ವಿಜಯನಗರ ಜಿಲ್ಲೆಗೆ  ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ

ವಿಜಯನಗರ ಜಿಲ್ಲೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ

ಪೆಬ್ರವರಿ-೧೨

ವಿಜಯನಗರ ಜಿಲ್ಲೆಯ ಅಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ‌ ತಾಲ್ಲೂಕಿನ ಜನರು ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ವಿಜಯನಗರ ಜಿಲ್ಲೆಗಾಗಿ ಹಲವಾರು ವರ್ಷಗಳಿಂದ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ವಿದ್ಯಾರ್ಥಿಗಳು ಕೂಲಿ ಕಾರ್ಮಿಕರು‌ ಅಷ್ಟೇ ಅಲ್ಲದೆ ಕಾಂಗ್ರೆಸ್ ಬಿಜೆಪಿ ನಾಯಕರು ಪ್ರತ್ಯೇಕ ಜಿಲ್ಲೆ ಗಾಗಿ ಹೋರಾಟ ನಡೆಸಿದ್ದಾರೆ. ಇನ್ನು ಕಾಂಗ್ರಸ್ ಪಕ್ಷದಿಂದ ಶಾಸಕರಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಆನಂದ ಸಿಂಗ್ ಅವರು ವಿಜಯ ನಗರ ಜಿಲ್ಲೆಗಾಗಿ ಸಮ್ಮಿಶ್ರ ಸರಕಾರವನ್ನು ಬಿಳಿಸಿ, ಉಪಚುನಾವಣೆಯ ನಂತರ ಜಿಲ್ಲೆ ಘೋಷಣೆ ಮಾಡಲಾಗುತ್ತದೆ ಎಂಬ ಭರವಸೆಯನ್ನು ಸರಕಾರ ಹುಸಿಗೊಳುಸಿದೆ.

ಜನರು ಉಪಚುನಾವಣೆಯಲ್ಲಿ ವಿಜಯ ನಗರ ಜಿಲ್ಲೆಯನ್ನು ಮಾಡುತ್ತಾರೆ. ಎಂಬ ಆಸೆಯಿಂದ ಆನಂದ ಸಿಂಗ್ ಅವರನ್ನು ಆಯ್ಕೆ ಮಾಡಿದ್ದಾರೆ ಆದರೆ  ಸರಕಾರ ಅವರಿಗೆ ಸಚಿವ ಸ್ಥಾನ ಮಾತ್ರ ನೀಡಿದ್ದಾರೆ. ಆನಂದ ಸಿಂಗ್ ಅಭಿಮಾನಿ ಎಂದು ಫೇಸಬುಕ್ ನಲ್ಲಿ   ದೂರವಾಣಿಯ ನಂಬರ ಹಾಕಿ ವಾಟ್ಸ್ ಆ್ಯಪ್ ಮೂಲಕ ವಿಜಯನಗರ ಜಿಲ್ಲೆಯ ಕುರಿತು ಸಮಾಜಿಕ ಜಾಲತಾಣದಲ್ಲಿ ಅಭಿಯಾನ ಕೈಗೊಂಡಿದ್ದಾರೆ. ತಾಲೂಕಿನ ಜನರು  ವಿಜಯನಗರ ಜಿಲ್ಲೆಯನ್ನು ಮಾಡದಿದ್ದರೆ ಹೊಪೇಟೆಯಿಂದ ಬೆಂಗಳೂರಿಗೆ ಪಾದ ಯಾತ್ರೆಯನ್ನು ಮಾಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಲಾಗಿದೆ.

Previous ಕಾಂಗ್ರೆಸ್ ಮುಸ್ಲಿಮರನ್ನು ಬಾವಿಯಲ್ಲಿ ಇಟ್ಟಿರುತ್ತಾರೆ, ಚುನಾವಣಾ ಬಂದಾಗ ಮಾತ್ರ ಹೊರತೆಗೆಯುತ್ತಾರೆ
Next ಹುನಗುಂದ : ಕರೆ ಮಾಡಿದಲ್ಲಿ ಅಗತ್ಯ ವಸ್ತುಗಳು ಮನೆ ಬಾಗಿಲಿಗೆ ..!

You might also like

0 Comments

No Comments Yet!

You can be first to comment this post!

Leave a Reply