ರಾಕಿಂಗ್ ಸನ್ ಡಿಫರಂಟ್ ನೇಮ್..!

ರಾಕಿಂಗ್ ಸನ್ ಡಿಫರಂಟ್ ನೇಮ್..!

ರಾಕಿಂಗ್ ಸ್ಟಾರ್ ಯಶ್ ಖುಷಿಯಲ್ಲಿದ್ದಾರೆ. ಪತಿಯ ಈ ಸಂತೋಷದಲ್ಲಿ ಪತ್ನಿ ರಾಧಿಕಾ ಪಂಡಿತ್ ಕೂಡ ಭಾಗಿ ಆಗಿದ್ದಾರೆ.

ಕನ್ನಡದ ಈ ತಾರಾ ದಂಪತಿಯ ಹರ್ಷಕ್ಕೆ ಕಾರಣ ಆ ಸೂಪರ್ ಸ್ಟಾರ್. ಈ ಸೂಪರ್ ಸ್ಟಾರ್ ಯಶ್ ಮನೆಯ ಹೊಸ ಬೆಳಕು. ವಯಸ್ಸು ದೊಡ್ಡದೇನೂ ಅಲ್ಲ. ಆದರೆ,ಈ ಸೂಪರ್ ಹೀರೋ ರೇಂಜ್ ದೊಡ್ಡದೇ ಇದೆ.

ಹೌದು.. ಈ ಲಿಟಲ್ ಹುಲಿಯ ಹೆಸರು ಯಥರ್ವ.. ಅಂದ್ರೆ ಪೂರ್ಣ, ಸಂಪೂರ್ಣ ಅಂತಲೇ ಅರ್ಥ.. ಅರ್ಥ ಪೂರ್ಣ ಹೆಸರಿನ ಹೀರೋನ ತಂದೆ ತಾಯಿ ಸೂಪರ್ ಸ್ಟಾರ್. ನಿಜ.. ಯಶ್ ಮತ್ತು ರಾಧಿಕಾ ಪುತ್ರನ ಹೆಸರ ಯಥರ್ವ..

ಯಶ್ ಹಾಗೂ ರಾಧಿಕಾ ತಮ್ಮ ಪುತ್ರನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಲಿ ಆಗ ಒಂದ್ ಪ್ರಶ್ನೇ ಏಳುತಿತ್ತು. ಅದುವೇ ಹೆಸರು. ಮಗನಿಗೆ ಏನ್ ಹೆಸರು..? ಯಾವಾಗ ಇಡ್ತೀರಾ ಅಂತ. ಆ ಪ್ರಕಾರ ಈಗ ರಾಕಿ ಭಾಯ್ ತಮ್ಮ ಪುತ್ರನಿಗೆ ಹೆಸರಿಟಿದ್ದಾರೆ. ಮನೆ ಮಂದಿ ಅಷ್ಟೇ ಸೇರಿ ನೇಮಿಂಗ್ ಸೆರಮನಿ ಮಾಡಿದ್ದಾರೆ.

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಏನೇ ಮಾಡಿದರು ಕೂಡ ಎಲ್ಲವೂ ವಿಶೇಷವಾಗಿಯೇ ಇರುತ್ತವೆ. ಪುತ್ರನ ಹೆಸರೂ ಸ್ಪೆಷಲ್ ಆಗಿಯೇ ಇಟ್ಟಿದ್ದಾರೆ. ಸಿನಿಮಾ ರೀತಿಯಲ್ಲಿಯೇ ಅದನ್ನ ಚಿತ್ರೀಕರಿಸಿದ್ದಾರೆ.

ಪುತ್ರನ ನೇಮಿಂಗ್ ಕಾರ್ಯಕ್ರಮದ ವೀಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿದ್ದಾರೆ. ಅಭಿಮಾನಿಗಳಿಗೂ ಈ ಮೂಲಕ ತಮ್ಮನೆ ಸಂತೋಷವನ್ನ ಹಂಚಿಕೊಂಡಿದ್ದಾರೆ. ಇಲ್ಲಿಗೆ ಯಶ್ ಪುತ್ರನ ಹೆಸರಿನ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ.ಮುಂದೇ ಏನು..? ವೇಟ್ ಮಾಡಿ
-ರೇವನ್ ಪಿ.ಜೇವೂರ್

Previous ನಮಗೂ ಇಂಥಾ ಮಾಸ್ತರ ಬೇಕು..!
Next ಅಜ್ಜಿಯ ಆಸೆ ಪೂರೈಸಿದ ಯುವ ಬ್ರಿಗೇಡ್

You might also like

0 Comments

No Comments Yet!

You can be first to comment this post!

Leave a Reply