ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ತನಿಖಾ ತಂಡದ ಮೇಲೆ ಒತ್ತಡ ಹೇರಿದ ರಾಜಕಾರಣಿ..?

ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ತನಿಖಾ ತಂಡದ ಮೇಲೆ ಒತ್ತಡ ಹೇರಿದ ರಾಜಕಾರಣಿ..?

ಚಿಕ್ಕಮಗಳೂರು

 ಸ್ಯಾಂಡಲ್ವುಡ್ ಡ್ರಗ್ ಮಾಫಿಯಾವನ್ನ ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸ್ ಇಲಾಖೆ ಒಬ್ಬರನ್ನು ಕರೆಸಿ ವಿಚಾರಣೆ ನಡೆಸುತ್ತಿದೆ. ಆದ್ರೆ ಸಿಸಿಬಿ ಪೊಲೀಸ್ ವಿಚಾರಣೆಯನ್ನು ಹತ್ತಿಕ್ಕಿ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ. ಈ ರೀತಿಯ ಪ್ರಕರಣಗಳಲ್ಲಿ  ಕೆಲವೊಮ್ಮೆ ವಿಷಯಾಂತರಗೊಳಿಸುವ ಪ್ರಯತ್ನವೂ ನಡೆಯುತ್ತಿದೆ.

 ಆದರೆ, ಸರ್ಕಾರ ಇದ್ಯಾವುದಕ್ಕೂ ಬಗ್ಗುವುದಿಲ್ಲ ಎಂದು ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು , ಡ್ರಗ್ ಮಾಫಿಯಾ ಇಂದು-ನಿನ್ನೆಯದ್ದಲ್ಲ. ಆಗಾಗ ನಿಯಂತ್ರಿಸುವ ಕೆಲಸ ನಡೆಯುತ್ತಿದ್ದರೂ ಕೂಡ ಪೂರ್ಣ ಪ್ರಮಾಣದಲ್ಲಿ ಬೇರು ಸಹಿತ ಕಿತ್ತು ಹಾಕುವ ಕೆಲಸ ಸಾಧ್ಯವಾಗಿಲ್ಲ. ಈಗ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. 84ಕ್ಕೂ ಹೆಚ್ಚು ಜನರನ್ನ ವಿಚಾರಣೆಗಾಗಿ ಕರೆದೊಯ್ದು ಕೆಲವರನ್ನ ಮೇಲ್ನೋಟದ ಸಾಕ್ಷ್ಯಾಧಾರಗಳ ಆಧಾರದಲ್ಲಿ ಕಸ್ಟಡಿಗೆ ತೆಗೆದುಕೊಳ್ಳುವ ಕೆಲಸವಾಗಿದೆ. ಕೆಲವರನ್ನ ವಿಚಾರಣೆಗೊಳಪಡಿಸಿ ಬಿಡಲಾಗಿದೆ.

 ಇದರಿಂದಲೇ ಗೊತ್ತಾಗುತ್ತೆ ಸರ್ಕಾರ ರಾಜೀ ಮಾಡಿಕೊಂಡಿಲ್ಲ ಗಂಭೀರುವಾಗಿ ಪರಿಗಣಿಸಿದೆ ಎಂದು ಎಂದರು. ಯಾವ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಈಗಾಗಲೇ ಗೃಹಸಚಿವರು ಹೇಳಿದ್ದಾರೆ. ಎಷ್ಟೆ ಪ್ರಭಾವಿಗಳಿದ್ದರೂ ಗಂಭೀರವಾಗಿ ತೆಗೆದುಕೊಳ್ತೀವಿ ಮತ್ತು ಬೇರು ಸಹಿತ ಕಿತ್ತು ಹಾಕುವ ಕೆಲಸ ಮಾಡ್ತೀವಿ ಎಂದಿದ್ದಾರೆ. ಇದು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಹೊರರಾಜ್ಯ ಹಾಗೂ ಹೊರದೇಶದ ಸಂಪರ್ಕವೂ ಇದೆ. ಇನ್ನೂ ಮೇಲ್ನೋಟಕ್ಕೆ ಇದು ಕೆಲವೆಡೆ ಭಯೋತ್ಪಾದಕರ ಜೊತೆ. ರಾಜಕೀಯ ವ್ಯಕ್ತಿಗಳ ಜೊತೆ, ಕೆಲವೆಡೆ ಸಿನಿಮಾ ನಟರು, ಸೆಲಿಬ್ರಿಟಿಗಳ ಜೊತೆಯೂ ತಳುಕು ಹಾಕಿಕೊಂಡಿದೆ. ಯಾರೇ ಇದ್ರು ಸರಿಯೇ. ಯುವಜನರನ್ನ ಈ ಪಿಡುಗಿನಿಂದ ಮುಕ್ತಗೊಳಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಇದನ್ನ ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡಿಸುತ್ತಿದ್ದೇವೆ ಎಂದರು.

 ಇನ್ನು ಪ್ರಭಾವಿ ರಾಜಕಾರಣಿ ಒಬ್ಬರು ರಾಗಿಣಿ ಪರವಾಗ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ . ಪಾಪ ಅವರನ್ನು ಎಷ್ಟು ಹೊತ್ತು ಅಂಥಾ ವಿಚಾರಣೆ ಮಾಡುತ್ತೀರಾ ಹೇಳಿಕೆ ಪಡೆಯಿರಿ ಬೇಗ ಬಿಟ್ಟು ಬಿಡಿ ಎಂದು ಪದೇ ಪದೇ ಕರೆ ಮಾಡಿದ್ದಾರಂತೆ. ಆದ್ರೆ ಇದಕ್ಕೆ ಉತ್ತರ ನೀಡಿದ ಪೊಲೀಸ್ ನ ಹಿರಿಯ ಅಧಿಕಾರಿ ಒಬ್ಬರು , ಓಕೆ ಸರ್ …ಆದಷ್ಟೂ ಬೇಗ ಬಿಟ್ಟು ಕಳಿಸುತ್ತೆವೆ. ಅಂಥಾ ಹೇಳಿ ಮತ್ತೆ ವಿಚಾರಣೆ ಆರಂಭ ಮಾಡಿದ್ದಾರೆ…

Previous ಬಳ್ಳಾರಿಯಲ್ಲಿಂದು ಹೊಸದಾಗಿ 267 ಕೊರೊನಾ ಪಾಸಿಟಿವ್ ಕೇಸ್ ಗಳು‌ ಪತ್ತೆ
Next ಅಬಕಾರಿ ಅಕ್ರಮ ಹಾಗೂ ಕಳ್ಳಭಟ್ಟಿ ಸಾರಾಯಿ ನಿರ್ಮೂಲನೆಗೆ ಕ್ರಮ

You might also like

0 Comments

No Comments Yet!

You can be first to comment this post!

Leave a Reply