ತುಂಟ ಕಳ್ಳ ಕಿಚ್ಚನಿಗೆ ಕೋಟಿಗೊಬ್ಬನ ಗಿಫ್ಟ್..!

ತುಂಟ ಕಳ್ಳ ಕಿಚ್ಚನಿಗೆ ಕೋಟಿಗೊಬ್ಬನ ಗಿಫ್ಟ್..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಹುಟ್ಟು ಹಬ್ಬದ ಶುಭಾಶಯಗಳು. ಸೆಪ್ಟಂಬರ್-2 ಕಿಚ್ಚನ ಹುಡ್ಗರಿಗೆ ದೊಡ್ಡ ಹಬ್ಬವೇ ಸರಿ. ಈ ದಿನ ಕಿಚ್ಚನ ಜನ್ಮ ದಿನ ಇರೋದ್ರಿಂದ ಸುದೀಪ್ ಫ್ಯಾನ್ಸ್ ಅದನ್ನ ಹಬ್ಬದ ಥರವೇ ಆಚರಿಸುತ್ತಾರೆ.

ಆದರೆ, ಈ ಸಲವೂ ಕಿಚ್ಚನ ಜನ್ಮ ದಿನವೂ ಮೊದಲಿ ಹಾಗೆ ವೈಭವದಿಂದಲೇ ಆಗುತ್ತಿತ್ತೊ ಏನೋ. ಕೊರೊನಾ ಕಾರಣ ಅದು ಸಾಧ್ಯವಾಗಿಲ್ಲ. ಆದರೆ, ಸಿನಿಮಾ ಮಂದಿ ಬಿಡಬೇಕಲ್ಲ. ನಿಜ.. ಕಿಚ್ಚನ ಅಪ್ ಕಮ್ಮಿಂಗ್ ಮೂವಿ ಕೋಟಿಗೊಬ್ಬ-3 ಚಿತ್ರ ತಂಡ ಕಿಚ್ಚನ ಹುಟ್ಟು ಹಬ್ಬವನ್ನ ಒಂದ್ ವಿಶೇಷ ಗಿಫ್ಟ್ ಕೊಡೋ ಮುಖಾಂತರ ಸೆಲೆಬ್ರೇಟ್ ಮಾಡಿದೆ.

ಹೌದು ರೀ.. ಕಿಚ್ಚನ ಹುಡುಗರಿಗೆ ಕಿಚ್ಚನ ಹಬ್ಬದ ದಿನ ಟೀಸರ್ ರೂಪದಲ್ಲಿ ದೊಡ್ಡ ಟ್ರೀಟ್ ಸಿಕ್ಕಿದೆ.ಈ ಟೀಸರ್ ಮಸ್ತ್ ಆಗಿಯೇ ಇದೆ. ಇದನ್ನ ಕಂಡ್ರೆ ಏನೋ ಖುಷಿ ಆಗುತ್ತದೆ. ಅಷ್ಟು ಮಸ್ತ್ ಆಗಿರೋ ಸಂಗೀತವನ್ನ ಅರ್ಜುನ್ ಜನ್ಯ ಈ ಚಿತ್ರಕ್ಕೆ ಕೊಟ್ಟಿದ್ದಾರೆ.ಅದರ ಝಲಕ್ ಈ ಟೀಸರ್ ಅಲ್ಲಿದೆ.

ಇನ್ನು ಕಿಚ್ಚನ ಅಭಿನಯ ಅಂತೂ ಸೂಪರ್ ಬಿಡಿ. ಸಂಗೀತದ ಹಿನ್ನೆಲೆಯಲ್ಲಿಯೇ ಇಡೀ ಟೀಸರ್ ಅಲ್ಲಿ ಕಿಚ್ಚ ಮೋಡಿ ಮಾಡುತ್ತಾರೆ.

ಪುಟ್ಟ ಟೀಸರ್ ಕಿಚ್ಚನ ಫ್ಯಾನ್ಸ್ ಗೆ ಹೊಸ ಕಿಕ್ ಕೊಡ್ತಾ ಇದೆ. ಚಿತ್ರದ ನಿರ್ಮಾಪಕ ಸೂರಪ್ಪ ಬಾಬು, ಕೋಟಿಗೊಬ್ಬನ ಅತೀ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ. ನಿರ್ದೇಶಕ ಶಿವಕಾರ್ತಿಕ್ ತುಂಟ ಕಳ್ಳ ಕೋಟಿಗೊಬ್ಬನಿಗೆ ಹೊಸ ಟಚ್ ಕೊಟ್ಟಿದ್ದಾರೆ. ಕೋಟಿಗೊಬ್ಬ-2 ಕಂಡೋರಿಗೆ ಕೋಟಿಗೊಬ್ಬ-3 ಹೊಸ ಕುತೂಹಲ ಮೂಡಿಸಿದೆ. ವೇಟ್ ಮಾಡಿ..

-ರೇವನ್ ಪಿ.ಜೇವೂರ್

Previous ನಿಮ್ಮ ತಂಗಿ ಗೌರಿ ಲಂಕೇಶರೆ ಡ್ರಗ್ ಅಡಿಟ್ ಆಗಿದ್ದರು. ಆಗ‌ ನೀವೆಲ್ಲಿ ಹೋಗಿದ್ದೀರಿ.?
Next ಬಳ್ಳಾರಿಯ ನೂತನ ಎಸ್ಪಿಯಾಗಿ ಸೈದುಲ್ಲಾ ಅದಾವತ್ ಅಧಿಕಾರ ಸ್ವೀಕಾರ.

You might also like

0 Comments

No Comments Yet!

You can be first to comment this post!

Leave a Reply