ಅನಧಿಕೃತ ಕಟ್ಟಡ ತೆರವುಗೊಳಿಸಿದ ಮೂಡಾ

ಅನಧಿಕೃತ ಕಟ್ಟಡ ತೆರವುಗೊಳಿಸಿದ ಮೂಡಾ

ಮೈಸೂರು-

 ಮೈಸೂರು ನಗರ ಬನ್ನಿಮಂಟಪ “ಬಿ” ಬಡಾವಣೆಯ ನಿವೇಶನ ಸಂಖ್ಯೆ 386 ಮತ್ತು 400/ಬಿ ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಕಟ್ಟಡವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ತೆರವುಗೊಳಿಸಿ ವಶಪಡಿಸಿಕೊಂಡಿದೆ.

 ಸುಮಾರು ರೂ.2 ಕೋಟಿ ಬೆಲೆಬಾಳುವ ನಿವೇಶನಗಳಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ಅನಧಿಕೃತವಾಗಿ ಲಾರಿ ಟ್ರಾನ್ಸ್‍ಪೋರ್ಟ್ ಕಚೇರಿಯನ್ನು ನಿರ್ಮಿಸಿ ತಂತಿಬೇಲಿ ಅಳವಡಿಸಿಕೊಂಡಿದ್ದರು. ಸೋಮವಾರ ಪ್ರಾಧಿಕಾರದ ಆಯುಕ್ತರ ನಿರ್ದೇಶನದಂತೆ ಅನಧಿಕೃತವಾಗಿ ನಿರ್ಮಿಸಲಾದ ಕಟ್ಟವನ್ನು ತೆರವುಗೊಳಿಸಿ ವಶಪಡಿಸಿಕೊಂಡು ನಾಮಫಲಕವನ್ನು ಅಳವಡಿಸಲಾಗಿದೆ.

 ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ವಲಯ ಅಧಿಕಾರಿ ನರೇಂದ್ರಬಾಬು, ಸಹಾಯಕ ಅಭಿಯಂತರರಾದ ಮಣಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ. ಡಿ.ಬಿ.ನಟೇಶ್ ಅವರು ತಿಳಿಸಿದ್ದಾರೆ.

Previous ' ರೈತ ನಾಯಕ ' ಸಂಪೂರ್ಣ ಸಿನಿಮಾ ಮೊಬೈಲ್ ಕ್ಯಾಮರದಲ್ಲಿ ಚಿತ್ರೀಕರಣ...!
Next ಕೋವಿಡ್ ಸೋಂಕು ಪತ್ತೆಗೆ ಸರ್ವೆ ಮಾಡಲು ಜಿಲ್ಲಾಧಿಕಾರಿ ಸೂಚನೆ

You might also like

0 Comments

No Comments Yet!

You can be first to comment this post!

Leave a Reply