ನಿಮ್ಮ ತಂಗಿ ಗೌರಿ ಲಂಕೇಶರೆ ಡ್ರಗ್ ಅಡಿಟ್ ಆಗಿದ್ದರು. ಆಗ‌ ನೀವೆಲ್ಲಿ ಹೋಗಿದ್ದೀರಿ.?

ನಿಮ್ಮ ತಂಗಿ ಗೌರಿ ಲಂಕೇಶರೆ ಡ್ರಗ್ ಅಡಿಟ್ ಆಗಿದ್ದರು. ಆಗ‌ ನೀವೆಲ್ಲಿ ಹೋಗಿದ್ದೀರಿ.?

ಹಾವೇರಿ: ಇವತ್ತು ಇಂದ್ರಜಿತ್ ಲಂಕೇಶ ದೊಡ್ಡ ಪ್ರಮಾಣದ ಹಿರೋ ಆಗಲು ಹೊರಟಿದ್ದಾರೆ. ನಿಮ್ಮ ತಂಗಿ ಗೌರಿ ಲಂಕೇಶರೆ ಡ್ರಗ್ ಅಡಿಟ್ ಆಗಿದ್ದರು. ಆಗ‌ ನೀವೆಲ್ಲಿ ಹೋಗಿದ್ದೀರಿ.? ಆಗ ಯಾಕೆ ಮಾತನಾಡ್ಲಿಲ್ಲ.‌ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ಕಿಡಿಕಾರಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ಈಗ ಇಂದ್ರಜಿತ ಲಂಕೇಶ್ ಫಿಲ್ಮ್ ಲ್ಯಾಂಡ್ ಬಗ್ಗೆ ಮಾತನಾಡೋರು ಆಗ‌ ಯಾಕೆ ಮಾತನಾಡ್ಲಿಲ್ಲ.ಸರ್ಜಾ ಕುಟುಂಬದವರು ಶುದ್ಧಾಗಿದ್ದಾರೆ. ಅವರನ್ನ ಯಾಕೆ ತರ್ತೀರಿ ಎಂದು ಕಿಡಿಕಾರಿದ್ದಾರೆ. ಡ್ರಗ್ ಮಾಫಿಯಾದಲ್ಲಿ ಪೊಲೀಸರು ಮತ್ತು ರಾಜಕಾರಣಿಗಳು ಇದ್ದಾರೆ. ಪೊಲೀಸರು ಮತ್ತು ರಾಜಕಾರಣಿಗಳು ಇಲ್ಲದೆ ಡ್ರಗ್ ಮಾಫಿಯಾ ಸಾಧ್ಯವೇ ಇಲ್ಲ. ಪೊಲೀಸರಿಗೆ ಇದರ ಬಗ್ಗೆ ಎಲ್ಲವೂ ಗೊತ್ತಿರುತ್ತೆ. ದುಡ್ಡು, ಬ್ರಷ್ಟಾಚಾರ, ರಾಜಕೀಯ ಒತ್ತಡದಿಂದ ಬಾಯಿ ಬಂದ್ ಮಾಡ್ತಾರೆ. ಬೇರು ಸಹಿತ ಕಿತ್ತು ಹಾಕುತ್ತೇವೆ ಅಂತಾ ಈಗ ಹಾರಾಡ್ತಿದ್ದಾರೆ. ರಾಜಕಾರಣಿಗಳೆ ಇದರಲ್ಲಿದ್ದರೆ. ಹ್ಯಾರಿಸ್ ಪುತ್ರ ಇದರಲ್ಲಿದ್ದಾರೆ. ಪೊಲೀಸರು ನಮ್ಮ ಕಡೆಯಿಂದ ಹುಡುಕಲು ಆಗಿಲ್ಲ ಅಂತಾ ಕೈ ಎತ್ತಲಿ, ನಾನು ತೋರಿಸ್ತೇನೆ ಅಂತಾ ಸವಾಲು ಹಾಕಿದರು. ಗೃಹ ಸಚಿವರು, ಸಿಟಿ ರವಿ ಹೇಳ್ತಾರೆ ಬೇರು ಸಮೇತ ಕಿತ್ತು ಹಾಕ್ತೇವೆ ಅಂತಾರೆ. ಈಗೆಲ್ಲ ನಾಟಕ ಮಾಡ್ತಾರೆ, ಸ್ವಲ್ಪ ದಿನದಲ್ಲಿ ಎಲ್ಲ ಮರೆತು ಬಿಡ್ತಾರೆ ಎಂದಿದ್ದಾರೆ…

Previous ಚೀನಾ ಮಗ್ಗುಲು ಮುರಿಯೋಕೆ ಮಾಸ್ಟರ್ ಪ್ಲ್ಯಾನ್..
Next ತುಂಟ ಕಳ್ಳ ಕಿಚ್ಚನಿಗೆ ಕೋಟಿಗೊಬ್ಬನ ಗಿಫ್ಟ್..!

You might also like

0 Comments

No Comments Yet!

You can be first to comment this post!

Leave a Reply