ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಸಹಾಯಕ್ಕೆ ದಾವಿಸಿದ ಹಳೆಯ ವಿದ್ಯಾರ್ಥಿಗಳು

ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಸಹಾಯಕ್ಕೆ ದಾವಿಸಿದ ಹಳೆಯ ವಿದ್ಯಾರ್ಥಿಗಳು

ಚಿಕ್ಕಮಗಳೂರು-

ತಾವು ಕಲಿತಾ ಶಾಲೆ ವಿಧ್ಯೆ ಕಲಿಸಿದ ಗುರುಗಳು, ತಾವು ಉನ್ನತ ಹುದ್ದೆಗೆ ಹೋದ ಬಳಿಕವೂ ಸಂಕಷ್ಟದಲ್ಲಿಬಿರುವ ಶಿಕ್ಷಕರಿಗೆ ಸಹಾಯ ಹಸ್ತ ಚಾಚಿದ್ದಾರೆ. ತಮ್ಮ ಗುರು ವೃಂದ ಸಂಕಷ್ಟದಲ್ಲಿದೆ ಎಂದು ಹಳೇ ವಿದ್ಯಾರ್ಥಿಗಳು ಶಿಕ್ಷಕ ದಿನಾಚರಣೆಯ ಅಂಗವಾಗಿ 20 ಶಿಕ್ಷಕರಿಗೆ ಹಣ ಸಹಾಯ ನೀಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ. ಕಡೂರಿನ ಬ್ರೈಟ್ ಫ್ಯೂಚರ್ ಇಂಗ್ಲೀಷ್ ಸ್ಕೂಲಿನ ಹಳೇ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ನೆರವಿಗೆ ಧಾವಿಸಿದ್ದಾರೆ. ಕೊರೋನಾ ಕಾಲದಲ್ಲಿ ಕಳೆದ ಆರು ತಿಂಗಳಿಂದ ಖಾಸಗಿ ಶಾಲೆಯ ಶಿಕ್ಷಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಶಾಲಾ ಆಡಳಿತ ಮಂಡಳಿ ಕೂಡ ಸಂಬಳ ನೀಡಲಾಗದೆ ಶಿಕ್ಷಕರಿಗೆ ಅರ್ಧ ಸಂಬಳ ನೀಡಿತ್ತು.

suddinow
suddinow

ಹಾಗಾಗಿ, ಹಳೇ ವಿದ್ಯಾರ್ಥಿಗಳು ಶಿಕ್ಷಕರ ನೆರವಿಗೆ ಧಾವಿಸಿದ್ದಾರೆ. ಈ ಶಾಲೆಯಲ್ಲಿ ಓದಿದ್ದ ವಿದ್ಯಾರ್ಥಿಗಳು ಅಮೆರಿಕಾ, ಜರ್ಮನಿಯಲ್ಲಿದ್ದು ಕೆಲವರು ವೈದ್ಯರು, ಇಂಜಿನಿಯರ್ ಆಗಿದ್ದಾರೆ. ಹಲವರು ಹಲವು ರೀತಿಯ ಉದ್ಯೋಗದಲ್ಲಿದ್ದು ಆರ್ಥಿಕವಾಗಿ ಸದೃಢವಾಗಿದ್ದಾರೆ. ಉತ್ತಮ ಸ್ಥಾನದಲ್ಲಿರೋ ಸುಮಾರು 30 ವಿದ್ಯಾರ್ಥಿಗಳು ಹಣ ಹಾಕಿ ಶಿಕ್ಷಕರ ನೆರವಿಗೆ ಧಾವಿಸಿದ್ದಾರೆ. ಇದೇ ವೇಳೆ ಶಾಲೆಯ ಭೋದಕೇತರ ವರ್ಗದ 18 ಜನರಿಗೂ ಒಂದು ತಿಂಗಳ ದಿನಸಿ ಸಾಮಾಗ್ರಿಯ ಕಿಟ್ ವಿತರಿಸಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಹಾಗೂ ಗೌರವಕ್ಕೆ ಆಡಳಿತ ಮಂಡಳಿ, ಶಿಕ್ಷಕ ವೃಂದ ಕೂಡ ಶ್ಲಾಘಿಸಿದೆ.

Previous ರಾಗಿಣಿಗೂ ಬಿಜೆಪಿಗೂ ಸಂಬಂಧ ‌ಇಲ್ಲಾ.
Next ರಾಗಿಣಿ ನಾಳೆ ಜಾಮೀನು ಅರ್ಜಿ ವಿಚಾರಣೆ!!

You might also like

0 Comments

No Comments Yet!

You can be first to comment this post!

Leave a Reply