ಅಂಗಡಿಗಳ ಮುಂದೆ ದರಪಟ್ಟಿ ಫಲಕ ಕಡ್ಡಾಯ.

ಅಂಗಡಿಗಳ ಮುಂದೆ ದರಪಟ್ಟಿ ಫಲಕ ಕಡ್ಡಾಯ.

ಚಿಕ್ಕಮಗಳೂರು, ಮಾ.೩೦

ದೇಶ ಸಂಪಊರ್ಣ ಲಾಕ್ ಡೌನ್ ಆಗಿ ಒಂದು ವಾರ ಕಳೆಯುತ್ತಿದೆ.ಿದಕ್ಕೆ ಬೆಚ್ಚಿ ಬಿದ್ದಿರುವ ಕೆಳವರ್ಗದ ಜನರು ಕಂಗಾಲಾಗಿದ್ದಾರೆ.ಇನ್ನು ಅವಶ್ಯಕ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು ಜನ ಮುಂದಿನ ದಿನಗಳಲ್ಲಿ ಜೀವನ ನಡೆಸುವುದು ಹೇಗೆ ಎನ್ನುವ ಚಿಂತೆಯಲ್ಲಿ ಇದ್ದಾರೆ.  

ದೇಶಾದ್ಯಂತ ಕೋವಿಡ್-೧೯ ಸೋಂಕು ತಡೆಗಟ್ಟುವ ಸಲುವಾಗಿ ಲಾಕ್ ಡೌನ್ ಘೋಷಿಸಲಾಗಿದ್ದು ಇಂತಹ ತುರ್ತುಪರಿಸ್ಥಿತಿಯಲ್ಲಿ ಅವಶ್ಯಕ ಆಹಾರ ಪದಾರ್ಥಗಳಾದ ದಿನಸಿ ಪದಾರ್ಥ, ಹಣ್ಣು-ತರಕಾರಿಗಳ ಮೇಲೆ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು ಹಾಗೂ ಜಿಲ್ಲೆಯ ಎಲ್ಲಾ ಕಿರಾಣಿ ಅಂಗಡಿಗಳಲ್ಲಿ ಹಾಗೂ ಹಣ್ಣು, ತರಕಾರಿ ಮಾರಾಟ ಮಾಡುವ ಅಂಗಡಿಗಳಲ್ಲಿ ಅವಶ್ಯಕ ಆಹಾರ ಪದಾರ್ಥಗಳಿಗೆ ಸಂಬಂಧಿಸಿದಂತೆ ತಮ್ಮಲ್ಲಿರುವ ದಾಸ್ತಾನು ವಿವರ ಮತ್ತು ವಸ್ತುಗಳ ಮಾರಾಟದ ದರವನ್ನು ಒಳಗೊಂಡ ಫಲಕವನ್ನು ಅಂಗಡಿ ಮುಂದೆ ಕಡ್ಡಾಯವಾಗಿ ಅಳವಡಿಸಬೇಕು ತಪ್ಪಿದಲ್ಲಿ ಕಾನೂನು ರೀತಿಯಲ್ಲಿ ಸೂಕ್ತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಡಾ.ಬಗಾದಿ ಗೌತಮ್ ಅವರು ತಿಳಿಸಿದ್ದಾರೆ. ಜಿಲ್ಲೆ ಸೇರಿದಂತೆ ರಾಜ್ಯದ ಕೆಲವು ಕಡೆಗಳಲ್ಲಿ ತಮ್ಮಲ್ಲಿ ಇರುವ ವಸ್ತುಗಳನ್ನು ಬೇಕಾ ಬಿಟ್ಟಿ ದರಕ್ಕೆ ನಾರಾಟ ಮಾಡುತಿದ್ದಾರೆ ಹೀಗಾಗಿ ಜಿಲ್ಲಾಧಿಕಾರಿಗಳ ಈ ಆದೇಶ ಜನರಲ್ಲಿ ಕೊಂಚ ನೆಮ್ಮದಿ ತಂದಿದೆ.

Previous ಹೊಸಪೇಟೆಯಲ್ಲಿ ಮೂರು ಕೊರೋನಾ ಸೊಂಕು ಪಾಸಿಟಿವ್ ದೃಢ,ಡಿಸಿ ನಕುಲ್. ಹೊಸಪೇಟೆ ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತನೆ.
Next ಏಪ್ರಿಲ್ನಲ್ಲಿ ಎರಡು ತಿಂಗಳ ಪಡಿತರ ವಿತರಣೆ.

You might also like

0 Comments

No Comments Yet!

You can be first to comment this post!

Leave a Reply