ಇಂದಿನಿಂದ ನಮ್ಮ ಮೆಟ್ರೊ ಪ್ರಾರಂಭ…

ಇಂದಿನಿಂದ ನಮ್ಮ ಮೆಟ್ರೊ ಪ್ರಾರಂಭ…

ಬೆಂಗಳೂರು-

 ಕಳೆದ ಮಾರ್ಚನಿಂದ ರಾಜ್ಯದಲ್ಲಿ ಅಷೇ ಅಲ್ಲದೇ ಇಡೀ ಜಗತ್ತನ್ನೆ ಸ್ತಭ್ದವಾಗಿ ಮಾಡಿತ್ತು ಕೊರೊನಾ. ರಾಜ್ಯದಲ್ಲಿ ಕೊರೊನಾ ಕಾಣಿಸಿಕೊಂಡಾಗಿನಿಂದ ಮೆಟ್ರೊ ಸೇವೆಯನ್ನು ರಾಜ್ಯ ಸರ್ಕಾರ ಬಂದ್ ಮಾಡಿತ್ತು. ಇವತ್ತಿನಿಂದ ರಾಜ್ಯದಲ್ಲಿ ಮೆಟ್ರೊ ಸಂಚಾರ ಪ್ರಾರಂಭವಾಗಿದೆ. ಎಲ್ಲ ವಿಕ್ಕಟ್ಟುಗಳ ನಡುವೆಯು, ಜನರ ಓಡಾಟಕ್ಕೆ  ಅನುಕೂಲವಾಗಲೆಂದು ಈ ಯೋಜನೆಯನ್ನು ಪ್ರಾರಂಭ ಮಾಡಲಾಗಿದೆ.

 ಕೊರೊನಾ ಸೋಂಕು ರಾಜ್ಯದಲ್ಲಿ ಇನ್ನು ಹೆಚ್ಚಾಗುತ್ತಲೆ ಇದೆ, ಹೊರತು ಕಡಿಮೆ ಆಗುತ್ತಿಲ್ಲ. ಇದನ್ನು ಸರ್ಕಾರ ಗಮನದಲ್ಲಿ ಇಟ್ಟು ಕೊಂಡು ಕೇಲವು ನಿಯಮಗಳನ್ನು ಮಾಡಿ ಮೆಟ್ರೊ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ ಧರಿಸುವುದು, ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು, ಪ್ರಯಾಣಿಕರು ತಮ್ಮ, ತಮ್ಮ ಮಧ್ಯೆ  ಕನಿಷ್ಟ ಅಂತರವನ್ನು ಕಾಪಾಡುವುದು ಬಹು ಮುಖ್ಯವಾಗಿದೆ.

 ಈಗಾಗಲೇ ಎಲ್ಲ ಮೆಟ್ರೊ ನಿಲ್ದಾಣಗಳನ್ನು ಶುಚಿಗೊಳಿಸಿ, ಎಲ್ಲ ಸ್ಥಳಗಳು ಮತ್ತು ಎಲ್ಲ ವಸ್ತುಗಳನ್ನು ಸ್ಯಾನಿಟೈಸ್ ಮಾಡಿ, ಪ್ರಯಾಣಿಕರ, ಪ್ರಯಾಣಕ್ಕೆ ಎಲ್ಲ ರೀತಿಯಿಂದಲೂ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಸರ್ಕಾರ ಹೊರಡಿಸಿರಿವ ಎಲ್ಲ ನಿಯಮಗಳನ್ನು ಪಾಲಿಸುವುದು ಮಾತ್ರ ಕಡ್ಡಾಯವಾಗಿದೆ ಎಂದು ಇಲಾಖೆ ತಿಳಿಸಿದೆ.

Previous ರಾಗಿಣಿ ಮತ್ತು ರವಿಶಂಕರ್ ಐಶಾರಾಮಿ ಜೀವನ್‌ ಕಂಡು ದಂಗಾದ ಸಿಸಿಬಿ ಪೊಲೀಸ್....!?
Next ಚಂದ್ರಯಾನ-3 ಕ್ಕೆ ಮೂಹರ್ತ ಪಿಕ್ಸ್.

You might also like

0 Comments

No Comments Yet!

You can be first to comment this post!

Leave a Reply