ಕುರಿ ಸಾಕಾಣಿಕೆ ರೈತರ ಪಾಲಿಗೆ ಬ್ಯಾಂಕ್‍ನಲ್ಲಿ ಹಣ ಇದ್ದಹಾಗೆ

ಕುರಿ ಸಾಕಾಣಿಕೆ ರೈತರ ಪಾಲಿಗೆ ಬ್ಯಾಂಕ್‍ನಲ್ಲಿ ಹಣ ಇದ್ದಹಾಗೆ

ಹಾವೇರಿ-

 ಕುರಿ ಸಾಕಾಣಿಕೆ ಲಾಭದಾಯಕ ಉದ್ಯೋಗವಾಗಿದೆ. ನಿರುದ್ಯೋಗ ನಿವಾರಣೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪೂರಕವಾಗಿದೆ. ರೈತರ ಪಾಲಿಗೆ ಕುರಿ ಹಾಗೂ ಆಡುಗಳು ಬ್ಯಾಂಕಿನ ಎ.ಟಿ.ಎಂ. ಇದ್ದಹಾಗೆ ಎಂದು ವಾರ್ತಾಧಿಕಾರಿ ಬಿ.ಆರ್. ರಂಗನಾಥ್ ಅವರು ಹೇಳಿದರು.

 ಬರೋಡಾ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ ದೇವಗಿರಿಯ  ಆರ್‍ಸೆಟ್ ತರಬೇತಿ ಸಭಾಂಗಣದಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ 10 ದಿನಗಳ ಆಡು ಹಾಗೂ ಕುರಿ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

 ಪಾರಂಪರಿಕವಾಗಿ ಕೃಷಿ ಪೂರಕ ಚಟುವಟಿಕೆಯಾದ ಆಡು ಮತ್ತು ಕುರಿ ಸಾಕಾಣಿಕೆ ಕ್ರಮ ಬದಲಾಗಿದೆ. ಕುರಿ ಸಾಕಾಣಿಕೆಯನ್ನು ಒಂದು ಉದ್ಯಮವಾಗಿ ರೈತರು, ನಿರುದ್ಯೋಗಿ ವಿದ್ಯಾವಂತ ಯುವಕರು ಕೈಗೊಂಡಿದ್ದಾರೆ. ಇದರಿಂದ ಯುವಕರಿಗೆ ಸ್ವಂತ ಉದ್ಯೋಗಾವಕಾಶ ಆರ್ಥಿಕ ಸಬಲತೆ  ಹೊಂದಲು  ಉತ್ತಮ ಮಾರ್ಗವಾಗಿದೆ. ಕುರಿ ಅಥವಾ ಗೋಟ್ ಫಾರಂ ಮಾದರಿಯಲ್ಲಿ ವೈಜ್ಞಾನಿಕ ಕುರಿ ಸಾಗಾಣಿಕೆಗೆ ಸರ್ಕಾರದ ನೆರವು ಹಾಗೂ ಬ್ಯಾಂಕಿನ ನೆರವು ದೊರೆಯುತ್ತದೆ. ಆಸಕ್ತರು ತರಬೇತಿ ಸಹ ಪಡೆಯಬಹುದು ಎಂದು ಹೇಳಿದರು.

 ಕುರಿ ಮತ್ತು ಆಡು ಬಹು ಉಪಯೋಗಿಯಾಗಿದೆ. ಆರ್ಥಿಕವಾಗಿ ಅತ್ಯಂತ ಲಾಭತರುವ ಉದ್ಯಮವಾಗಿದೆ. ಸಣ್ಣ ಪ್ರಮಾಣದಲ್ಲಿ ಅಥವಾ ದೊಡ್ಡ ಪ್ರಮಾಣದಲ್ಲಿ ಸಾಕಾಣಿಕೆ ಮಾಡಿದರೆ ಯಾರನ್ನೂ ಅಲಂಬಿಸಿದರೆ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು. ಕುರಿ ಮತ್ತು ಮೇಕೆಯ ಮಾಂಸ, ಉಣ್ಣೆ ಹಾಗೂ ಚರ್ಮ, ಆಡಿನ ಹಾಲು,  ಆಡು ಹಾಗೂ ಕುರಿಯ ಗೊಬ್ಬರಕ್ಕೆ ಮಾರುಕಟ್ಟೆಯಲ್ಲಿ ಬಹುಬೇಡಿಕೆ ಇದೆ. ತರಬೇತಿ ಪಡೆದು ವೈಜ್ಞಾನಿಕ ಮಾದರಿಯಲ್ಲಿ ಸಾಕಾಣಿಕೆ  ಹಾಗೂ ಮಾರುಕಟ್ಟೆ ವ್ಯವಸ್ಥೆ ಕಂಡುಕೊಂಡರೆ ಅತ್ಯಂತ ಲಾಭಗಳಿಸಬಹುದು. ಈ ನಿಟ್ಟಿನಲ್ಲಿ ಉತ್ತಮ ತರಬೇತಿ ಪಡೆದು ಸ್ವಂತ ಬದುಕು ಕಟ್ಟಿಕೊಳ್ಳಲು ಶಿಕ್ಷಣಾರ್ಥಿಗಳಿಗೆ ಹಾರೈಸಿದರು.

Previous ಮಾದಕ ದ್ರವ್ಯಗಳ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಾಗೃತಿ
Next ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ರಾಜಕುಮಾರ್ ಪಾಟೀಲ್ ತೇಲ್ಕೂರ ಪದಗ್ರಹಣ

You might also like

0 Comments

No Comments Yet!

You can be first to comment this post!

Leave a Reply