ರಾಗಿಣಿ ಮತ್ತು ರವಿಶಂಕರ್ ಐಶಾರಾಮಿ ಜೀವನ್‌ ಕಂಡು ದಂಗಾದ ಸಿಸಿಬಿ ಪೊಲೀಸ್….!?

ರಾಗಿಣಿ ಮತ್ತು ರವಿಶಂಕರ್ ಐಶಾರಾಮಿ ಜೀವನ್‌ ಕಂಡು ದಂಗಾದ ಸಿಸಿಬಿ ಪೊಲೀಸ್….!?

ಬೆಂಗಳೂರು-

 ಡ್ರಗ್ಸ್​ ಮಾಫಿಯಾ ಪ್ರಕರಣದಲ್ಲಿ ಬಂಧಿತನಾಗಿರುವ ನಟಿ ರಾಗಿಣಿ ದ್ವಿವೇದಿ ಅವರ ಆಪ್ತ ರವಿಶಂಕರ್​ನ ಐಷಾರಾಮಿ ಜೀವನ ಕಂಡು ಸಿಸಿಬಿ ಪೊಲೀಸರೇ ದಂಗಾಗಿದ್ದಾರೆ. ಒಬ್ಬ ಸಾಮಾನ್ಯ ಸರ್ಕಾರಿ ನೌಕರ ದಿನವೊಂದಕ್ಕೆ ಲಕ್ಷ ಲಕ್ಷ ಹಣ ಕರ್ಚು ಮಾಡುತ್ತಾನೆ ಎಂಬುದನ್ನು ಕೇಳಿದ ಪೊಲೀಸರೇ ಒಂದು ಕ್ಷಣ ಕಾಲ ದಂಗಾಗಿದ್ದಾರೆ. ಇನ್ನು ಆರ್​ಟಿಒ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಯಲ್ಲಿದ್ದ ರವಿಶಂಕರ್​, ಲ್ಯಾವೆಲ್ಲೆ ರಸ್ತೆಯ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ..

 ಆರ್ ಟಿ ಓ ಕಚೇರಿಯಲ್ಲಿ ದ್ವಿತೀಯ ದರ್ಜೆಯ ಸಹಾಯಕನಾಗಿರುವ ರವಿಶಂಕರ್ ಇಷ್ಟರ ಮಟ್ಟಿಗೆ ಬೆಳಯಲು ಕಾರಣ ಅಂದ್ರ ಶ್ರೀಮಂತರ ಮಕ್ಕಳು, ರಾಜಕಾರಣಿಗಳ ಮಕ್ಕಳ ಫ್ಯಾನ್ಸ್ ನಂಬರ್ ಗೀಳು . ಇದೇ ಗೀಳು ರವಿಶಂಕರ್ ಇಷ್ಟರ ಮಟ್ಟಿಗೆ ಬೆಳಯಲು ಕಾರಣವಾಗಿದೆ. ರವಿಶಂಕರ್ ಫ್ಯಾನ್ಸಿ ನಂಬರ್​ ಕೊಡುವ ವೇಳೆ ಹಲವು ಪ್ರಭಾವಿ ಉದ್ಯಮಿಗಳ ರಾಜಕಾರಣಿಗಳ ಪರಿಚಯವಾಗಿದ್ದು, ಅವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದ. ಈ ರೀತಿಯಲ್ಲಿ ಪರಿಚಯವಾದ ರವಿಶಂಕರ್ ಅವರೊಂದಿಗೆ ಕಚೇರಿಯ ಸಣ್ಣ ಪುಟ್ಟ ಕೆಲಸಗಳನ್ನು ಸಲಿಸಾಗಿ ಮಾಡಿ ಕೊಡುತಿದ್ದ ಇದೇ ಲಾರಣಕ್ಲೆ ದೊಡ್ಡವರ ಸಂಘ ರವಿಶಂಕರ್ ಗೆ ಬೆಳೆಯಿತು. ಹೀಗೆ ಬೆಳದ ಸ್ನೇಹ ಕಳೆದ ನಾಲ್ಕು ವರ್ಷಗಳ ಹಿಂದೆ ಉದ್ಯಮಿಯೊಬ್ಬರು ಆಯೋಜಿಸಿದ್ದ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದ ರವಿಶಂಕರ್​ಗೆ ನಟಿ ರಾಗಿಣಿ ದ್ವಿವೇದಿ ಪರಿಚಯವಾಗಿದ್ದರು. ಕ್ರಮೇಣ ಇಬ್ಬರ ನಡುವೆ ಹೆಚ್ಚು ಆಪ್ತತೆ ಬೆಳೆಯಿತು.

 ಹೀಗೆ ಪರಿಚಯವಾದ ರವಿಶಂಕರ್ ರಾಗಿಣಿ ಅವರ ಜೊತೆಯಲ್ಲಿ ತುಂಬಾ ಕಾಣಿಸಿಕೊಂಡ. ರಾಗಿಣಿ ಅಭಿನಯಿಸಿದ್ದ ಸಿನಿಮಾಕ್ಕೆ ಸಂಬಂಧಿಸಿದ ಪ್ರತಿಯೊಂದು ಕಾರ್ಯಕ್ರಮ ಹಾಗೂ ಪಾರ್ಟಿಯಲ್ಲಿ ರವಿಶಂಕರ್​ ಪಾಲ್ಗೊಳ್ಳುತ್ತಿದ್ದ. ಇವರಿಬ್ಬರ ನಡುವೆ ಆತ್ಮೀಯತೆ ಇತ್ತು. ಅಲ್ಲದೆ, ಬೆಂಗಳೂರು ಮಾತ್ರವಲ್ಲದೆ ಗೋವಾ ಸೇರಿದಂತೆ ಹೊರ ರಾಜ್ಯಗಳಿಗೂ ತೆರಳಿ ಪಾರ್ಟಿ ಮಾಡಿದ್ದರು ಎನ್ನಲಾಗಿದೆ.

 ಡ್ರಗ್ಸ್​ ಪೂರೈಕೆ ಪ್ರಕರಣದ ಕಿಂಗ್​ಪಿನ್​ ಎನ್ನಲಾದ ಬಂಧಿತ ವೀರೇನ್​ ಖನ್ನಾ ಆಯೋಜಿಸುತ್ತಿದ್ದ ‘ಡ್ರೈವ್​ ಇನ್​ ಥಿಯೇಟರ್​’ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಇದಕ್ಕೆ ತಗುಲುವ ವೆಚ್ಚವನ್ನು ರವಿಶಂಕರ್ ಕೊಡುತಿದ್ದ ರವಿಶಂಕರ್​ನ ಐಷಾರಾಮಿ ಜೀವನದ ಬೆನ್ನು ಬಿದ್ದಿರುವ ಸಿಸಿಬಿ ಪೊಲೀಸರು, ಆಸ್ತಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬ್ಯಾಂಕ್​ ವಿವರವನ್ನು ಪರಿಶೀಲಿಸುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ಸಿಸಿಬಿ ಪೊಲೀಸರು ಇತ‌ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಈತ ಯಾರ್ ಯಾರ ಜೊತೆ ಸಂಪರ್ಕ ಇದೆ ಎನ್ನುವ ಮಾಹಿತಿಯನ್ನು ಈಗಾಗಲೇ ಸಿಸಿಬಿ ಪೊಲೀಸರು ಕಲೆ ಹಾಕಿದ್ದಾರೆ . ಇದೇ ಕಾರಣಕ್ಕೆ ಸಿಸಿಬಿ ಪೊಲೀಸರು ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆಗೆ ಕರೆಯುತಿದ್ದಾರೆ….

Previous ಜಿಲ್ಲೆಯಲ್ಲಿಂದು ಹೊಸದಾಗಿ 325 ಜನರಿಗೆ ಕೊರೋನಾ ಸೋಂಕು ದೃಢ
Next ಇಂದಿನಿಂದ ನಮ್ಮ ಮೆಟ್ರೊ ಪ್ರಾರಂಭ…

You might also like

0 Comments

No Comments Yet!

You can be first to comment this post!

Leave a Reply