ಪ್ರಣಬ್ ಮುಖರ್ಜಿ ಬಗೆಗಿನ ನೆನಪು ಹಂಚಿಕೊಂಡ ಮೋದಿ

ಪ್ರಣಬ್ ಮುಖರ್ಜಿ ಬಗೆಗಿನ ನೆನಪು ಹಂಚಿಕೊಂಡ ಮೋದಿ

ನವದೆಹಲಿ-

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಮೂರು ಫೋಟೋ, 4 ಟ್ವೀಟ್‌ ಮಾಡಿ ಪ್ರಣಬ್‌ ಮುಖರ್ಜಿಯವರ ಜೊತೆಗಿನ ಸಂಬಂಧವನ್ನು ಬಣ್ಣಿಸಿದ್ದಾರೆ. ರಾಷ್ಟ್ರಪತಿ ಆಗಿದ್ದ ವೇಳೆ ಅವರ ಆಶೀರ್ವಾದವನ್ನು ಪಡೆಯುತ್ತಿರುವ ಫೋಟೋವನ್ನು ಹಾಕಿದ ಮೋದಿಯವರು, ಭಾರತ್ ರತ್ನ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನ ಭಾರತಕ್ಕೆ ದು:ಖ ತಂದಿದೆ. ಅವರು ನಮ್ಮ ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಅಳಿಸಲಾಗದ ಗುರುತು ಹಾಕಿದ್ದಾರೆ.

ಶ್ರೇಷ್ಠ ವಿದ್ವಾಂಸ, ಉನ್ನತ ರಾಜಕಾರಣಿ ಮತ್ತು ಎಲ್ಲ ವರ್ಗದ ರಾಜಕಾರಣಿಗಳು ಅವರನ್ನು ಮೆಚ್ಚಿದ್ದರು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ 2014ರಲ್ಲಿ ದೆಹಲಿ ನನಗೆ ಹೊಸದಾಗಿತ್ತು. ಹೀಗಾಗಿ ಮೊದಲ ದಿನದಿಂದಲೂ ನನಗೆ ಪ್ರಣಬ್‌ ಮುಖರ್ಜಿಯವರ ಮಾರ್ಗದರ್ಶನ ಸಿಕ್ಕಿತ್ತು . ರಾಜಕೀಯ ಜೀವನದಲ್ಲಿ ಪ್ರಮುಖವಾಗಿ ಆರ್ಥಿಕ ಮತ್ತು ವಿವಿಧ ಸಚಿವಾಲಯಗಳನ್ನು ನಿರ್ವಹಿಸಿ ದೇಶಕ್ಕಡ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ.

ಪ್ರಣಬ್ ಮುಖರ್ಜಿಯವರು ಭಾರತದ ಅಧ್ಯಕ್ಷರಾಗಿದ್ದ ವೇಳೆ ರಾಷ್ಟ್ರಪತಿ ಭವನವನ್ನು ಸಾಮಾನ್ಯ ನಾಗರಿಕರು ಪ್ರವೇಶಿಸುವಂತೆ ಮಾಡಿದ ಮೊದಲಿಗರು ಎಂದು ಮೋದಿ ಬರೆದುಕೊಂಡಿದ್ದಾರೆ. ಅವರ ಕುಟುಂಬ, ಸ್ನೇಹಿತರು, ಅಭಿಮಾನಿಗಳಿಗೆ ದು:ಖ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ ಎಂದು ಟ್ವೀಟ್‌ ಮಾಡಿ ಪ್ರಾರ್ಥಿಸಿದ್ದಾರೆ

Previous ಮಾಜಿ ರಾಷ್ಟ್ರಪತಿ ನಿಧನ. ಡಿಕೆಸಿ ಸಂತಾಪ
Next ನಿರ್ಲಕ್ಷ್ಯಕ್ಕೆ ಒಳಗಾದ ಪುರಾಣ ಪ್ರಸಿದ್ಧ ಶಬರಿ ಕೊಳ ಮತ್ತು ಕಬಂದ ರಾಕ್ಷಸನ ಸ್ಥಳ

You might also like

0 Comments

No Comments Yet!

You can be first to comment this post!

Leave a Reply