ನಿರ್ಲಕ್ಷ್ಯಕ್ಕೆ ಒಳಗಾದ ಪುರಾಣ ಪ್ರಸಿದ್ಧ ಶಬರಿ ಕೊಳ ಮತ್ತು ಕಬಂದ ರಾಕ್ಷಸನ ಸ್ಥಳ

ನಿರ್ಲಕ್ಷ್ಯಕ್ಕೆ ಒಳಗಾದ ಪುರಾಣ ಪ್ರಸಿದ್ಧ ಶಬರಿ ಕೊಳ ಮತ್ತು ಕಬಂದ ರಾಕ್ಷಸನ ಸ್ಥಳ

ರಾಮದುರ್ಗ – ಇಡೀ ವಿಶ್ವದ ದೃಷ್ಟಿ ಭಾರತದ ಅಯೋಧ್ಯೆಯ ಮೇಲೆ. ಎಲ್ಲೆಲ್ಲೂ ಮರ್ಯಾದಾ ಪುರುಷೋತ್ತಮ ಶ್ರೀರಾಮನದ್ದೆ ಸುದ್ದಿ… ಅದರ ಜೊತೆಗೆ ರಾಮನು ಪಾದಸ್ಪರ್ಶ ಮಾಡಿದ ಸ್ಥಳದ ಬಗ್ಗೆಯೂ ಸುದ್ದಿಯಾಗಲೇಬೇಕಲ್ಲವೇ..?

ಶ್ರೀರಾಮ ಎಂದ ಕೂಡಲೇ ನೆನಪಾಗುವುದು ಆತನ ಪರಮ ಭಕ್ತೆ ಶಬರಿ. ರಾಷ್ಟ್ರದಲ್ಲಿ ಶಬರಿಯ ಏಕೈಕ ದೇವಸ್ಥಾನವಿರುವ ಸ್ಥಳ ರಾಮದುರ್ಗ ತಾಲ್ಲೂಕಿನ ಶಬರಿ ಕೊಳ್ಳ. ಎಂದೂ ಬತ್ತದ ಎರಡು ನೀರಿನ ಪುಷ್ಕರಣಿ ಇಲ್ಲಿವೆ. ಸೀತಾಮಾತೆಯ ಅಪಹರಣ ನಡೆದ ನಂತರ ಸೀತೆಯನ್ನು ಶೋಧಿಸುತ್ತ ಭಾರತದ ಉತ್ತರದಿಂದ ದಕ್ಷಿಣದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕರಡಿಗುಡ್ಡ, ಮುದಕವಿ, ರಾಮದುರ್ಗ ಮಾರ್ಗ ಮೂಲಕ ಕ್ಷೇತ್ರ ಶಬರಿ ಆಶ್ರಮಕ್ಕೆ ಭೇಟಿ ನೀಡಿದನು ಎಂಬುದು ರಾಮಾಯಣದಲ್ಲಿ ಉಲ್ಲೇಖವಿದೆ. ಶಬರಿ ಆಶ್ರಮಕ್ಕೆ ಬರುವ ಪೂರ್ವದಲ್ಲಿ ರಾಮದುರ್ಗ ತಾಲೂಕಿನ ಕಟ್ಟಕಡೆಯ ಗ್ರಾಮ ಕರಡಿಗುಡ್ಡದಲ್ಲಿ ಶ್ರೀರಾಮನ ಕುರುಹು ಇದೆ. ಇಲ್ಲಿ ಅಯೋಮುಖಿ ಎಂಬ ರಾಕ್ಷಸಿಯಯನ್ನು ಸಂಹರಿಸಿ, ನಂತರ ಕಬಂದ ರಾಕ್ಷಸನಿಗೆ ಮುಕ್ತಿ ನೀಡಿದ ಸ್ಥಳ.

ಕಬಂದ ರಾಕ್ಷಸನು ಪೂರ್ವದಲ್ಲಿ ಗಂಧರ್ವ ( ದೇವರು) ನಾಗಿದ್ದ. ದುರ್ವಾಸ ಮುನಿಗಳು ಈತನ ಸ್ಥಳದಲ್ಲಿ ಪ್ರತ್ರಕ್ಷನಾಗುತ್ತಾರೆ. ಮುನಿಗಳನ್ನು ನೋಡಿ ಕಬಂದನು ನಗುತ್ತಾನೆ. ತದ ನಂತರ ದುರ್ವಾಸ ಮುನಿಗಳು ಕಬಂದನಿಗೆ ನೀನು ರಾಕ್ಷಸನಾಗು ಎಂದು ಶಾಪವಿತ್ತರು.

ರಾಕ್ಷಸ ರೂಪ ತಾಳಿದ ನಂತರ ಆತ ಎಲ್ಲರಿಗೂ ಕಷ್ಟಗಳನ್ನ ನೀಡಲಾರಂಭಿಸಿದ. ಅದನ್ನು ನೋಡಿ ಇಂದ್ರನು ಕಬಂದನನ್ನು ಸಂಹರಿಸಲು ಅವನ ತಲೆ ಕತ್ತರಿಸಿದಾಗ ಆ ತಲೆಯು ಅದೇ ರಾಕ್ಷಸನ ಹೊಟ್ಟೆಯಲ್ಲಿ ಸೇರಿ ಎಲ್ಲೆಂದರಲ್ಲಿ ಸುತ್ತಾಡತೊಡಗಿದ. ರಾಕ್ಷಸ ತನ್ನ ಭುಜಗಳನ್ನು ಎಲ್ಲೆಂದರಲ್ಲಿ ಚಾಚಿ ಮನುಷ್ಯರನ್ನು ಹಿಡಿದು ತಿನ್ನುತ್ತಿದ್ದ.

ಹೀಗಿರುವ ಸಂದರ್ಭದಲ್ಲಿ ಶ್ರೀರಾಮ-ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಕರಡಿಗುಡ್ಡಕ್ಕೆ ಬಂದಾಗ ಕಬಂದ ರಾಕ್ಷಸನು ರಾಮನನ್ನು ಹಿಡಿದು ತಿನ್ನಲು ಎಳೆದಾಗ ರಾಮನು ತನ್ನ ಖಡ್ಗದಿಂದ ಕಬಂದನ ಭುಜವನ್ನು ಕತ್ತರಿ‌ಸಿ ಸಂಹಾರ ಮಾಡಿದನು ಎಂಬುದು ಒಂದು ಇತಿಹಾಸದ ದೃಷ್ಟಾಂತ.

ಇಂತಹ ಪೌರಾಣಿಕ ಹಿನ್ನೆಲೆ ಹೊಂದಿರುವ ಕರಡಿಗುಡ್ಡ ಗ್ರಾಮದಲ್ಲಿ ಇಂದಿಗೂ ರಾಕ್ಷಸನ ದೇವಸ್ಥಾನ ಇದೆ. ಶ್ರೀರಾಮ ಪಾದಸ್ಪರ್ಶದ ಪ್ರತಿಯಾಗಿ ಇಂದಿಗೂ ಆತನ ಪಾದುಕೆಗಳು ಇಲ್ಲಿ ಲಭ್ಯವಿದೆ.

ಹಲವು ವರ್ಷಗಳ ಬಳಿಕ ಮರ್ಯಾದಾ ಪುರುಷೋತ್ತಮ ಶ್ರೀರಾಮನ ದೇವಸ್ಥಾನ ನಿರ್ಮಾಣವಾಗುತ್ತಿರುವುದು ಅಖಂಡ ಭಾರತೀಯರಲ್ಲಿ ಸಂತಸ ಮನೆ ಮಾಡಿದೆ. ಅದರ ಜೊತೆಗೆ ಪೌರಾಣಿಕ ಹಿನ್ನೆಲೆ ಹೊಂದಿರುವ ಇಂತಹ ಕ್ಷೇತ್ರಗಳ ಪರಿಚಯ ಈಗೀನ ತಲೆಮಾರಿಗೆ ಮರೀಚಿಕೆಯಾಗಿದೆ.

ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಬೇಕಿದ್ದ ಈ ಪ್ರದೇಶಗಳು ಇಂದು ಕೆಲವೇ ಪ್ರದೇಶಕ್ಕೆ ತಿಳಿದಿರುವುದು ದೊಡ್ಡ ದುರಂತವೇ. ಪೌರಾಣಿಕ ಸ್ಥಳದ ಮಹಿಮೆ ಮತ್ತು ಅವುಗಳ ಸಂರಕ್ಷಣೆ ಮಾಡಬೇಕಿರುವುದು ಸರ್ಕಾರದ ಆದ್ಯ ಕರ್ತವ್ಯ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ರಾಮದುರ್ಗ ತಾಲೂಕಿನ ಶಬರಿ ಕೊಳ್ಳ ಮತ್ತು ಕರಡಿಗುಡ್ಡ ಗ್ರಾಮವನ್ನು ಅಭಿವೃದ್ಧಿ ಪಡಿಸಬೇಕೆಂಬುದು ನನ್ನ ಒತ್ತಾಯ..

(ವರದಿ – ರಾಮಚಂದ್ರ ಯಾದವಾಡ)

Previous ಪ್ರಣಬ್ ಮುಖರ್ಜಿ ಬಗೆಗಿನ ನೆನಪು ಹಂಚಿಕೊಂಡ ಮೋದಿ
Next ಯಶ್ ಪುತ್ರನ ನಾಮಕರಣ, ಕೊನೆಗೂ ರಿವಿಲ್ ಯಾದ ಯಶ್ ಪುತ್ರನ ಹೆಸರು

You might also like

0 Comments

No Comments Yet!

You can be first to comment this post!

Leave a Reply