ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಜಿ.ಪಂ. ಅಧ್ಯಕ್ಷೆ

ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಜಿ.ಪಂ. ಅಧ್ಯಕ್ಷೆ

ಕಲಬುರಗಿ-

 ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿಯರು ಹಾಗೂ ಮಕ್ಕಳಿಗೆ ಅಂಗನವಾಡಿ ಕೇಂದ್ರದಿಂದ ಸರಿಯಾಗಿ ಮೊಟ್ಟೆ ವಿತರಣೆಯಾಗುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರು ಕಲಬುರಗಿ ತಾಲೂಕಿನ ತಾವರಗೇರಾ, ಕೇರೂರ, ಹಾಗೂ ಕೇರೂರ ತಾಂಡಾದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

 ನಂತರ ಗ್ರಾಮದಲ್ಲಿರುವ ಗರ್ಭಿಣಿ ಮಹಿಳೆಯರು, ಬಾಣಂತಿಯರನ್ನು ಹಾಗೂ ಅಂಗನವಾಡಿ ಕೇಂದ್ರದ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಮೊಟ್ಟೆ ಸರಬರಾಜು ಬಗ್ಗೆ ವಿಚಾರಿಸಿದಾಗ ಮೊಟ್ಟೆ ಸರಿಯಾಗಿ ಪೂರೈಸುತ್ತಿಲ್ಲ ಎಂದು ಫಲಾನುಭವಿಗಳು ಅಧ್ಯಕ್ಷರ ಗಮನಕ್ಕೆ ತಂದರು. ಸ್ಥಳದಲಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ತರಾಟೆಗೆ ತೆಗೆದುಕೊಂಡ ಸುವರ್ಣಾ ಮಲಾಜಿಯವರು ಮುಂದೆ ಇದೇ ರೀತಿ ದೂರುಗಳು ಬಂದಲ್ಲಿ ಅಮಾನತ್ತು ಮಾಡಲಾಗುವುದೆಂದು ಎಚ್ಚರಿಕೆ ನೀಡಿದಲ್ಲದೆ ಅಂಗನವಾಡಿ ಕಾರ್ಯಕರ್ತೆಯರಿಗೆ ಕೂಡಲೇ ನೋಟಿಸ್ ಜಾರಿ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಗುರುಶಾಂತಪ್ಪ ಗುಣಾರಿ ಅವರಿಗೆ ಸೂಚಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಸುವರ್ಣಾ ಹೆಚ್. ಮಲಾಜಿ ಅವರು ಗುತ್ತಿಗೆ ಪಡೆದ ಸಂಸ್ಥೆಯವರು ನಿಯಮದ ಪ್ರಕಾರ ತಿಂಗಳಲ್ಲಿ 4 ಬಾರಿ ಅಂಗನವಾಡಿ ಕೇಂದ್ರಕ್ಕೆ ಮೊಟ್ಟೆ ಸರಬರಾಜು ಮಾಡಬೇಕು. ಆದರೆ ಇಲ್ಲಿ ತಿಂಗಳ ಕೊನೆಯಲ್ಲಿ ಒಮ್ಮೆಲೆ ಮೊಟ್ಟೆ ಸರಬರಾಜು ಮಾಡಿರುವ ಅಂಶ ಕಂಡುಬಂದಿರುತ್ತದೆ. ಮೊಟ್ಟೆ ಸರಬರಾಜು ಮಾಡುವ ಸಂಸ್ಥೆಯವರ ಬಿಲ್ಲನ್ನು ತಡೆಹಿಡಿಯಬೇಕು ಮತ್ತು ಮುಂದೆಯೂ ಇದೇ ರೀತಿ ಮಾಡಿದಲ್ಲಿ ಗುತ್ತಿಗೆಯನ್ನು ರದ್ದುಪಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Previous ಪ್ರತಿಯೊಬ್ಬರ ಮನೆ ಮಾತಾದ ಕನ್ನಡತಿ ಧಾರಾವಾಹಿ
Next ಕೋವಿಡ್-19 ಪರೀಕ್ಷಿಸಿಕೊಳ್ಳಿ , ಅಪಪ್ರಚಾರಕ್ಕೆ ಕಿವಿಗೊಡಬೇಡಿ.

You might also like

0 Comments

No Comments Yet!

You can be first to comment this post!

Leave a Reply