ಪ್ರವಾಸಕ್ಕೆ ಹೋಗುತ್ತಿರಾ ಹಾಗಾದರೆ, ಪೂರ್ವಾನುಮತಿ ಕಡ್ಡಾಯ

ಪ್ರವಾಸಕ್ಕೆ ಹೋಗುತ್ತಿರಾ ಹಾಗಾದರೆ, ಪೂರ್ವಾನುಮತಿ ಕಡ್ಡಾಯ

ಮಂಗಳೂರು-

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳ ಪರಿಣಾಮಕಾರಿ ಉತ್ತೇಜನ ಹಾಗೂ ಆರ್ಥಿಕ ಪ್ರೋತ್ಸಾಹಕ್ಕಾಗಿ, ಸ್ಥಳೀಯ ಸಂಸ್ಕøತಿ, ಕಲೆಗಳನ್ನು ಪರಿಚಯಿಸಿ ಊಟೋಪಚಾರದೊಂದಿಗೆ ಆತಿಥ್ಯ ಒದಗಿಸುವ ಸಲುವಾಗಿ ಸುಮಾರು 32 ಹೋಂ-ಸ್ಟೇ ಯೋಜನೆಗಳಿಗೆ ಅನುಮೋದನೆ ನೀಡಲಾಗಿರುತ್ತದೆ.

 ಹೋಂಸ್ಟೇ ನೋಂದಣಿಗಾಗಿ ಪೋಲೀಸ್ ಠಾಣೆ ಹಾಗೂ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಂದ ನಿರಾಪೇಕ್ಷಣಾ ಪತ್ರ ಪಡೆದು ಪ್ರವಾಸೋದ್ಯಮ ಇಲಾಖೆಯಿಂದ ನಿಯಮಬದ್ಧವಾಗಿ ಆನ್‍ಲೈನ್ ತಂತ್ರಾಂಶದಲ್ಲಿ ನೋಂದಾಯಿಸಿ ಅನುಮತಿ ಪಡೆದು ಕಾರ್ಯಾರಂಭ ಮಾಡಬೇಕಿರುವುದು ಕಡ್ಡಾಯವಾಗಿರುತ್ತದೆ. ಹೋಂಸ್ಟೇಗಳನ್ನು ಪೇಯಿಂಗ್ ಗೆಸ್ಟ್ , ಹಾಸ್ಟೆಲ್, ಅಥವಾ ಸರ್ವೀಸ್ ಅಪಾರ್ಟ್‍ಮೆಂಟ್ ಇತರೆ ವಸತಿಗಳಿಗೆ ಹೋಲಿಸತಕ್ಕದ್ದಾಗಿರುವುದಿಲ್ಲ. ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ  ಅಧಿನಿಯಮ-2015 ರ ಅನ್ವಯ ಪ್ರವಾಸೋದ್ಯಮ ಇಲಾಖೆಯ ನೋಂದಣಿ ಪಡೆಯದೆ ಕಾರ್ಯನಿರ್ವಹಿಸುತ್ತಿದ್ದಲ್ಲಿ  ಅಂತಹ ಹೋಂಸ್ಟೇಗಳನ್ನು ಅನಧಿಕೃತ ಎಂದು ಭಾವಿಸಿ ಕ್ರಮಕೈಗೊಳ್ಳಬೇಕಾದದ್ದು ಅಗತ್ಯವಿರುತ್ತದೆ.

 ಅಧಿಕೃತ ಪರವಾನಿಗೆಯನ್ನು ಪಡೆದಿದ್ದರೂ ಸಹ ಯಾವುದೇ ಅನಧಿಕೃತ, ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಲ್ಲಿ  ಭಾರತೀಯ ದಂಡ ಸಂಹಿತೆಯ ಅನ್ವಯ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಸ್ಥಳೀಯ ನಿವಾಸಿ, ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ, ಸಾರ್ವಜನಿಕರ ಹಿತಕ್ಕೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಬೇಕಾಗಿರುತ್ತದೆ.

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಪಡೆಯದೇ ಕಾರ್ಯಾಚರಿಸುತ್ತಿರುವ ಹೋಂಸ್ಟೇಗಳಾಗಲಿ ಅಥವಾ ಅನುಮತಿ ಪಡೆದಿದ್ದರೂ ಸಹ ಅಕ್ರಮ, ನಿಯಮಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದಲ್ಲಿ ಅಂತಹ ಹೋಮ್-ಸ್ಟೇಗಳನ್ನು ಪತ್ತೆ ಹಚ್ಚಿ ಪರಿಶೀಲಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಕಟಣೆ ತಿಳಿಸಿದೆ.

Previous ಕೃಷಿ ಉತ್ಪನ್ನಗಳ ಮಾರುಕಟ್ಟೆ ಶುಲ್ಕ ನಿಗಧಿ
Next ಕಸ ವಿಲೇವಾರಿಗೆ ಪ್ರತ್ಯೇಕ ಆ್ಯಪ್ ತಯಾರಿಸಿದ ಪಾಲಿಕೆ

You might also like

0 Comments

No Comments Yet!

You can be first to comment this post!

Leave a Reply