ಕುಡಿಯಲು ಬಾರ್ ಗೆ ಹೋಗುತ್ತಿರಾ ಹಾಗಾದ್ರೆ ಈ ಸುದ್ದಿ ಓದಲೇಬೇಕು

ಕುಡಿಯಲು ಬಾರ್ ಗೆ ಹೋಗುತ್ತಿರಾ ಹಾಗಾದ್ರೆ ಈ ಸುದ್ದಿ ಓದಲೇಬೇಕು

ಬೆಂಗಳೂರು: ಎಣ್ಣೆ ಪ್ರಿಯರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇಂದಿನಿಂದ ಬಾರ್ ಆಂಡ್ ರೆಸ್ಟೋರೆಂಟ್ ಗಳು ಓಪನ್ ಆಗಿದ್ದು ಎಣ್ಣಿ ಪ್ರೀಯರ ಇದಕ್ಕಿಂತ ದೊಡ್ಡ ಸಂತೋಷ ಸುದ್ದಿ ಮತ್ತೊಂದಿಲ್ಲಾ. ಆದ್ರೆ ಬಾರ್ ಗೆ ಹೋಗುವ ಮುನ್ನ ಈ ಮಾಹಿತಿ ನಿಮಗೆ ತಿಳಿದಿರಲಿ.

ಹೌದು ಕೇಂದ್ರ ಸರ್ಕಾರದ ಈಗಾಗಲೇ ಬಾರ್ ಆಂಡ್ ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಿದ್ದು ಅದರ ಜೊತೆಯಲ್ಲಿ ಕಲೆ ಷರತ್ತುಗಳನ್ನು ವಿದಿಸಿದೆ. ಬಾರ್ ಮಾಲೀಕರು ಈ ನಿಯಮ ಪಾಲಿಸಿಕೊಂಡು ಬಾರ್ ತೆರೆಯಲು ಅನುಮತಿ ನೀಡಲಾಗಿದೆ…

  • ಬಾರ್ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಕಡ್ಡಾಯ…
  • ಗುಂಪು ನಿಯಂತ್ರಿಸಲು ಸರಿಯಾದ ವ್ಯವಸ್ಥೆಯನ್ನು ಮಾಡಿಕೊಂಡಿರಬೇಕು. ಪಾರ್ಕಿಂಗ್‌ ಜಾಗದಲ್ಲಿರುವ ಸಿಬ್ಬಂದಿ ಮಾಸ್ಕ್‌/ ಫೇಸ್‌ ಕವರ್‌ ಧರಿಸಬೇಕು..
  • ಬಾರ್ ಮತ್ತು ರೆಸ್ಟೋರೆಂಟ್ ಕೆಲಸಗಾರರು ಗ್ರಾಹಕರ ಕೈಗೆ ಮದ್ಯ ಕೊಡುವಂತಿಲ್ಲ…
  • ಬಾರ್ ನಲ್ಲಿ ಕೆಲಸಗಾರರು ಗ್ಲೌಸ್‌ ಧರಿಸಿ ಕೆಲಸ ಮಾಡಬೇಕು.
  • ವಾಹನಗಳು ನಿಲ್ಲುವ ಜಾಗದಲ್ಲಿ ಸ್ಯಾನಿಟೈಸ್‌ ಮಾಡಿರಬೇಕು.
  • ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿರಬೇಕು.

ಪ್ರತಿ ಟೇಬಲ್ ಮಧ್ಯದಲ್ಲಿ 6 ಅಡಿ ಸಾಮಾಜಿಕ ಅಂತರವನ್ನು ಕಾಪಾಡಬೇಕು.

  • ಎಸ್ಕಲೇಟರ್‌ನಲ್ಲಿ ಒಂದು ಸ್ಟೆಪ್‌ ಬಿಟ್ಟು ಮತ್ತೊಂದು ಸ್ಟೆಪ್‌ನಲ್ಲಿ ವ್ಯಕ್ತಿಗಳು ಹೋಗಬೇಕು.

ಏರ್‌ ಕಂಡಿಷನ್‌ ಇರುವ ರೆಸ್ಟೋರೆಂಟ್‌ಗಳ ಉಷ್ಣಾಂಶ 24-30 ಡಿಗ್ರಿ ಸೆಲ್ಸಿಯಸ್‌ ಇರಬೇಕು..

  • ಸಾಧ್ಯವಾದಷ್ಟು ಡಿಜಿಟಲ್‌ ಮೂಲಕ ಬಿಲ್‌ ಪಾವತಿಗೆ ಉತ್ತೇಜಿಸುವುದು.
  • ನೀರಿಗೆ ಶೇ.1 ರಷ್ಟು ಸೋಡಿಯಂ ಹೈಪೋಕ್ಲೋರೆಟ್ ಮಿಶ್ರಣ ಇರುವ ಇರುವ ದ್ರಾವಣವನ್ನು ಹಾಕಬೇಕು…
  • ಆಡುಗೆ ಮನೆಯಲ್ಲಿ ಕೆಲಸಗಾರರು ಸಾಮಾಜಿಕ ಅಂತರವನ್ನು ಕಾಪಾಡವುದು. ಆಡುಗೆ ಮನೆಯನ್ನು ಸ್ಯಾನಿಟೈಸ್‌ ಮಾಡುವುದು ಕಡ್ಡಾಯ…

ಈ ಎಲ್ಲಾ ನಿಯಮಗಳಿಗೆ ನಿಮ್ಮ ಸಮ್ಮತಿ ಹಾಗೂ ಈ ಎಲ್ಲಾ ನಿಯಮಗಳನ್ನು ನೀವು ಪಾಲನೆ ಮಾಡುತ್ತೀರಾ ಅಂದ್ರೆ ಮಾತ್ರ ನೀವು ಬಾರ್ ನಲ್ಲಿ ಕುಳಿತು ಎಣ್ಣೆ ಸೇವನೆ ಮಾಡಬಹುದು. ಎಣ್ಣೆ ಕುಡಿಯಲು ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಆದ್ರೆ ಎಣ್ಣೆ ಹೊಡೆದು ಟೈಟ್ ಆದಮೇಲೆ ನೀವು ಹೇಗೆ ಮನೆ ಸೇರ ಬೇಕು ಎನ್ನುವ ಬಗ್ಗೆ ಮಾತ್ರ ನಿಯಮ ಜಾರಿ ಮಾಡಿಲ್ಲಾ..

Previous ಸೂಪರ್ ಸ್ಟಾರ್ ಹೆಸರಿರೋ ಈ ನಾಯಕ ಯಾರ್ ಗೊತ್ತ..?
Next ಮೊಗ್ಗಿನ ಮನಸ್ಸು ಡೈರೆಕ್ಟರ್ ಗೆ ಆ ವಿಷಯವೇ ಗೊತ್ತಿರಲಿಲ್ಲ

You might also like

0 Comments

No Comments Yet!

You can be first to comment this post!

Leave a Reply