ಜಿಂದಾಲ್ ‌ನೌಕರನ ಏಕಾಂಗಿ ಹೋರಾಟ

ಜಿಂದಾಲ್ ‌ನೌಕರನ ಏಕಾಂಗಿ ಹೋರಾಟ

ಬಳ್ಳಾರಿ-

ಜಿಂದಾಲ್ ಲಾಕ್ ಡೌನ್ ನೆಪ ಒಡ್ಡಿ ತನ್ನ ನೂರಾರು ನೌಕರರನ್ನು‌ ಕೆಲಸದಿಂದ ಹೊರ ಹಾಕಿದ್ದಾರೆ. ಕಳೆದ ಐದು ವರ್ಷಗಳಿಂದ ಜಿಂದಾಲ್ ನಲ್ಲಿ ಕಲೆಸ ಮಾಡಿದ್ದ ನೌಕರನನ್ನು ಜಿಂದಾಲ್ ಸಂಸ್ಥೆ ಈಗ ಹೊರಹಾಕಿದೆ. ಈ ಸಂಬಂಧ ಇಂದು ಒಬ್ಬ ನೌಕರ ನ್ಯಾಯಕ್ಕಾಗಿ ಆಗ್ರಹಿಸಿ JSW ನ ಮುಖ್ಯ ದ್ವಾರದ ಮುಂದೆ ಏಕಾಂಗಿ ಹೋರಾಟ ನಡೆಸಿದ್ದಾರೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ಮೂಲದ ಪ್ರಕಾಶ್ ಕಿಚಡಿ ಹೀಗೆ ಏಕಾಂಗಿ ಹೋರಾಟ ಮಾಡಿದ ಕಾರ್ಮಿಕ.

ಈತ ಕಳೆದ ಐದು ವರ್ಷಗಳಿಂದ ‌ಜಿಂದಾಲ್ ಸಮೂಹ ಸಂಸ್ಥೆಯಲ್ಲಿ ಕಲಸ ಮಾಡಿದ್ದ. ಆದ್ರೆ ಸಂಸ್ಥೆ ಈಗ ಏಕಾಏಕಿ ಕೆಲಸದಿಂದ ತೆಗೆದು ಹಾಕಿದೆ. ಹೀಗಾಗಿ ನನ್ನ ಜೀವನ ವನ್ನು ಉಳಿಸಿ ಎಂಬ ನಾಮ ಪಾಲಕ ಹಿಡಿದು ಪ್ರತಿಭಟನೆ ಮಾಡಿದ್ದಾರೆ.‌ನಾಲ್ಕೈದು ದಿನಗಳ ಹಿಂದೆಯಷ್ಟೇ ಬಳ್ಳಾರಿ ಜಿಲ್ಲಾಧಿಕಾರಿ ಕಛೇರಿ ಎದುರು ಕೆಲಸ ಕಳೆದುಕೊಂಡ ನೌಕರರು ಪ್ರತಿಭಟನೆ ನಡೆಸಿದ್ದರು . ಬಹುಶಃ ಸರಕಾರ ಮತ್ತು ಕಾರ್ಮಿಕ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗೆಯೇ ಮುಂದುವರೆದರೆ ಬಹುತೇಕ ಕುಟುಂಬಗಳು ಬೀದಿಪಾಲಾಗಲಿವೆ.‌ ಕೊರೋನಾ ಕಾಲದಲ್ಲಿ ಕಾರ್ಮಿಕರ ಜೊತೆ ನಿಲ್ಲಬೇಕಾದ ಸರಕಾರ, ಸ್ಥಳೀಯ ಸಂಸದರು, ಶಾಸಕರು ಮೌನವಹಿಸಿದ್ದು ದುರಂತ.

Previous ಸಾವಿನ ಪ್ರಮಾಣ ಇಳಿಕೆಯತ್ತ ಗಮನಹರಿಸಿ, ಹಾಸಿಗೆ ಕೊರತೆಯಾಗದಂತೆ ನೋಡಿಕೊಳ್ಳಿ
Next ಕಟ್ಟಡ ತ್ಯಾಜ್ಯ, ಮಣ್ಣು ಹಗಲು ಸಾಗಾಟ ಮಾಡಿದರೆ ಲೈಸನ್ಸ್ ರದ್ದು

You might also like

0 Comments

No Comments Yet!

You can be first to comment this post!

Leave a Reply