ಸಾರಿಗೆ ಸಂಸ್ಥೆಯ ನೂತನ  ಅಧ್ಯಕ್ಷರಾಗಿ ರಾಜಕುಮಾರ್ ಪಾಟೀಲ್ ತೇಲ್ಕೂರ ಪದಗ್ರಹಣ

ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ರಾಜಕುಮಾರ್ ಪಾಟೀಲ್ ತೇಲ್ಕೂರ ಪದಗ್ರಹಣ

ಕಲಬುರಗಿ-

 ಕಲಬುರಗಿಯ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಅವರು ಇಂದು ಕೇಂದ್ರ ಕಚೇರಿಯಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.ಪದಗ್ರಹಣ ಮಾಡಿ ಮಾತನಾಡಿದ ನೂತನ ಅಧ್ಯಕ್ಷರು, ಮುಂದಿನ ಎರಡು-ಮೂರು ವರ್ಷಗಳಲ್ಲಿ ಸಂಸ್ಥೆಯನ್ನು ಲಾಭದಾಯಕವಾಗಿಸುವುದಾಗಿ ಭರವಸೆ ನೀಡಿದರು.

 ಇನ್ಮುಂದೆ ನಷ್ಟ ಹಾಗೂ ಸೋರಿಕೆ ತಡೆಗೆ ಕ್ರಮಕೈಗೊಂಡು ಲಾಭದತ್ತ ಕೊಂಡೊಯ್ಯುವ ಮಾತುಗಳನ್ನಾಡಿದರು. ಇಲ್ಲಿಯವರೆಗೆ ಕೊರೋನಾ ಮಹಾಮಾರಿಯಿಂದಾಗಿ ಸಾರಿಗೆ ಸಂಸ್ಥೆಗಳು ಬಹಳಷ್ಟು ನಷ್ಟ ಅನುಭವಿಸಿದ್ದು, ಅದರಲ್ಲಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯೂ ಒಂದಾಗಿದೆ. ತೊಂದರೆ ಇದ್ದರೂ ಕೂಡ ಸಂಸ್ಥೆಯ ನೌಕರರಿಗೆ ಇದುವರಗೆ ನಮ್ಮ ಸರಕಾರ ಸಂಬಳ ನೀಡುತ್ತಾ ಬಂದಿದೆ.ಈಗಾಗಲೇ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ಸಂಚರಿಸುವ ಬಸ್ಸುಗಳು ಮಾಹಾಮಾರಿ ಕೊರೋನಾದಿಂದ ನಿಲ್ಲಿಸಲಾಗಿದ್ದು, ತಕ್ಷಣ ಸೇವೆಗಳನ್ನು ಪ್ರಾರಂಭಿಸಬೇಕಾದ ದೊಡ್ಡ ಸವಾಲು ನಮ್ಮ ಮುಂದಿದೆ ಎಂದು ತಿಳಿಸಿದರು.

 ಮಾನ್ಯ ಮುಖ್ಯಮಂತ್ರಿಗಳು ನನ್ನ ಮೇಲೆ ವಿಶ್ವಾಸವಿಟ್ಟು ಈ ಸ್ಥಾನ ನೀಡಿದ್ದಾರೆ. ಇವತ್ತು ಇಲ್ಲಿರುವ ಉಪಮುಖ್ಯಮಂತ್ರಿಗಳು ಹಾಗೂ ಎಲ್ಲರ ಸಲಹೆ ಸಹಕಾರದೊಂದಿಗೆ ಮುಂದಿನ ಮೂರು ವರ್ಷಗಳಲ್ಲಿ ಈ ಸಂಸ್ಥೆಯನ್ನು ಜನರು ನೆನಪಿನಲ್ಲಿಡುವ ರೀತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಉತ್ತುಂಗ ಸಂಸ್ಥೆಯನ್ನಾಗಿ ಮಾಡುವಂತಹ ಕನಸು ನನ್ನದಿದೆ. ಆ ಕನಸಿಗೆ ಈ ಭಾಗದ ಎಲ್ಲಾ ಶಾಸಕರು ಹಾಗೂ ಸಂಸದರ ಸಹಕಾರ ಕೋರಿದರು.ಅನೇಕ ಕ್ರಿಯಾ ಯೋಜನೆಗಳನ್ನು ಸಿದ್ದಪಡಿಸುತ್ತೇನೆ. ಪ್ರತಿಯೊಂದು ಹಳ್ಳಿ ಹಳ್ಳಿಗಳಿಗೆ ಬಸ್‍ಗಳನ್ನು ಕಲ್ಪಿಸಲು ಪ್ರಯತ್ನಿಸುತ್ತೇನೆ. ಹವಾನಿಯಂತ್ರಿತ ಬಸ್Àಗಳನ್ನು ತರಲು ಪ್ರಯತ್ನಿಸುತ್ತೇನೆ. ಎಲ್ಲಾ ಸಂಸದರು ಮತ್ತು ಶಾಸಕರು ಅಭಿಪ್ರಾಯ ಪಡೆದುಕೊಂಡು ಕೆಲಸವನ್ನು ನಿರ್ವಹಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

Previous ಕುರಿ ಸಾಕಾಣಿಕೆ ರೈತರ ಪಾಲಿಗೆ ಬ್ಯಾಂಕ್‍ನಲ್ಲಿ ಹಣ ಇದ್ದಹಾಗೆ
Next ನಟಿ ಸಂಜನಾ ಗಲ್ರಾನಿ ಮನೆ ಮೆಲೆ ಸಿಸಿಬಿ ದಾಳಿ.

You might also like

0 Comments

No Comments Yet!

You can be first to comment this post!

Leave a Reply