ನಾಗಮೋಹನ್ದಾಸ್ ವರದಿ ಜಾರಿಗೆ ಒತ್ತಾಯ ,ಬೇಡಿಕೆ ಈಡೇರದಿದ್ದರೆ ವಿಧಾನಸೌಧ ಮುತ್ತಿಗೆ.

ನಾಗಮೋಹನ್ದಾಸ್ ವರದಿ ಜಾರಿಗೆ ಒತ್ತಾಯ ,ಬೇಡಿಕೆ ಈಡೇರದಿದ್ದರೆ ವಿಧಾನಸೌಧ ಮುತ್ತಿಗೆ.

ಹೊಸಪೇಟೆ-

 ನಿವೃತ್ತ ನ್ಯಾ. ನಾಗಮೋಹನದಾಸ್ ಆಯೋಗದ ವರದಿಯಂತೆ ಪರಿಶಿಷ್ಟ ಪಂಗಡಕ್ಕೆ 7.5 ಮೀಸಲಾತಿಯನ್ನು ನೀಡಬೇಕು. ಇಲ್ಲದಿದ್ದರೆ ವಿಧಾನಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್‌ನ ಮುಖಂಡರು ಎಚ್ಚರಿಕೆ ನೋಡಿದ್ದಾರೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಳ್ಳಾರಿ ಜಿಲ್ಲಾ ಧರ್ಮದರ್ಶಿ ಜಿ ಎಸ್‌ ಜಂಬಯ್ಯ ನಾಯಕ್ ಅವರು , ಸೆಪ್ಟೆಂಬರ್ 21ರಿಂದ 30ರವರೆಗೆ ವಿಧನಾಸಭೆಯ ಅಧಿವೇಶನ ನಡೆಯಲಿದೆ.‌ ಅಲ್ಲಿ ಮೀಸಲಾತಿಯನ್ನು ಪ್ರಕಟಿಸಬೇಕು. ಇಲ್ಲದಿದ್ದರೆ ವಿಧಾಸಭೆಯನ್ನು ಮುತ್ತಿಗೆ ಹಾಕಲಾಗುವುದು. ಅಲ್ಲದೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ವಾಲ್ಮೀಕಿ ಸಮುದಾಯದ ಶಾಸಕರು ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.

 ಲಮಾಣಿ ಜನಾಂಗವನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸಲು ಹುನ್ನಾರ ನಡೆಸಲಾಗುತ್ತಿದೆ. ಇದನ್ನು ಕಲ್ಬುರ್ಗಿ ಸಂಸದರು ಬೆಂಬಲ ವ್ಯಕ್ತಪಡಿಸಿದ್ದಾರೆ.‌ ಇದನ್ನ ವಾಲ್ಮೀಕಿ ಸಮುದಾಯ ಖಂಡಿಸುತ್ತದೆ. ಒಂದು ವೇಳೆ ಎಸ್ಟಿಗೆ ಬರಬೇಕಾದರೆ ಲಮಾಣಿ ಸಮುದಾಯಕ್ಕೆ‌ ನೀಡಿದ ಶೇಕಡವಾರು ಮೀಸಲಾತಿಯನ್ನು ತರಬೇಕು ಎಂದು ಆಗ್ರಹಿಸಿದರು

Previous ಕಟ್ಟಡ ತ್ಯಾಜ್ಯ, ಮಣ್ಣು ಹಗಲು ಸಾಗಾಟ ಮಾಡಿದರೆ ಲೈಸನ್ಸ್ ರದ್ದು
Next ಬಳ್ಳಾರಿಯಲ್ಲಿಂದು ಹೊಸದಾಗಿ 346 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆ…!

You might also like

0 Comments

No Comments Yet!

You can be first to comment this post!

Leave a Reply