ರಾಗಿಣಿಗೂ ಬಿಜೆಪಿಗೂ ಸಂಬಂಧ ‌ಇಲ್ಲಾ.

ರಾಗಿಣಿಗೂ ಬಿಜೆಪಿಗೂ ಸಂಬಂಧ ‌ಇಲ್ಲಾ.

ಚಿಕ್ಕಮಗಳೂರು-

 ನಟಿ ರಾಗಿಣಿ ದ್ವಿವೇದಿಗೆ ಬಿಜೆಪಿಯಲ್ಲಿ ನೇರವಾಗಿ ಯಾವುದೇ ಜವಾಬ್ದಾರಿ ಇಲ್ಲ. ಪಕ್ಷಕ್ಕೂ ಅವರಿಗೂ ಸಂಬಂಧವೇ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ‌ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಗಿಣಿ ಒಬ್ಬ ನಟಿ , ಅವಳು ಬಿಜೆಪಿ ನಾಯಕರ ಜೊತೆ ಗುರುತಿಸಿಕೊಂಡಿದ್ದಾರೆ. ಹೊರತು ಅವರು ಬಿಜೆಪಿ ಪಕ್ಷದಲ್ಲಿ ಇಲ್ಲಾ ಅವಳಿಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲಾ ಎಂದು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಯಾರ ಒತ್ತಡಕ್ಕೂ ಮನಿಯಲ್ಲಾ.‌ ತಪ್ಪು ಯಾರೇ ಮಾಡಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ ಎಂಬುದಕ್ಕೆ ತನಿಖೆ ಧಾಟಿಯೇ ಸಾಕ್ಷಿ. ರಾಜಿ ಮಾಡಿಕೊಂಡು ಅವರ ಜತೆಯೇ ಅಡ್ಜಸ್ಟ್‌ಮೆಂಟ್‌ ಮಾಡಿಕೊಂಡು ರಾಜಕಾರಣ ಮಾಡಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು’ ಎಂದರು. ರಾಜ್ಯದಲ್ಲಿ ಡ್ರಗ್ ಪ್ರಕರಣ ಹೊಸದಲ್ಲ. ಆದರೆ, ತನಿಖೆಯನ್ನು ಇಷ್ಟು ಗಂಭೀರವಾಗಿ ಪರಿಗಣಿಸಿರುವುದು ಇದೇ ಮೊದಲು. ತನಿಖೆ ಎಳೆ ಯಾರ್ ಯಾರ ಮನೆ ಬಾಗಿಲಿಗೆ ಒಯ್ಯುತ್ತದೋ ಗೊತ್ತಿಲ್ಲ.

Previous ಕೋವಿಡ್-19 ಪರೀಕ್ಷಿಸಿಕೊಳ್ಳಿ , ಅಪಪ್ರಚಾರಕ್ಕೆ ಕಿವಿಗೊಡಬೇಡಿ.
Next ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಸಹಾಯಕ್ಕೆ ದಾವಿಸಿದ ಹಳೆಯ ವಿದ್ಯಾರ್ಥಿಗಳು

You might also like

0 Comments

No Comments Yet!

You can be first to comment this post!

Leave a Reply