ಬಡವರಿಗೆ ಮನೆಗಳನ್ನು ನೀಡುವುದು ನನ್ನ ಉದ್ದೇಶ.

ಬಡವರಿಗೆ ಮನೆಗಳನ್ನು ನೀಡುವುದು ನನ್ನ ಉದ್ದೇಶ.

ಮೈಸೂರು-

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ವಿ.ರಾಜೀವ್ ಅವರು ಪ್ರಾಧಿಕಾರದಿಂದ ಕೈಗೆತ್ತಿಕೊಳ್ಳಬೇಕಾದ ಗುಂಪು ವಸತಿ ಯೋಜನೆಗಳ ಸ್ಥಳಗಳು, ರೈತ ಸಂತೆ ಮತ್ತು ಕಿರು ಮಾರುಕಟ್ಟೆ ಸ್ಥಳಗಳನ್ನು ಸೋಮವಾರ ಪರಿವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಧ್ಯಮ ಮತ್ತು ಕೆಳಮಧ್ಯಮ ಜನರಿಗೆ ಮನೆಗಳನ್ನು ನೀಡುವುದೇ ನನ್ನ ಮುಖ್ಯ ಉದ್ದೇಶವಾಗಿದೆ. ಈ ದೃಷ್ಠಿಕೋನದಲ್ಲಿ ತುಂಬಾ ಕಾಳಜಿವಹಿಸಿ ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ಪಡೆಯುವುದಕ್ಕೆ ಕ್ರಮವಹಿಸಲಾಗುವುದು ಎಂದು ಹೇಳಿದರು.‌ ಗುಂಪು ಮನೆಗಳ ಯೋಜನೆಯಡಿಯಲ್ಲಿ ಮನೆ ನಿರ್ಮಿಸಬೇಕೆಂದು ಪ್ರಾಧಿಕಾರವು 2012ರಲ್ಲಿ ನಿರ್ಣಯ ಮಾಡಿತ್ತು. ಅಂತಹ ಜಾಗಗಳನ್ನು ಇಂದಿನ ದಿನಗಳಿಗೆ ಯಾವ ಮಟ್ಟದಲ್ಲಿ ಅಭಿವೃದ್ಧಿ ಪಡಿಸಬೇಕು ಎಂಬ ದೃಷ್ಠಿಕೋನದಿಂದ ಸ್ಥಳಗಳನ್ನು ವೀಕ್ಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಯೋಜನೆಯಲ್ಲಿ ನನ್ನ ಪ್ರಕಾರ ಸುಮಾರು ಹತ್ತು ಸಾವಿರ ಮನೆಗಳನ್ನು ನಿರ್ಮಿಸಿ, ಜನರಿಗೆ ಉಪಯೋಗವಾಗುವಂತೆ ಅಗತ್ಯ ಸೌಲಭ್ಯ ಕಲ್ಪಿಸುವ ಆಲೋಚನೆ ಇದೆ. ಇದರ ಜೊತೆ ಬೇರೆ ಪ್ರದೇಶಗಳನ್ನು ಪಡೆದು ನಿರ್ಮಾಣ ಮಾಡುವುದಕ್ಕೆ ಚಿಂತಿಸಲಾಗುವುದು ಎಂದರು..

Previous ಸರಳ ದಸರಾ ಆಚರಿಸಲು ಅಭಿಪ್ರಾಯ ವ್ಯಕ್ತಪಡಿಸಿದ ಪಾಲಿಕೆ..
Next ಮಾದಕ ದ್ರವ್ಯಗಳ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಾಗೃತಿ

You might also like

0 Comments

No Comments Yet!

You can be first to comment this post!

Leave a Reply