ತಂಬಾಕು ಮಾರಾಟಗಾರರಿಗೆ ಪ್ರತ್ಯೇಕ ಉದ್ಯಮ ಪರವಾನಿಗೆ

ತಂಬಾಕು ಮಾರಾಟಗಾರರಿಗೆ ಪ್ರತ್ಯೇಕ ಉದ್ಯಮ ಪರವಾನಿಗೆ

ದಾವಣಗೆರೆ-

 ರಾಷ್ಟ್ರ ಹಾಗೂ ರಾಜ್ಯ ಮಟ್ಟದ ತಂಬಾಕು ನಿಯಂತ್ರಣ ಘಟಕ ಬೆಂಗಳೂರು ಮತ್ತು ಬ್ಲೂಂಬರ್ಗ್ ಇನಿಷಿಯೇಟಿವ್ ನವದೆಹಲಿ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ವೆಬಿನಾರ್ ಜೂಮ್ ಸಭೆ ನಡೆಸಲಾಯಿತು. ಸಭೆಯಲ್ಲಿ ರಾಜ್ಯದ ಮಹಾನಗರ ಪಾಲಿಕೆ ಇರುವಂತಹ ನಗರಗಳಲ್ಲಿ ತಂಬಾಕು ಮಾರಾಟಗಾರರಿಗೆ ಪ್ರತ್ಯೇಕ ಉದ್ಯಮ ಪರವಾನಿಗೆ ನೀಡುವ ಕುರಿತು ತೀರ್ಮಾನಿಸಲಾಯಿತು.

 ರಾಜ್ಯದ 10 ಮಹಾನಗರಪಾಲಿಕೆ ನಗರಗಳಾದ ದಾವಣಗೆರೆ, ತುಮಕೂರು, ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಬೆಳಗಾವಿ, ಕಲಬುರಗಿ, ಬಳ್ಳಾರಿ, ವಿಜಯಪುರ ನಗರಗಳಲ್ಲಿ ಇರುವಂತಹ ತಂಬಾಕು ಮಾರಾಟಗಾರರಿಗೆ ಮಹಾನಗರ ಪಾಲಿಕೆ ಕಾಯ್ದೆ-1976 ಅಡಿಯಲ್ಲಿ ಪ್ರತ್ಯೇಕ ವ್ಯಾಪಾರ ಪರವಾನಿಗೆ ನೀಡುವ ಮೂಲಕ ಕೋಟ್ಪಾ-2003ರ ಕಾಯ್ದೆಯನ್ನು ಉನ್ನತ ಅನುಷ್ಠಾನ ಮತ್ತು ತಂಬಾಕು ಸೇವನೆಯಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟುವ ಕುರಿತು ಚರ್ಚಿಸಲಾಯಿತು.

 ಕೊರೊನಾ ಸಮಯದಲ್ಲಿಯೂ ಜಿಲ್ಲೆಯಲ್ಲಿ ಸಹ ರೂ. 4,84,670 ದಂಡ ವಸೂಲಿ ಮಾಡಲಾಗಿದ್ದು, 2615 ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 6ಬಿ ಶೈಕ್ಷಣಿಕ ಸಂಸ್ಥೆಗಳ ಆವರಣದ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲಾಗುವುದು ಎಂದರು.

Previous ಕೋವಿಡ್ ಹಿನ್ನೆಲೆ ನಷ್ಟ ,ರಾಜ್ಯ ಸರ್ಕಾರ ನೆರವು
Next ಗೋಂದಿ ಯೋಜನೆ ಅಡಿ ಕೆರೆಗಳಿಗೆ ನೀರು

You might also like

0 Comments

No Comments Yet!

You can be first to comment this post!

Leave a Reply