ಸೆ.28 ಕರ್ನಾಟಕ ಬಂದ್

ಸೆ.28 ಕರ್ನಾಟಕ ಬಂದ್

ಬೆಂಗಳೂರು-

 ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ವಿಧೇಯಕಗಳನ್ನು ವಿರೋಧಿಸಿ, ರಾಜ್ಯದ ವಿವಿಧ ರೈತಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಗಳು ಇದೇ ಸೆ.28ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.ಊಬರ್ ಚಾಲಕರ ಸಂಘ, ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆ ಸೇರಿದಂತೆ ಒಟ್ಟ 32 ಸಂಘಟನೆಗಳು ಈ ಬಂದ್‌ಗೆ ಬೆಂಬಲ ಸೂಚಿಸಿವೆ.

 ಈ ಕುರಿತಂತೆ ಇಂದು  ಸುದ್ದಿಗಾರಿಗೆ ಮಾಡಿದ ರೈತ ಸಂಘದ ಅಧ್ಯಕ್ಷ ಕೋಡಿ ಹಳ್ಳಿ ಚಂದ್ರಶೇಖರ್, ಸೆ.25ರಂದು ಕರ್ನಾಟಕ ಬಂದ್ ನಡೆಸುವ ಬದಲಾಗಿ ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್ ನಡೆಸಲಾಗುತ್ತಿದೆ. ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಕರ್ನಾಟಕ ಬಂದ್ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

 ಎಪಿಎಪಿ ತಿದ್ದುಪಡಿ ಕಾಯ್ದೆ ರೈತರಿಗೆ ಪೂರಕವಾದಂತ ಕಾಯ್ದೆ ಅಲ್ಲ. ಕಾರ್ಪೋರೇಟ್ ಕಂಪನಿಗಳಿಗೆ ಅವಕಾಶ ಮಾಡಿಕೊಡುವಂತ ಕಾಯ್ದೆಯಾಗಿದೆ. ಇವರು ಕಾರ್ಪೋರೇಟ್ ಕಂಪನಿಗಳ ಪರವೇ ಹೊರತು, ಜನಸಾಮಾನ್ಯ ರೈತರ ಪರವಾದವರಲ್ಲ ಎಂದು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.ಭೂಸುಧಾರಣೆ ತಿದ್ದುಪಡಿ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ವಿರೋಧಿ ಕಳೆದ ಎರಡ್ಮೂರು ದಿನಗಳಿಂದ ರೈತ ಪರ ಸಂಘಟನೆಗಳು ಬೆಂಗಳುರು ಸೇರಿದಂತೆ ರಾಜ್ಯದ ವಿವಿದೆಡೆ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿವೆ.ಈ ಮೊದಲ ಸೆ.25 ಕರ್ನಾಟಕ ಬಂದ್ ಮಾಡುವುದಾಗಿ ರೈತ ಸಂಘಟನೆಗಳು ಹೇಳಿದ್ದವು. ಆದ್ರೆ, ಇದೀಗ 25ರ ಬದಲಾಗಿ 28ಕ್ಕೆ ಬಂದ್‌ಗೆ ಕರೆ ನೀಡಿವೆ.

Previous 1,536 ವಲಸೆ ಕಾರ್ಮಿಕ ಕುಟುಂಬದ ಮಕ್ಕಳಿಗೆ ಗಣಿ ಜಿಲ್ಲೆ ಸರ್ಕಾರಿ ಶಾಲೆಯಲ್ಲಿ ಪ್ರವೇಶ
Next ನಿಗದಿಪಡಿಸಿದ ದಿನಾಂಕಗಳಲ್ಲೇ ಹಂಪಿ ಉತ್ಸವ ಆಚರಿಸಲು ಕರ್ನಾಟಕ ಜನಸೈನ್ಯದಿಂದ ಪ್ರತಿಭಟನೆ

You might also like

0 Comments

No Comments Yet!

You can be first to comment this post!

Leave a Reply