ಚೀನಾ ಮಗ್ಗುಲು ಮುರಿಯೋಕೆ ಮಾಸ್ಟರ್ ಪ್ಲ್ಯಾನ್..

ಚೀನಾ ಮಗ್ಗುಲು ಮುರಿಯೋಕೆ ಮಾಸ್ಟರ್ ಪ್ಲ್ಯಾನ್..

ಕೊರೊನಾ ಮಹಾಮಾರಿಯಂತಹ ಸಾಂಕ್ರಾಮಿಕ ರೋಗದ ಬಗ್ಗೆ ಸುಳಿವು ನೀಡದೆ, ಅದನ್ನು ಮುಚ್ಚಿಟ್ಟು ಎಲ್ಲ ದೇಶಗಳ ಕೆಂಗಣ್ಣಿಗೆ ಚೀನಾ ಗುರಿಯಾಗಿದೆ. ಅದರಲ್ಲೂ ಭಾರತದ ಗಡಿ ಭಾಗವಾದ ಲಡಾಖ್ ನಲ್ಲಿ ಖ್ಯಾತೆ ತೆಗೆದಿದುರಿಂದ ಚೀನಾಕ್ಕೆ ಮುಟ್ಟಿ ನೋಡುವ ಹಾಗೆ ಪಾಠ ಕಲಿಸಿತ್ತು ಭಾರತ.

ಲಡಾಖ್ ನ ಖ್ಯಾತೆಯಿಂದಾಗಿ ಭಾರತದಲ್ಲಿ ಚೀನಾದ ಟಿಕ್ ಟಾಕ್ ಸೇರಿದಂತೆ 52 ಆ್ಯಪ್ ಗಳನ್ನು ಬ್ಯಾನ್ ಮಾಡಿ, ಚೀನಾಕ್ಕೆ ಭಾರಿ ನಷ್ಟವನ್ನು ಉಂಟು ಮಾಡಿತು. ಇದೇ ರೀತಿ ಚೀನಾ ಅನೇಕ ರಾಷ್ಟ್ರಗಳೊಂದಿಗೆ ಹಗೆತನವನ್ನು ಬೆಳೆಸಿಕೊಂಡಿದೆ.

ಚೀನಾದ ವರ್ತನೆಯಿಂದ ಬೇಸತ್ತ ರಾಷ್ಟ್ರಗಳು ವ್ಯಾಪಾರದ ಮೂಲಕ ಚೀನಾಕ್ಕೆ ಬಿಸಿ ಮೂಡಿಸಲು ಮುಂದಾಗಿವೆ. ಭಾರತೀಯ ಯೋಜನೆಯನ್ನು ಈಗ ಅಮೇರಿಕಾ ಕೂಡಾ ಅನುಸರಿಸುತ್ತಿದೆ. ಅಂದರೆ ಅಮೇರಿಕಾ ಸಹ ಚೀನಾದ ಆ್ಯಪ್ ಗಳನ್ನು ಬಹಿಸ್ಕರಿಸಲು ಮುಂದಾಗಿದೆ. ಹೀಗೆ ಅನೇಕ ರಾಷ್ಟ್ರಗಳು ಚೀನಾಕ್ಕೆ ತಕ್ಕ ಪಾಠ ಕಲಿಸಬೇಕೆಂದು ಭಾರತದೊಂದಿಗೆ ಸಂಯೋಜನೆಗೊಂಡಿವೆ.

ಚೀನಾ ವ್ಯಾಪಾರದ ಮೇಲೆ ಅಧಿಪತ್ಯ ಸ್ಥಾಪಿಸಲು ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳು ಒಂದಾಗಿವೆ. ಚೀನಾ ಮಾಡುತ್ತಿರುವ ಎಲ್ಲ ತಂಟೆ ತಗಾದೆಗಳ ವಿರುದ್ಧ ಜಯ ಸಾಧಿಸಲು ಈ ಮೂರು ರಾಷ್ಟ್ರಗಳ ವಾಣಿಜ್ಯ ಸಚಿವರುಗಳಿಂದ ವಿಡಿಯೋ ಕಾನ್ಪರೆನ್ಸ್ ಮೂಲಕವಾಗಿ ಮಾತುಕತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಇಷ್ಟೇ ಅಲ್ಲದೇ ಇನ್ನು ಅನೇಕ ರಾಷ್ಟ್ರಗಳು ಕೈಜೋಡಿಸುವ ಯೋಜನೆಯಲ್ಲಿವೆ.


ವಿಡಿಯೋ ಕಾನ್ಸರೆನ್ಸ್ ಮಂಗಳವಾರ ಮಧ್ಯಾಹ್ನ ಜರುಗಿದ್ದು , ಸಚಿವರುಗಳ ಮಾಹಿತಿಯ ಪ್ರಕಾರ 2020 ರ ಅಂತ್ಯದ ಸಮಯಕ್ಕೆ ಪೊರೈಕೆಯ ಸರಪಳಿಯನ್ನು ಹೆಚ್ಚಿಸುವಂತೆ ಕೆಲಸಗಳು ನಡೆಯಬೇಕೆಂದು ಆಯಾ ದೇಶದ ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಬೇಕಾದಂತಹ ಎಲ್ಲ ಮಾಹಿತಿಗಳನ್ನು ಶೀಘ್ರವೇ ಕಲೆ ಹಾಕಿ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಇಂಡೋ ಪೆಸಿಪಿಕ್ ಭಾಗದ ತುಂಬಾ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಈ ಮೂರು ರಾಷ್ಟ್ರಗಳು ಸತ ಪ್ರಯತ್ನವನ್ನು ನಡೆಸುತ್ತಿವೆ ಎಂದು ಉಲ್ಲೇಖಿತವಾಗಿದೆ.

Previous ಇಂದ್ರಜೀತ ಲಂಕೇಶ್ ಹಿಂದೇಟು ಹಾಕಿದ್ದೇಕೆ..?
Next ನಿಮ್ಮ ತಂಗಿ ಗೌರಿ ಲಂಕೇಶರೆ ಡ್ರಗ್ ಅಡಿಟ್ ಆಗಿದ್ದರು. ಆಗ‌ ನೀವೆಲ್ಲಿ ಹೋಗಿದ್ದೀರಿ.?

You might also like

0 Comments

No Comments Yet!

You can be first to comment this post!

Leave a Reply