ಮೊಗ್ಗಿನ ಮನಸ್ಸು ಡೈರೆಕ್ಟರ್ ಗೆ ಆ ವಿಷಯವೇ ಗೊತ್ತಿರಲಿಲ್ಲ

ಮೊಗ್ಗಿನ ಮನಸ್ಸು ಡೈರೆಕ್ಟರ್ ಗೆ ಆ ವಿಷಯವೇ ಗೊತ್ತಿರಲಿಲ್ಲ

ಮೊಗ್ಗಿನ ಮನಸ್ಸು ಎಲ್ಲರಿಗೂ ಹಿಡಿಸಿದ ಸಿನಿಮಾ. ಯುವ ಮನಸುಗಳಲ್ಲಿ ಪ್ರೀತಿಯ ಹೊಸ ಅಲೆಯನ್ನೆ ಎಬ್ಬಿಸಿರೋದು ಈಗ ಇತಿಹಾಸ

ಚಿತ್ರದ ನಿರ್ದೇಶಕ ಶಶಾಂಕ್ ಅವ್ರಿಗೂ ಗೊತ್ತಿರಲಿಲ್ಲ. ತಾವು ಸೃಷ್ಟಿಸಿದ ಚಂಚಲಾ ಮತ್ತು ರಾಹುಲ್ ಮುಂದೊಂದಿನ ರಿಯಲ್ ಲವರ್ಸಿ ಆಗ್ತಾರೆ ಅಂತ.. ಅಷ್ಟೇ ಯಾಕೆ ಅವರು ಮದುವೆ ಆಗ್ತಾರೆ. ಮದುವೆ ಆಗಿ ಒಂದು ಗಂಡು ಒಂದ್ ಹೆಣ್ಣು ಮಗು ಹುಟ್ಟುತ್ತದೆ ಅಂತ.

ನಿಜ ನೋಡಿ ಭವಿಷ್ಯ ನಮಗೆ ಗೊತ್ತಿಲ್ಲ. ವರ್ತಮಾನದ ಬಗ್ಗೆ ಒಂದ್ ಅಂದಾಜ್ ಇರುತ್ತದೆ. ಭೂತ ಕಾಲದಲ್ಲಿ ನಡೆದು ಬಂದ ಹೆಜ್ಜೆ ಗುರುತುಗಳು ಇರುತ್ತವೆ. ಸಿಂಡ್ರೆಲಾ ರಾಧಿಕಾ ಪಂಡಿತ್ ಮತ್ತು ಕೆಜಿಎಫ್ ಕಿಂಗ್ ರಾಕಿ ಭಾಯ್ ಯಶ್ ಜೀವನದಲ್ಲಿ ಮೊಗ್ಗಿನ ಮನಸ್ಸು ಚಿತ್ರ ಒಂದು ಅದ್ಬುತ ಹೆಜ್ಜೆ. ಆ ಹೆಜ್ಜೆಗೆ ಈಗ 12 ರ ಹರೆಯ.

12 ವರ್ಷದ ಹಿಂದೆ ಜುಲೈ-18, 2008 ರಂದು ಬಂದ ಮೊಗ್ಗಿನ ಮನಸ್ಸು ಚಿತ್ರದಲ್ಲಿ, ಮನೋಮೂರ್ತಿ ಅವರ ಸಂಗೀತದ ನನಗೂ ಒಬ್ಬ ಗೆಳೆಯ ಬೇಕು ಅಂತ ರಾಧಿಕಾ ಪಂಡಿತ್ ಮತ್ತು ಶುಭಾ ಪೂಂಜಾ ಹಾಡಿಕೊಂಡಿದ್ದರು. ಶುಭಾ ಪೂಂಜಾಗೆ ಈಗ ಹುಡುಗ ಸಿಕ್ಕಿದ್ದಾನೆ. ಆದರೆ, ರಾಧಿಕಾ ಪಂಡಿತ್ ಗೆ ಆಗವೇ ಅದೇ ಮೊಗ್ಗಿನ ಮನಸು ಚಿತ್ರದ ವೇಳೆ ರಾಹುಲ್ ಪಾತ್ರಧಾರದ ಮೂಲಕ ಯಶ್ ಸಿಕ್ಕಾಗಿತ್ತು.

ರಾಧಿಕಾ ಮತ್ತು ಯಶ್ ಎಂದೂ ಎಲ್ಲೂ ತಮ್ಮ ಪ್ರೇಮವನ್ನ ಪ್ರೀತಿಯನ್ನ ಬಹಿರಂಗ ಪಡಿಸಿರಲಿಲ್ಲ.ಗಾಂಧಿನಗರದ ಗಾಸಿಪ್ ವೀರರ ಕೈಯಲ್ಲೂ ಇವರ ಪ್ರೀತಿ ಸಿಕ್ಕು ನರಳಾಡಲಿಲ್ಲ.. ಅಷ್ಟು ಅಚ್ಚುಕಟ್ಟಾಗಿಯೇ ಪ್ರೀತಿಸ್ತಾನೆ ಬಂದಿದ್ದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಜೀವನ ಈಗ ಸುಂದರವಾಗಿಯೇ ಇದೆ. ಚೆಂದದ ಬದುಕಾಗಿ ರೂಪಗೊಂಡಿದೆ.

ಮೊಗ್ಗಿನ ಮನಸು ಚಿತ್ರ ಬಂದು 12 ವರ್ಷಗಳೇ ಕಳೆದಿದೆ ಅನ್ನೊದು ಕೂಡ ಯಶ್ ಹಾಗೂ ರಾಧಿಕಾ ಗೆ ಥ್ರಿಲ್ ಕೊಡೊ ವಿಷಯವೇ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಯಶ್ ತಮ್ಮ ಈ ಚಿತ್ರ ಆ ಸವಿನೆನಪಿನ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ. ಚಿತ್ರದ ನಿರ್ಮಾಪಕರಾದ ಈ ಕೃಷ್ಣಪ್ಪ ಹಾಗೂ ಗಂಗಾಧರ್, ಕ್ಯಾಮೆರಾಮನ್ ಚಂದ್ರು, ನಿರ್ದೇಶಕ ಶಶಾಂಕ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ನಡೆದು ಬಂದ ಹಾದಿಯಲ್ಲಿ ತಮಗೆ ಬೆಂಬಲ ನೀಡಿ ಬೆಳೆಸಿದ ಟೀಮ್ ಗೆ ರಾಕಿಂಗ್ ಸ್ಟಾರ್ ಧನ್ಯವಾದ ತಿಳಿಸಿದ್ದಾರೆ.. ಪ್ರೀತಿ ಅರಳಿದ, ಬದುಕು ಕಟ್ಟಿಕೊಟ್ಟ ಮೊಗ್ಗಿನ ಮನಸು ಚಿತ್ರ ಸಿಂಡ್ರೇಲಾ ಗೂ ಸ್ಪೆಷಲ್.. ರಾಕಿಂಗ್ ಸ್ಟಾರ್ ಗೂ ಸ್ಪೆಷಲ್..

ವರದಿ- ರೇವನ್ ಪಿ.ಜೇವೂರ್

Previous ಕುಡಿಯಲು ಬಾರ್ ಗೆ ಹೋಗುತ್ತಿರಾ ಹಾಗಾದ್ರೆ ಈ ಸುದ್ದಿ ಓದಲೇಬೇಕು
Next ಸುರೇಶ್ ರೈನಾ ಸೋದರ ಮಾವನ ಬರ್ಬರವಾಗಿ ಹತ್ಯೆ

You might also like

0 Comments

No Comments Yet!

You can be first to comment this post!

Leave a Reply