ಕಸ ವಿಲೇವಾರಿಗೆ ಪ್ರತ್ಯೇಕ ಆ್ಯಪ್ ತಯಾರಿಸಿದ ಪಾಲಿಕೆ

ಕಸ ವಿಲೇವಾರಿಗೆ ಪ್ರತ್ಯೇಕ ಆ್ಯಪ್ ತಯಾರಿಸಿದ ಪಾಲಿಕೆ

ಮಂಗಳೂರು-

ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ “ಸ್ವಚ್ಛತಾ ಮೊಹ್ವಾ” ಆ್ಯಪನ್ನು ಸಾರ್ವಜಿನಿಕರು ಬಳಸಿ ತಮ್ಮ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ದೂರುಗಳನ್ನು ಛಾಯಾ ಚಿತ್ರದೊಂದಿಗೆ ದಾಖಲಿಸಬಹುದಾಗಿರುತ್ತದೆ.

ಆಪ್ ಬಳಸಿ ತಮ್ಮ ನಗರ ವ್ಯಾಪ್ತಿಯಲ್ಲಿ ಶೇಖರಣೆ ಆಗಿರುವ ಕಸದ ವಿಲೇವಾರಿ ಆಗದೇ ಇರುವ ಬಗ್ಗೆ, ಕಸ ವಿಲೇವಾರಿ ಗಾಡಿ ಅಥವಾ ವಾಹನ ತಮ್ಮ ವಾರ್ಡ್‍ನಲ್ಲಿ ಬಾರದೇ ಇದ್ದಲ್ಲಿ, ರಸ್ತೆಗಳ ಸ್ವಚ್ಛತೆಯಲ್ಲಿ ಲೋಪಗಳು ಕಂಡುಬಂದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮೃತ ಜಾನುವಾರುಗಳ ವಿಲೇವಾರಿ ಆಗದೇ ಇದ್ದಲ್ಲಿ, ಸಾರ್ವಜನಿಕ ಶೌಚಾಯದಲ್ಲಿ ಸ್ವಚ್ಛತೆ, ನೀರಿನ ಸೌಲಭ್ಯ ಮತ್ತು ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಕಂಡುಬಂದಲ್ಲಿ ಮತ್ತು ಸ್ವಚ್ಛತೆಗೆ ಸಂಬಂಧಿಸಿದ ಇತರೆ ಸಮಸ್ಯೆಗಳು ಕಂಡು ಬಂದಲ್ಲಿ ಮೇಲಿನ ಆಪ್ ಬಳಸಿ ನಗರ ಸಂಸ್ಥೆಗಳಲ್ಲಿ ದೂರು ದಾಖಲಿಸಬಹುದಾಗಿದೆ. ದೂರಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿಯನ್ನು ದೂರುದಾರರಿಗೆ ರವಾಸಿಸಲಾಗುವುದು. ಆಪ್ ಬಳಸಿ ತಮ್ಮ ನಗರದಲ್ಲಿ ಸ್ವಚ್ಛತೆಯನ್ನು ನಿರ್ವಹಿಸಿಲು ಆಡಳಿತದೊಂದಿಗೆ ಕೈ ಜೋಡಿಸಬೇಕೆಂದು ದ.ಕ. ಜಿಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Previous ಪ್ರವಾಸಕ್ಕೆ ಹೋಗುತ್ತಿರಾ ಹಾಗಾದರೆ, ಪೂರ್ವಾನುಮತಿ ಕಡ್ಡಾಯ
Next ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿ ಗ್ರಾಮಗಳ ಅಭಿವೃದ್ಧಿ

You might also like

0 Comments

No Comments Yet!

You can be first to comment this post!

Leave a Reply