ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ಚಿಕಿತ್ಸೆ ವಿಫಲ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ಚಿಕಿತ್ಸೆ ವಿಫಲ

ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ಚಿಕಿತ್ಸೆ ಫಲಕಾರಿಯಾಗದೆ ದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪುತ್ರ ಅಭಿಜಿತ್ ಮುಖರ್ಜಿ ಈ ಕುರಿತು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಇಂದು ಸಂಜೆ ಅಸುನೀಗಿದ್ದು, 84 ವರ್ಷದ ಅವರು ದೀರ್ಘ ಕೋಮಾ ಸ್ಥಿತಿಯಲ್ಲಿದ್ದ ಅಚರು ಇಂ ವೆಂಟಿಲೇಟರ್ ನೆರವು ನೀಡಲಾಗಿದೆ ಎಂದು ಸೇನಾ ಸಂಶೋಧನೆ ಮತ್ತು ರೆಫರಲ್‌ ಆಸ್ಪತ್ರೆಯ ಪ್ರಕಟಣೆ ತಿಳಿಸಿತ್ತು. ಆದ್ರೆ ಚಿಕಿತ್ಸೆ ಫಲಕಾರಿ ಆಗದೆ ಇಂದು ಇಹಲೋಕ ತೆಜಿಸಿದ್ದಾರೆ. ಮುಖರ್ಜಿ ಅವರಿಗೆ ಶ್ವಾಸಕೋಶದ ಸೋಂಕಿಗಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆಯಿಂದ ಅವರ ಮೂತ್ರಪಿಂಡದ ಕ್ಷಮತೆ ಸ್ವಲ್ಪ ಕಡಿಮೆಯಾಗಿತ್ತು.‌ ಅಲ್ಲದೆ 84 ವರ್ಷದ ಮುಖರ್ಜಿ ಅವರ ಮಿದುಳಿನಲ್ಲಿ ರಕ್ತಹೆಪ್ಪುಗಟ್ಟಿದ್ದ ಕಾರಣ ಇದೇ ಆಸ್ಪತ್ರೆಯಲ್ಲಿ ಅವರಿಗೆ ತುರ್ತುಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದಾದ ಬಳಿಕವೂ ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಶಸ್ತ್ರಚಿಕಿತ್ಸೆಗೂ ಮುನ್ನ, ಅವರಿಗೆ ಕೋವಿಡ್‌–19 ಇರುವುದು ದೃಢಪಟ್ಟಿತ್ತು.

Previous ಚೆನ್ನಮ್ಮ ವೃತ್ತದಲ್ಲಿ 300 ಕೋಟಿ ವೆಚ್ಚದಲ್ಲಿ ಫ್ಲೈಓವರ್
Next ಸೂಪರ್ ಸ್ಪೆಷಾಲಿಟಿ ಟ್ರಾಮಾಕೇರ್ ಸೆಂಟರ್ ಲೋಕಾರ್ಪಣೆ

You might also like

0 Comments

No Comments Yet!

You can be first to comment this post!

Leave a Reply