ಉತ್ತರ ಭಾರತದ ನಟಿಯರಿಂದ, ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು – ಜಗ್ಗೇಶ್

ಉತ್ತರ ಭಾರತದ ನಟಿಯರಿಂದ, ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು – ಜಗ್ಗೇಶ್

ಬೆಂಗಳೂರು-

ಕಳೆದ ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಡ್ರಗ್ ಮಾಫಿಯಾ ತುಂಬಾನೆ ಸದ್ದು ಮಾಡುತ್ತಿದೆ.  ಅದರಲ್ಲಿ ಯುವ ನಟ,ನಟಿಯರ ಭಾಗಿಯಾಗಿದ್ದಾರೆ ಎಂಬ ಸುದ್ದಿ ಎಲ್ಲೇಡೆ ಹರಿದಾಡುತ್ತಿತ್ತು. ಇದಕ್ಕೆ ಸಂಭಂದಿಸಿದಂತೆ ಕಳೆದ ಶುಕ್ರವಾರ ಸಿಸಿಬಿ ಪೋಲೀಸರು ರಾಗಿಣಿ ದ್ವಿವೇದಿಯನ್ನು ಬಂಧನ ಮಾಡಿದ್ದಾರೆ. ಇವರೊಂದಿಗೆ ಇನ್ನು ಕೇಲವರನ್ನು ಬಂಧನ ಮಾಡಲಾಗಿದೆ. ಈ ಜಾಲದಲ್ಲಿ ಇನ್ನು ಅನೇಕರ ನಂಟಿದೆ ಎಂದು ಪೋಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.

ಡ್ರಗ್ ಮಾಫಿಯಾ ಸಂಭಂದಿಸಿದ ವಿಷಯ, ಇದು ಸ್ಯಾಂಡಲ್ ವುಡ್ ನಿಂದ, ಬಾಲಿವುಡ್ ವರೆಗೂ  ಹಬ್ಬಿದೆ ಇದರ ವಿಷಯವಾಗಿ ಅಲ್ಲಿಯೂ ಕೆಲವರನ್ನು ಬಂಧನ ಮಾಡಲಾಗಿದೆ. ಡ್ರಗ್ ಮಾಫಿಯಾದಿಂದ ಕನ್ನಡ ಚಿತ್ರರಂಗದ ಮಾನ ಹರಾಜಾಗುತ್ತಿದೆ, ಇದಕ್ಕೆ ಯುವ ನಟ ನಟಿಯರು ಕಾರವಾರುವುದಕ್ಕೆ ಕನ್ನಡದ ಹಿರಿಯ ನಟ ಎಂದು ಖ್ಯಾತರಾಗಿರುವ ಜಗ್ಗೇಶ್ ಅವರು ತುಂಬಾ ಬೇಸರ ವ್ಯಕ್ತ ಪಡಿಸಿದ್ದಾರೆ.

ಕನ್ನಡ ಚಿತ್ರರಂಗದ ಹೆಸರನ್ನು ಹಾಳು ಮಾಡುತ್ತಿರುವ, ಈ ಡ್ರಗ್ ಕೇಸ್ ನಲ್ಲಿ ಯಾರೆ ಇದ್ದರು ಅವರಿಗೆ ತಕ್ಕ ಶಿಕ್ಷೆಯಾಗಲೇಬೇಕು.  ಉತ್ತರ ಭಾರತದಿಂದ ಬಂದು ಕನ್ನಡ ಚಿತ್ರರಂಗವನ್ನು ಇಷ್ಟು ದಿನ ಬೆಳೆಸಿಕೊಂಡು ಬಂದಂತಹ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಅಲ್ಪ ಸ್ವಲ್ಪ ಕನ್ನಡ ಗೊತ್ತಿದೆ ಎಂದು ಇಲ್ಲಿ ನೆಲೆಸಿ ಇಂತಹ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ.

ಜಗ್ಗೇಶ್ ಅವರು ಉತ್ತರ ಭಾರತದ ನಟಿಯರ ಮೇಲೆ ಯಾಕೆ ಈ ರೀತಿಯಾಗಿ ಮಾತನಾಡಿದ್ದಾರೆ ಎಂದರೆ ಈಗಾಗಲೇ ಡ್ರಗ್ ಮಾಫಿಯಾದಲ್ಲಿ ಕೇಳಿ ಬಂದಿರುವ ಹೆಸರುಗಳಲ್ಲಿ, ರಾಗಿಣಿ ದ್ವಿವೇದಿ ಪಂಜಾಬ ಮೂಲದವರಾಗಿದ್ದಾರೆ  ಮತ್ತು ಸಂಜನಾ ಗರ್ಲಾನಿ ಉತ್ತರ ಭಾರತದವರಾಗಿದ್ದಾರೆ. ಹಾಗಾಗಿಯೆ ಜಗ್ಗೇಶ್ ಅವರು ಈ ರೀತಿಯಾಗಿ ಮಾತನಾಡಿದ್ದಾರೆ. ಬಂದಿದ್ದು ಬೇರೆ ರಾಜ್ಯದಿಂದ, ಆದರೆ ಹೆಸರು ಮಾಡಿಕೊಂಡು ಬದುಕುತ್ತಿರುವುದು ಇಲ್ಲಿ ಮತ್ತು ಇಂತಹ ಕೆಟ್ಟ ಕೆಲಸಗಳನ್ನು ಇಲ್ಲಿಯೇ ಮಾಡುತ್ತಿದ್ದಾರೆ.

ಹಾಗಾಗಿಯೇ ನಮ್ಮ ನಟ ನಟಿಯರು ಯಾರು ಇದರಲ್ಲಿ ಇಲ್ಲ, ಅವರು ಯಾರು ಕೂಡಾ ಇಂತಹ ಕೃತ್ಯಕ್ಕೆ  ಕೈ ಹಾಕಲ್ಲ . ಅದಕ್ಕೆ ನಮ್ಮವರನ್ನೆ ಬೇಳೆಸೊನಾ ಎಂಬ ಅರ್ಥಕ್ಕೆ ಸೀಮಿತವಾಗುವಂತೆ ಜಗ್ಗೇಶ್ ಅವರು ಡ್ರಗ್ ಮಾಫಿಯಾದಿಂದ ಕನ್ನಡ ಚಿತ್ರರಂಗದ ಮೇಲೆ ಆಗುತ್ತಿರುವ ಪರಿಣಾಮದ ಕುರಿತಾಗಿ ಈ ರೀತಿಯಾಗಿ ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸಿದ್ದಾರೆ.

Previous ತಂಬಾಕು ಉತ್ಪನ್ನ ಮಾರಾಟಗಾರರ ಮೇಲೆ ದಾಳಿ
Next ಜೈನ್ ಗುತ್ತಿಗೆ ಕಂಪನಿ ಕಪ್ಪು ಪಟ್ಟಿ ಸೇರ್ಪಡೆಗೆ ನಿರ್ಧಾರ

You might also like

0 Comments

No Comments Yet!

You can be first to comment this post!

Leave a Reply