಷತಾ ವಿಭಾಗದ ಮಹಾ ನಿರ್ದೇಶಕ ಏರ್​ ಮಾರ್ಷಲ್​ ಮಾನವೇಂದ್ರ ಸಿಂಗ್​ ಅವರು ಹರಿಯಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೇಸ್ನಿ ಆನಂದ್​ ಅರೋರಾ ಅವರಿಗೆ ಪತ್ರ ಬರೆದಿದ್ದಾರೆ. ಅಂಬಾಲ ವಾಯು ನೆಲೆಯ ಸುತ್ತಲಿನ ಪ್ರದೇಶದಲ್ಲಿ ಕಸದ ರಾಶಿ ಹೆಚ್ಚಾಗಿರುವುದು ಇಲ್ಲಿ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡಬರಲು ಕಾರಣವಾಗಿದೆ.

ಯುದ್ದ ವಿಮಾನಗಳು ಹಾರಾಡುವ ಸಂದರ್ಭದಲ್ಲಿ ಹಕ್ಕಿಗಳು ವಿಮಾನದಲ್ಲಿ ಸಿಲುಕಿಕೊಂಡ ಯುದ್ದ ವಿಮಾನಕ್ಕೆ ಸಾಕಷ್ಟು ಹಾನಿ ಮಾಡುವ ಸಂಭವ ಹೆಚ್ಚಾಗಿದೆ. ಹೀಗಾಗಿ ವಾಯು ನೆಲಯ ಸುತ್ತಲಿನ ಕಸದ ರಾಸಿ ಇಂದಾಗ ಈ ಪ್ರದೇಶದಲ್ಲಿ ಹೆಚ್ಚಾಗಿ ಹಕ್ಕಿಗಳ ಹಾರಾಟ ಹೆಚ್ಚಾಗಿದೆ . ಹೀಗಾಗಿ ಯುದ್ಧ ವಿಮಾನಗಳಿಗೆ ಹಾರಾಟ ನಡೆಸಲು ತೊಂದರೆ ಉಂಟಾಗಿದೆ. ಯುದ್ಧ ವಿಮಾನಗಳನ್ನು ಸುರಕ್ಷಿತವಾಗಿಡಲು ಸಣ್ಣ ಹಾಗೂ ದೊಡ್ಡ ಪಕ್ಷಿಗಳನ್ನು ವಾಯುನೆಲೆ ಪ್ರದೇಶದಿಂದ ದೂರವಿಡುವುದು ಅತ್ಯಂತ ಅಗತ್ಯವಾಗಿದೆ. ಹೀಗಾಗಿ ಸುತ್ತಲಿನ ಪ್ರದೇಶದಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ತ್ಯಾಜ್ಯನೀರು ಸಂಸ್ಕರಣಾ ಘಟಕ ಸ್ಥಾಪಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಪ್ರತಿ ವರ್ಷ ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲಿ ನಡೆಯುವ ಏರ್ ಶೋ ನಡೆದಾಗಲೂ ವಾಯು ನೆಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿನ ಕಸದ ರಾಶಿಯನ್ನು ಸ್ವಚ್ಛ ಮಾಡಿ ಅಲ್ಲಿ ಹಕ್ಕಿಗಳ ಹಾರಾಟ ನಡೆಸದ ರೀತಿಯಲ್ಲಿ ನೋಡಿಕೊಳ್ಳಲಾಗುತ್ತೆ.‌ ಮೇಲಾಗಿ ಈ ಪ್ರದೇಶದಲ್ಲಿ ಮಾಂಸ ಮಾರಾಟವನ್ನು ನಿಷೇಧ ಮಾಡಿ ಮಾಂಸ ತಿನ್ನಲು ಹಕ್ಕಿಗಳು ಬರುವ ಸಾದ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಕಟ್ಟು ನಿಟ್ಟಿನ ಕ್ರಮ ಕೈ ಗೊಳ್ಳಲಾಗುತ್ತೆ….

Previous ಭಾರತೀಯ ಮಾರುಕಟ್ಟೆಯ ಮೇಲೆ ಕಣ್ಣಿಟ್ಟ ಆ್ಯಪಲ್...!
Next ನಮಗೂ ಇಂಥಾ ಮಾಸ್ತರ ಬೇಕು..!

You might also like

0 Comments

No Comments Yet!

You can be first to comment this post!

Leave a Reply