ಹೊಸ ಬೋರವೆಲ್ಗಳನ್ನು ಕೊರೆಯುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ.

ಹೊಸ ಬೋರವೆಲ್ಗಳನ್ನು ಕೊರೆಯುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ.

ಬೀದರ್

ಜೆನವರಿ-30-ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದನ್ನು ನಿವಾರಿಸಲು ಜಿಲ್ಲಾದ್ಯಂತ ಹೊಸ ಬೋರವೆಲ್‍ಗಳನ್ನು ಕೊರೆಯುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಸತತವಾಗಿ 3 ವರ್ಷಗಳಿಂದ ಬರ ಪರಿಸ್ಥಿಯಿಂದ 2019-20ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ ಜಿಲ್ಲೆಯ ಆಣೆಕಟ್ಟು, ಕೆರೆಕಟ್ಟೆ ಹಾಗೂ ಬಾವಿಗಳಲ್ಲಿ ನೀರಿನ ಮಟ್ಟ ಕುಸಿತವು ತೀವ್ರವಾಗಿರುತ್ತದೆ. ಗಣನೀಯವಾಗಿ ಅಂತರ್ಜಲ ನೀರಿನ ಮಟ್ಟವು ಸಹ ಕುಸಿಯುತಿದ್ದು, ಇದರಿಂದಾಗಿ ಮುಂಬರುವ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಂಭವಿರುತ್ತದೆ. ಆದ್ದರಿಂದ ಜಿಲ್ಲಾದ್ಯಂತ ಹೊಸದಾಗಿ ಕೊರೆಯುವ ಬೋರ್‍ವೆಲ್‍ಗಳನ್ನು ನಿಷೇಧಿಸುವುದು ಅತೀ ಅವಶ್ಯಕವಾಗಿರುವುದರಿಂದ ಈ ಆದೇಶ ಹೊರಡಿಸಲಾಗಿದೆ. ಹೊಸ ಕೊಳವೆ ಬಾವಿ ಕೊರೆಯುದು ಅತೀ ಅವಶ್ಯಕವಾಗಿದ್ದಲ್ಲಿ ಜಿಲ್ಲಾಡಳಿತದಿಂದ ಅನುಮತಿ ಪಡೆದು ಕೊರೆಯಲು ಜಿಲ್ಲಾಧಿಕಾರಿಗಳು ಆದೇಶಿದ್ದಾರೆ.

Previous ಹುನಗುಂದ : ಕರೆ ಮಾಡಿದಲ್ಲಿ ಅಗತ್ಯ ವಸ್ತುಗಳು ಮನೆ ಬಾಗಿಲಿಗೆ ..!
Next ವ್ಯಾಲೆಂಟೇನ್ಸ್ ಡೇಗೆ ಮನಸ್ಸಿನ ಮಾತು ಬಿಚ್ಚಿಟ್ಟ ರಶ್ಮಿಕಾ.

You might also like

0 Comments

No Comments Yet!

You can be first to comment this post!

Leave a Reply