ಲಂಚಕ್ಕೆ ಬೇಡಿಕೆ ಇಟ್ಟ ತಹಶಿಲ್ದಾರ ಅಮಾನತ್ತು

ಲಂಚಕ್ಕೆ ಬೇಡಿಕೆ ಇಟ್ಟ ತಹಶಿಲ್ದಾರ ಅಮಾನತ್ತು

ಬಳ್ಳಾರಿ…

ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ತಹಶಿಲ್ದಾರರ ಮೇಲೆ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಹಶಿಲ್ದಾರ ವಿಜಯಕುಮಾರ್ ಅವರನ್ನು ಅಮಾನತ್ತು ಮಾಡಿ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಅವರು ಆದೇಶ ಹೊರಡಿಸಿದ್ದಾರೆ‌. ಮರಳು ಲಾರಿಗೆ ಅನುಮತಿ ನೀಡುವ ಸಲುವಾಗಿ ತಾಲೂಕು ತಹಶಿಲ್ದಾರಾದ ವಿಜಯಕುಮಾರ್ ಎಂಬವರು ಲಂಚ ಕೇಳಿದ್ದಾರೆ‌.

ತಹಶಿಲ್ದಾರ ಲಂಚ ಕೇಳಿದ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ. ಕಳೆದ ೨೦ ದಿನಗಳ ಹಿಂದೆ ಹೂವಿನ ಹಡಗಲಿ ತಾಲೂಕಿನ ಉಮೇಶ್ ನಾಯಕ್ ಎಂಬರ ಮರಳು ಲಾರಿ ಸೀಜ್ ಮಾಡಿದ್ದು, ಮರಳಿ ಲಾರಿ ಬಿಡುವ ಸಲುವಾಗಿ ಉಮೇಶ್ ನಾಯಕ್ ಕಚೇರಿಗೆ ಬೇಟಿ ನೀಡಿದ ಸಂದರ್ಶನದಲ್ಲಿ , ತಹಶಿಲ್ದಾರಾದ ವಿಜಯಕುಮಾರ್ ಅವರು ಲಂಚಕ್ಕೆ ಬೇಡಿಕೆ ಇಟಿದ್ರು. ನನ್ನದು ವಾರದ ಲೆಕ್ಕ, ಇಲ್ಲಾ ನನ್ನ ಜೊತೆಯಲ್ಲಿ ಮಾತನಾಡಬೇಡಿ , ಇಲ್ಲಾ 50-50 ಆದರೂ ಕೊಡುತ್ತೀರಾ ಎಂದು ಬೇಡಿಕೆ ಇಟಿದ್ದಾರೆ‌. ಹಶಿಲ್ದಾರ ವಿಜಯಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟುರುವ ವಿಡಿಯೋ ವೈರಲ್ ಆಗಿತ್ತು.

ಅಲ್ಲದೇ ಕರ್ಣಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ದೊಡ್ಡಮನಿ ಅವರು ಪತ್ರಿಕಾಗೋಷ್ಠಿ ನಡೆಸಿ ಕೂಡಲೇ ತಹಶಿಲ್ದಾರಾದ ವಿಜಯಕುಮಾರ್ ಅವರನ್ನು ಅಮಾನತ್ತು ಮಾಡುವಂತೆ ಒತ್ತಾಯ ಮಾಡಿ, ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಅವರಿಗೆ ದೂರು ನೀಡಿದ್ದರು. ‌ಹೀಗಾಗಿ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಅವರು ವಿಜಯಕುಮಾರ್ ಅವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ‌…

Previous ಮಳೆ ಹಾಡಿನ ಮೋಹಕ್ಕೆ ಪವರ್ ಸ್ಟಾರ್ ಬೋಲ್ಡ್..!
Next ಪ್ರತಿಯೊಬ್ಬರ ಮನೆ ಮಾತಾದ ಕನ್ನಡತಿ ಧಾರಾವಾಹಿ

You might also like

0 Comments

No Comments Yet!

You can be first to comment this post!

Leave a Reply