ಬಳ್ಳಾರಿಯ ನೂತನ ಎಸ್ಪಿಯಾಗಿ ಸೈದುಲ್ಲಾ ಅದಾವತ್ ಅಧಿಕಾರ ಸ್ವೀಕಾರ.

ಬಳ್ಳಾರಿಯ ನೂತನ ಎಸ್ಪಿಯಾಗಿ ಸೈದುಲ್ಲಾ ಅದಾವತ್ ಅಧಿಕಾರ ಸ್ವೀಕಾರ.

ಬಳ್ಳಾರಿ-

ಬಳ್ಳಾರಿಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೈದುಲ್ಲಾ ಅದಾವತ್ ಅವರು ಈ ದಿನ ಸಂಜೆಯೊತ್ತಿಗೆ ಅಧಿಕಾರ ಸ್ವೀಕರಿಸಿದ್ರು. ಬೆಳಿಗ್ಗೆ 10ರ ಸುಮಾರಿಗೆ ನೂತನ ಎಸ್ಪಿಯಾಗಿ ಸೈದುಲ್ಲಾ ಅದಾವತ್ ಅವರು ಅಧಿಕಾರ ಸ್ವೀಕರಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ನಿರ್ಗಮಿತ ಎಸ್ಪಿ ಸಿ.ಕೆ.ಬಾಬಾ ಅವರು ಅಧಿಕಾರ ಹಸ್ತಾಂತರಿಸಲು‌ ವಿಳಂಬಧೋರಣೆ ತೋರಿದ ಹಿನ್ನಲೆಯಲ್ಲಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ಸಂಜೆಯೊತ್ತಿಗೆ ನಡೆಯಿತು.

ಈ ದಿನ ಬೆಳಿಗ್ಗೆಯೇ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಲು ಸೈದುಲ್ ಅದಾವತ್ ಅವರು ಬಳ್ಳಾರಿಯ ಜಿಮ್ ಖಾನಾದಲ್ಲಿ ಕಾಯುತ್ತಾ ಕುಳಿತಿದ್ದರು. ಆದರೆ, ನಿರ್ಗಮಿತ ಎಸ್ಪಿ ಸಿ.ಕೆ.ಬಾಬಾ ಅವರು ಮಾತ್ರ ಎಸ್ಪಿ ವೃತ್ತದಲ್ಲಿರುವ ತಮ್ಮ ನಿವಾಸದಲ್ಲಿಯೇ ಕುಳಿತು ಕಾಲಹರಣ ಮಾಡಿದ್ರು. ಈಗ – ಅಗ ಬರಬಹುದು ಎಂಬ ಕಾತುರದಿಂದ ಕಾಯುತ್ತಾ ಕುಳಿತಿರೋ ನೂತನ ಎಸ್ಪಿ ಸೈದುಲ್ಲಾ ಅವರು, ಸರ್ಕಾರಿ ವಾಹನವನ್ನ ತಮ್ಮ ಬಳಿಯೇ ಇಟ್ಟುಕೊಂಡೇ ಕುಳಿತಿದ್ದರು. ಮಧ್ಯಾಹ್ನವಾದ್ರೂ ಕೂಡ ನಿರ್ಗಮಿತ ಎಸ್ಪಿ ಬಾಬಾ ಅವರು, ಪೊಲೀಸ್ ಜಿಮ್ ಖಾನ್ ಹತ್ತಿರ ಕೂಡ ಸುಳಿಯಲಿಲ್ಲ.

ಅಧಿಕಾರ ಹಸ್ತಾಂತರದ ಹೈಡ್ರಾಮಾ

ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಲು ಆಗಮಿಸಿದ ಸೈದುಲ್ಲಾ ಅದಾವತ್ ಹಾಗೂ ನಿರ್ಗಮಿತ ಎಸ್ಪಿ ಸಿ.ಕೆ.ಬಾಬಾ ಅವರ ನಡುವೆ ಈ ಅಧಿಕಾರ ಹಸ್ತಾಂತರದ ಹೈಡ್ರಾಮಾವೇ ನಡೆಯಿತು. ಆಗಸ್ಟ್ 27ರಂದು ಬಳ್ಳಾರಿ ಸಿ.ಕೆ. ಬಾಬಾ ಅವರಿಗೆ ವರ್ಗಾವಣೆ ಆದೇಶವಾಗಿತ್ತು. ಅಂದು ಸಂಜೆಯೇ ಆ ಆದೇಶವನ್ನ ತಡೆ ಹಿಡಿಯಲಾಗಿತ್ತು ಎನ್ನಲಾಗುತ್ತಿದೆ.‌ ಬಳಿಕ ಮತ್ತೊಮ್ಮೆ ಆದೇಶವನ್ನ ಹಿಂಪಡೆಯ ಲಾಗಿತ್ತು.

ಅಂದಿನಿಂದ ಇಂದಿನವರೆಗೂ ನಿರ್ಗಮಿತ ಎಸ್ಪಿ ಸಿಕೆ ಬಾಬಾ ಅವರು ಅಧಿಕಾರ ಹಸ್ತಾಂತರ ಮಾಡಲು ಹಿಂದೇಟು ಹಾಕಿದ್ದರು. ಅಧಿಕಾರ ಹಸ್ತಾಂತರ ಮಾಡಲು ಜನಪ್ರತಿನಿಧಿಗಳ ಮೌಖಿಕ ಅದೇಶಕ್ಕೆ ನಿರ್ಗ ಮಿತ ಎಸ್ಪಿ ಸಿ.ಕೆ. ಬಾಬಾ ಕಾದು ಕುಳಿತಿದ್ದರು. ಕೊನೆಗೂ ಜನಪ್ರತಿ ನಿಧಿಗಳಿಂದ ಯಾವುದೇ ಮೌಖಿಕ ಆದೇಶ ಬಾರದ ಕಾರಣ, ವ್ಯರ್ಥ ಪ್ರಯತ್ನ ಎಂಬುದನ್ನ ಅರಿತುಕೊಂಡ ನಿರ್ಗಮಿತ ಎಸ್ಪಿಯಾಗಿ ಅಧಿಕಾರ ಸ್ವೀಕರಿಸುವ ಸೈದುಲ್ಲಾ ಅದಾವತ್ ಗೆ ನಿರ್ಗಮಿತ ಎಸ್ಪಿ ಸಿ.ಕೆ.ಬಾಬಾ ಅವರು ಅಧಿಕಾರ ಹಸ್ತಾಂತರ ‌ಮಾಡಿ, ಎಲ್ಲರಿಗೂ ಆಲ್ ದಿ ಬೆಸ್ಟ್ ಅಂತ ಹೇಳಿ ಎಸ್ಪಿ ಕಚೇರಿಯಿಂದ ಹೊರ ನಡೆದ್ರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಎಸ್ಪಿ ಸೈದುಲ್ಲಾ ಅದಾವತ್ ಅವರು, ಈ ಜಿಲ್ಲೆಯ ಎಸ್ಪಿಯನ್ನಾಗಿ ಆಗಸ್ಟ್ 26 ರಂದೇ ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ನಾನು ಈ ದಿನ ಅಧಿಕಾರ ಸ್ವೀಕರಿಸಿರುವೆ‌. ನನಗೆ ಈ ಜಿಲ್ಲೆಯ ಎಸ್ಪಿಯಾಗಿ ಬಂದಿರೋದು ಹೆಮ್ಮೆ ಎನಿಸುತ್ತಿದೆ. ವಿಜಯನಗರ ಸಾಮ್ರಾಜ್ಯದ ಗತವೈಭವದ ಇತಿಹಾಸ ಹೊಂದಿರುವ ಈ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದ್ದಾರೆ.

Previous ತುಂಟ ಕಳ್ಳ ಕಿಚ್ಚನಿಗೆ ಕೋಟಿಗೊಬ್ಬನ ಗಿಫ್ಟ್..!
Next ರಾಗಿಣಿ ದ್ವಿವೇದಿಗೆ ಕಂಟಕ.

You might also like

0 Comments

No Comments Yet!

You can be first to comment this post!

Leave a Reply