ಸರ್ಕಾರಿ ವಸತಿ ಶಾಲೆಯ ಹೊರಗುತ್ತಿಗೆ ನೌಕರರ ಸೇವೆಯನ್ನ ಕಾಯಂಗೊಳಿಸಲು ಮನವಿ

ಸರ್ಕಾರಿ ವಸತಿ ಶಾಲೆಯ ಹೊರಗುತ್ತಿಗೆ ನೌಕರರ ಸೇವೆಯನ್ನ ಕಾಯಂಗೊಳಿಸಲು ಮನವಿ

ಬಳ್ಳಾರಿ-

ಜಿಲ್ಲೆಯ ಸಿರುಗುಪ್ಪ ತಾಲೂಕಿನ‌ ಸರ್ಕಾರಿ ವಸತಿ ಶಾಲೆಯ ಹೊರಗುತ್ತಿಗೆ ನೌಕರರ ಸೇವೆಯನ್ನ ಕಾಯಂಗೊಳಿಸಬೇಕು ಹಾಗೂ  ಬಾಕಿ ಉಳಿಸಿಕೊಂಡಿರುವ ನೌಕರರ ವೇತನವನ್ನ ಕೂಡಲೇ ರಾಜ್ಯ ಸರ್ಕಾರ ಪಾವತಿಸಬೇಕೆಂದು ಜಿಲ್ಲಾ ಪ್ರಥಮದರ್ಜೆ ಸಹಾಯಕರು, ಶುಶ್ರೂಷಕ ನೌಕರರ ಜಿಲ್ಲಾ ಸಮಿತಿಯು ಮನವಿ ಮಾಡಿಕೊಂಡಿದೆ.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ತೆರಳಿದ ನೌಕರರ ಜಿಲ್ಲಾ‌ ಸಮಿತಿಯ ಮುಖಂಡ ಎಂ.ಬಾಬು ನೇತೃತ್ವದ ನಿಯೋಗವು ಸಮಾಜ ಕಲ್ಯಾಣಾಧಿಕಾರಿ ಎನ್.ರಾಜಪ್ಪ ಅವರಿಗೆ ಈ ಕುರಿತು ಮನವಿ ಸಲ್ಲಿಸಿದ್ರು.

ಸಿರುಗುಪ್ಪ ಸರ್ಕಾರಿ ವಸತಿ ಶಾಲೆಯ ಹೊರಗುತ್ತಿಗೆ  ಆಧಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಥಮ ದರ್ಜೆಯ ಸಹಾಯಕರು, ಶುಶ್ರೂಷಕಿಯರು ಈ ಲಾಕ್ ಡೌನ್ ಅವಧಿಯಾದ ಏಪ್ರಿಲ್- ಮೇ, ಜೂನ್- ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಆ ಎಲ್ಲ ತಿಂಗಳ ವೇತನವನ್ನ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದು, ಕೂಡಲೇ ಈ ಬಾಕಿ ಉಳಿಸಿಕೊಂಡಿರೊ ವೇತನ  ಪಾವತಿಸಲೇ ಬೇಕೆಂದ್ರು. ಹಾಗೂ ಹಾಲಿ ಕರ್ತವ್ಯ ನಿರ್ವಹಿಸುತ್ತಿರು ವ ಸ್ಥಳದಲ್ಲಿಯೇ ಮುಂದುವರಿಸಿ ಸೇವಾ ಭದ್ರತೆಯನ್ನ ನೀಡಬೇಕು ಎಂದು ರಾಜ್ಯ ಸರ್ಕಾರವನ್ನ ಕೋರಿದ್ದಾರೆ. ಹೊರಗುತ್ತಿಗೆ ನೌಕರ ರಾದ ಶಂಭುಲಿಂಗ, ರಾಜು, ಮಹೇಶ, ಶಾಂತಿ, ಮಲ್ಲೇಶ್ವರಿ ಇದ್ದರು.

Previous ಹಡಗಲಿ ಸೇತುವೆ ದಿಢೀರನೆ ಕುಸಿತ ಕಾರು ಜಖಂ, ಸಂಪರ್ಕ ಕಡಿತ
Next ಗಾಂಜಾ ಮಾರಾಟ ಇಬ್ಬರ ಬಂಧನ

You might also like

0 Comments

No Comments Yet!

You can be first to comment this post!

Leave a Reply