ಗುಡಿಸಲಲ್ಲಿದ್ದ ಗುರುವಿಗೆ ಮನೆ ಕಟ್ಟಿಕೊಟ್ಟ ಹಳೆಯ ವಿದ್ಯಾರ್ಥಿಗಳು

ಗುಡಿಸಲಲ್ಲಿದ್ದ ಗುರುವಿಗೆ ಮನೆ ಕಟ್ಟಿಕೊಟ್ಟ ಹಳೆಯ ವಿದ್ಯಾರ್ಥಿಗಳು

ಬಳ್ಳಾರಿ-

 ತಿದ್ದಿ ತೀಡಿ ತಪ್ಪು ಮಾಡಿದಾಗ ಚಾಟಿ ಏಟು ಕೊಟ್ಟು ಪಾಠ ಕಲಿಸಿ, ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಲು ಧಾರಿ ಮಾಡಿಕೊಟ್ಟ ಶಿಕ್ಷಕರನ್ನು ಬಹುತೇಕರು ಮರೆತು ಬಿಡುತ್ತಾರೆ. ಕಳೆದ 30 ವರ್ಷಗಳ ಕಾಲ ಖಾಸಗಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಈಗ ಬದುಕು ನಡೆಸಲು ಆಗದ ಪರಿಸ್ಥಿತಿಯಲ್ಲಿ ಇರುವ ಬಡಪಾಯಿ ಶಿಕ್ಷಕಿಗೆ ಸುಮಾರು 20 ಲಕ್ಷ ಬೆಲೆ ಬಾಳುವ ಮನೆ ಕಟ್ಟಿಸಿಕೊಟ್ಟು ಸಂಕಷ್ಟದಲ್ಲಿ ಜೀವನ ನಡೆಸುವ ಶಿಕ್ಷಕಿಗೆ ಗುರು ದಕ್ಷಿಣೆ ನೀಡಿದ್ದಾರೆ.

suddinow
suddinow

 ಬಳ್ಳಾರಿಯ ಸುಮಾರು 30ಕ್ಕೂ ಹೆಚ್ಚು ವರ್ಷಗಳ ಕಾಲ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸಿದ್ದ ಶಿಕ್ಷಕಿಯೊಬ್ಬರ ಆರೋಗ್ಯ ಕೈಕೊಟ್ಟು ಜೀವನ ನಡೆಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಜೀವನ ನಡೆಸಲು ಸಣ್ಣ ಜೋಪಡಿಯಲ್ಲಿ ಟ್ಯೂಶನ್​ ಹೇಳಿ ಕೊಡುತ್ತಾ ಜೀವನ ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ವಿದ್ಯಾರ್ಥಿಗಳು ಗುರುವಿಗೆ 20 ಲಕ್ಷ ಮೌಲ್ಯದ ಭವ್ಯವಾದ ಮನೆಯೊಂದನ್ನು ಕಟ್ಟಿಸಿಕೊಡುವ ಮೂಲಕ ಗುರು ಶಿಷ್ಯ ಬಾಂಧವ್ಯ ಎತ್ತಿ ಹಿಡಿದಿದ್ದಾರೆ. ಮೂಲತ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಸಿರುಗುಪ್ಪ ಎಜುಕೇಶನ್ ಸೊಸೈಟಿಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1985 ರಿಂದ 1996 ರವರೆಗೆ ಶಿಕ್ಷಕಿಯಾಗಿ ಕೆಲಸ ಮಾಡಿದ್ದ ಪರಿಮಳ ಅವರು, ಸಣ್ಣವಯಸ್ಸಿನಲ್ಲೇ ತಂದೆ ತಾಯಿಯನ್ನೂ ಕಳೆದುಕೊಂಡಿದ್ದರು. ಮದುವೆಯೂ ಆಗಿರಲಿಲ್ಲ.

suddinow
suddinow

 ಅಲ್ಲದೇ,‌‌ ಪರಿಮಳ ಟೀಚರ್ ಆಸರೆಯಾಗಿದ್ದ ಅವರ ಅಕ್ಕನವರು ಇತ್ತೀಚೆಗೆ ಮರಣಹೊಂದಿದರು. ಇದರಿಂದ ಒಬ್ಬರೇ ಹಳೆಯ ಜೋಪಡಿಯೊಂದರಲ್ಲಿ ಟ್ಯೂಶನ್ ಹೇಳಿಕೊಂಡು ಜೀವನ ನಡೆಸುತ್ತಿದ್ದರು. ಗುರುವಂದನಾ ಕಾರ್ಯಕ್ರಮವೊಂದರಲ್ಲಿ ಸಿಕ್ಕಾಗ ಪರಿಮಳ ಟೀಚರ್ ಅವರ ಕಷ್ಟ ತಿಳಿದ ಹಳೆಯ ವಿದ್ಯಾರ್ಥಿಗಳು ಉತ್ತಮ ಮನೆ ಕಟ್ಟಿಕೊಟ್ಟಿದ್ದಾರೆ. ನಾವು ನೆಪ ಮಾತ್ರಕ್ಕೆ, ಇಂಥ ಸಾವಿರಾರು ಶಿಕ್ಷಕರು ಇಂದು ಅಸಹಾಯಕತೆಯಲ್ಲಿದ್ದಾರೆ. ಅಂದು ಈ ಗುರುಮಾತೆಯ ಕೈಯಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ಉನ್ನತ ಸ್ಥಾನದಲ್ಲಿ ಇದ್ದೇವೆ. ಇವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಇಂತಹ ಶಿಕ್ಷಕರ ನೆರವಿಗೆ ಸಹಾಯ ಮಾಡಿ ಎಂಬ ಸಂದೇಶ ಹೋಗಲಿ ಎಂಬುದು ನಮ್ಮ ಆಶಯ ಎನ್ನುತ್ತಾರೆ ಮನೆ ಕಟ್ಟಿಕೊಟ್ಟ ಹಳೆಯ ವಿದ್ಯಾರ್ಥಿಗಳು.

Previous ನಾಳೆಯಿಂದ ಅಂತರಾಜ್ಯ ಸಂಚಾರ ಆರಂಭ
Next ಜಿಲ್ಲೆಯಲ್ಲಿಂದು ಹೊಸದಾಗಿ 325 ಜನರಿಗೆ ಕೊರೋನಾ ಸೋಂಕು ದೃಢ

You might also like

0 Comments

No Comments Yet!

You can be first to comment this post!

Leave a Reply