ಕಿಚ್ಚ ಸುದೀಪ್ ಹುಟ್ಟುಹಬ್ಬ- ಚಿತ್ರ ಮಂದಿರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

ಕಿಚ್ಚ ಸುದೀಪ್ ಹುಟ್ಟುಹಬ್ಬ- ಚಿತ್ರ ಮಂದಿರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

ರಾಮದುರ್ಗ: ನಟ ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬದ ಅಂಗವಾಗಿ ತಾಲೂಕು ಕಿಚ್ಚ ಸುದೀಪ್ ಅಭಿಮಾನಿ ಸಂಘದ ಸದಸ್ಯರು ಚಲನ ಚಿತ್ರ ಮಂದಿರದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಮಾಡಿದರು.

ಕೋವಿಡ 19ರ ಲಾಕಡೌನ ಸಂದರ್ಭದಲ್ಲಿ ಚಿತ್ರ ಮಂದಿರಗಳು ಸಂಪೂರ್ಣ ಬಂದ್ ಆಗಿದ್ದರಿಂದ ಅಲ್ಲಿ ಕೆಲಸ ಮಾಡುವ ಕಾರ್ಮಿಕರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳ ಸಂಘ ಅವರಿಗೆ ಅವಶ್ಯಕ ದಿನಸಿ ವಸ್ತುಗಳನ್ನು ವಿತರಿಸಿ ಸುದೀಪ್ ಅವರ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿದರು.

ಸಂಘದ ಉಪಾಧ್ಯಕ್ಷ ಬಾಲು ನಿರಂಜನ ಅವರು ಮಾತನಾಡಿ, ಲಾಕಡೌನ ನಂತರ ಎಲ್ಲ ಕೆಲಸ ಕಾರ್ಯಗಳು ಆರಂಭವಾಗಿವೆ. ಆದರೆ ಚಿತ್ರ ಮಂದಿರ ಇವತ್ತಿಗೂ ಬಂದ್ ಆಗಿವೆ. ಅಲ್ಲಿ ಕೆಲಸ ಮಾಡುವ ಕಾರ್ಮಿಕರು ಕಣ್ಣಿರು ಇಡುವ ಪರಿಸ್ಥಿತಿ ಬಂದಿದ್ದರಿಂದ ನಮ್ಮ ಕೈಲಾದ ಸಹಾಯ ಮಾಡಿದ್ದೇವೆ ಎಂದು ಹೇಳಿದರು.

ಈಟಿ ಓಣಿಯ ಎಲ್ಲ ನಾಗರೀಕರಿಗೆ ಸಂಘದ ಸದಸ್ಯರು ಸಿಹಿ ವಿತರಿಸಿ, ಸಂಭ್ರಮಿಸಿದರು.

ಅಭಿಮಾನಿ ಸಂಘದ ಅಧ್ಯಕ್ಷ ಅಜಯ್ ಮಂದಾಲಿ, ಕಾರ್ಯದರ್ಶಿ ವಿನಾಯಕ್ ಚಿಕ್ಕುಂಬಿ, ಸೆಟ್ಟೆಪ್ಪ, ಮಂಜು, ಮನೋಜ್, ಪ್ರಶಾಂತ್, ವಿಠ್ಠಲ್, ಮಹದೇವ್, ಭರತ್, ಶರಣು, ನಾಗೇಶ್, ಗಿರೀಶ್ ಮತ್ತು ಮನು ಸೇರಿದಂತೆ ಇತರರು ಇದ್ದರು.

Previous ಒಳಚರಂಡಿ ಮಿಶ್ರಿತ ನೀರು ಕುಡಿಯುವ ಬಳ್ಳಾರಿ ಜನತೆ..?
Next ವಾರಸುದಾರರಿಗೆ ಮೊಬೈಲ್ ಹಿಂದಿರುಗಿಸಿದ ಬಸ್‍ನಿಲ್ದಾಣ ಅಧಿಕಾರಿ

You might also like

0 Comments

No Comments Yet!

You can be first to comment this post!

Leave a Reply