ಮನೆಯ ಹಿತ್ತಲಲ್ಲಿ ಬೆಳೆದ ಗಾಂಜಾ ವಶಕ್ಕೆ ಪಡೆದ ಪೊಲೀಸ್

ಮನೆಯ ಹಿತ್ತಲಲ್ಲಿ ಬೆಳೆದ ಗಾಂಜಾ ವಶಕ್ಕೆ ಪಡೆದ ಪೊಲೀಸ್

ಬಳ್ಳಾರಿ-

ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಬಯಲಾಗುತ್ತಿದ್ದಂತೆ ರಾಜ್ಯದಲ್ಲಿ ಗಾಂಜಾ ಅಡ್ಡಾಗಳ ಮೇಲೆ ಪೊಲೀಸರು ದಾಳಿ ಮಾಡುತ್ತಿದ್ದಾರೆ. ಗಣಿ ನಾಡು ಬಳ್ಳಾರಿಯಲ್ಲಿ ಸಹ ಪೊಲೀಸರು ದಾಳಿ ಮಾಡಿದ್ದು , ಮನೆಯ ಹಿತ್ತಲಲ್ಲಿ ಬೆಳೆದ ಗಾಂಜಾವನ್ನು ಪೊಲೀಸರು ದಾಳಿ‌ಮಾಡಿ ವಶಪಡಿಸಿಕೊಂಡಿದ್ದಾರೆ. ಬಳ್ಳಾರಿಯ ಜಿಲ್ಲೆಯ ಸಂಡೂರು ತಾಲೂಕಿನ ಮರ್ತಾಜನ ಹಳ್ಳಿಯ ಪಾಪಯ್ಯ ಎಂಬುವವರು ತಮ್ಮ ಮನೆಯ ಹಿತ್ತಲಲ್ಲಿ ಗಾಂಜಾ ಬೆಳೆದಿದ್ದರು. ಖಚಿತ ಮಾಹಿತೆ ಮೇರೆಗೆ ದಾಳಿ ಮಾಡಿದ ಡಿ ಎಸ್ ಪಿ ಹರೀಶ್ ಅವರ ನೇತ್ರತ್ವದ ತಂಡ ಸುಮಾರು 16 ಕೆಜೆ ಅಷ್ಟು ಗಾಂಜಾ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ. ಇನ್ನು ಮನೆಯ ಮಾಲೀಕ ಹಾಗೂ ಗಾಂಜಾ ಬೆಳೆದ ಆರೋಪಿ ಪಾಪಯ್ಯ ತಲೆ ಮರೆಸಿಕೊಂಡಿದ್ದಾನೆ. ಈತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Previous ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗುವುದಿಲ್ಲ.
Next ನೂರಾರು ಎಕರೆ ಅರಣ್ಯ ಭೂಮಿಯಲಿ ರೈತರ ಉಳುಮೆ; ರೈತರ ಒಕ್ಕಲೆಬ್ಬಿಸಿರೋದನ್ನ ತಡೆಯಲು ಮುಂದಾದ ಸಂಸದ

You might also like

0 Comments

No Comments Yet!

You can be first to comment this post!

Leave a Reply