‘ ರೈತ ನಾಯಕ ‘ ಸಂಪೂರ್ಣ ಸಿನಿಮಾ ಮೊಬೈಲ್ ಕ್ಯಾಮರದಲ್ಲಿ ಚಿತ್ರೀಕರಣ…!

‘ ರೈತ ನಾಯಕ ‘ ಸಂಪೂರ್ಣ ಸಿನಿಮಾ ಮೊಬೈಲ್ ಕ್ಯಾಮರದಲ್ಲಿ ಚಿತ್ರೀಕರಣ…!

ಹುಬ್ಬಳ್ಳಿ-

‘ ರೈತ ನಾಯಕ ‘ ಹೆಸರೇ ಹೇಳುವಂತೆ ಇದು ಇಂದಿನ ಕಾಲದಲ್ಲಿ ರೈತನ ಸಮಸ್ಯೆಗಳ ಕಥಾ ಹಂದರದಿಂದ ಕೂಡಿದ ಚಿತ್ರ. ಎಲ್ಲಾ ಚಿತ್ರಗಳ ಹಾಗೆ ಚಿತ್ರದಲ್ಲಿನ ರೈತನ ಕಣ್ಣೀರಿನ ಕಥೆ ಹೇಳುವ ಬದಲು ರೈತ ತನ್ನ ನದಕು ಹೇಗೆ ಕಟ್ಟಿ ಕೊಳ್ಳಬಹುದು ಎಂಬ ಹೊಸ ಆಲೋಚನೆ ಇಟ್ಟುಕೊಂಡು ಕೊಂಚ ವಿಭಿನ್ನವಾಗಿ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ.

 ಪಕ್ಕಾ ಉತ್ತರ ಕರ್ಣಾಟಕದ ರೈತನ ಸಂಕಷ್ಟ ವನ್ನು ತೋರಿಸುವು ಚಿತ್ರ, ಆದರೆ ಇಲ್ಲಿ ಎಲ್ಲಾ ಚಿತ್ರದಲ್ಲಿ ರಾಜಕಾರಣಿಗಳನ್ನು ಖಳನಾಯಕನ ಹಾಗೆ ತೋರಿಸಿದ್ರೆ ಈ ಚಿತ್ರದಲ್ಲಿ ಕೊಂಚ ಹೊಸತನ ಪ್ರಯೋಗ ಮಾಡಲಾಗಿದೆ. ಇಲ್ಲಿ ರಾಜಕಾರಣಿಯನ್ನು ವಿಲನ್ ಬದಲಾಗಿ ಈ ಪಾತ್ರಕ್ಕೆ ಮತ್ತೊಂದು ರೂಪ ಕೊಡಲಾಗಿದೆ. ಇಷ್ಟೆಲ್ಲಾ ವಿನೂತನ ಪ್ರಯೋಗ ಮಾಡಿ ಕಿರು ಚಿತ್ರದ ಚಿತ್ರೀಕರಣ ಮಾಡಿದ್ದು ಸಂಪೂರ್ಣ ಮೊಬೈಲ್ ನಲ್ಲಿ ಎನ್ನುವುದು ಮತ್ತೊಂದು ವಿಶೇಷ.

 ಪಕ್ಕಾ ಉತ್ತರ ಕರ್ನಾಟಕದ ಯುವಕರು ತಯಾರಿಸಿದ ಚಿತ್ರ ಇದು . ಒಂದು ಮೊಬೈಲ್ ನಿಂದ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಈ ಹೊಸ ಪ್ರಯೋಗ ಸಾಕ್ಷಿಯಾಗಿದೆ.ಹುಬ್ಬಳ್ಳಿಯ ಈ ಹುಡುಗ ಮಹೇಶ್ ಗೌಡ್ ಈ ಹೆಸರನ್ನು ನೀವು ಆಗಾಗ ಕೇಳಿಯೇ ಇರ್ತಿರಾ. ಕನ್ನಡದಲ್ಲಿ ಡಬ್ ಶ್ಮಾಸ್ ಟಿಕ್ ಟ್ಯಾಕ್ ಗಳಿಗಿಂತ ವಿಭಿನ್ನವಾಗಿ ವಿಡಿಯೋ ಮಾಡಿ ಜನಮನ್ನಣೆ ಪಡೆದವರು. ‌ಮೊಬೈಲ್ ಕ್ಯಾಮರಾದಲ್ಲಿ ಹಲಾವಾರು ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟಿ ಕೊಡುವ ಹಾಗು ನಟೆನೆ ಮಾಡಿ ಈ ಭಾಗದ ಜನರಿಂದ ಸೈ ಎನಿಸಿಕೊಂಡ ಯುವ ನಟ ಮಹೇಶ್ ಗೌಡ. ಕನ್ನಡದ ಹೆಸರಾಂತ ಸ್ಟಾರ್ ವಿಷ್ಣುವರ್ಧನ್ ಅವರ ಪಾತ್ರಗಳನ್ನು ಹೆಚ್ಚಾಗಿ ಅನುಕರಣೆ ಮಾಡಿ ಈ ಭಾಗದ ಜನರ‌ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

 ಇನ್ನು ಕೇವಲ ಬೇರೆ ಚಿತ್ರದ ತುಣುಕುಗಳನ್ನು ಅನುಕರಣೆ ಮಾಡುವ ಬದಲು ನಾವೂ ಒಂದು ಸಿನಿಮಾ ಮಾಡಬೇಕು ಎನ್ನುವ ಆಲೋಚನೆ ಇಂದ ಈ ಯುವಕರು ಕಿರು ಚಿತ್ರ ನಿರ್ಮಾಣ ಮಾಡಿದ್ದಾರೆ…ರೈತ ನಾಯಕ ಸಿನಿಮಾ , ಫಸ್ಟ್ ಲುಕ್ ಸಿನಿಮಾ ಪ್ರೋಮೋ ಟೀಚರ್ ಹೀಗೆ ಹತ್ತು ಹಲವಾರು ಪ್ರಯೋಗ ಮಾಡಿ ಈ ಭಾಗದಲ್ಲಿ ತಕ್ಕಮಟ್ಟಿಗೆ ಕುತೂಹಲ ಮೂಡಿಸಿದ್ದು ಮಾತ್ರ ಸುಳ್ಳಲ್ಲಾ.ಈಗಾಗಲೇ ಚಿತ್ರ ತಂಡ ಸಂಪೂರ್ಣ ಚಿತ್ರೀಕರಣ ಮಾಡಿ ಮುಗಿಸಿದ್ದು ರೀ ರೆಕಾರ್ಡಿಂಗ್ ಡಬ್ಬಿಂಗ್ ಸಹ ಮಾಡಿದೆ. ಮೊಬೈಲ್ ತಾಂತ್ರಿಕತೆಯನ್ನು ಸಂಪೂರ್ಣವಾಗಿ ಬಳಸಿಕೊಂಡ ಚಿತ್ರ ತಯಾರಿಸಿದ್ದಾರೆ. ನಾಯಕ ನಟನಾಗಿರುವ ಮಹೇಶ್ ಗೌಡ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

 ಇನ್ನು ಕ್ಯಾಮರಾ ಮನ್ ಆಗಿ ಸತೀಶ್ ಬಳಗಾನೂರ ಹಾಗೂ ಶ್ರೀಪಾದ ಗೌಡ ಕೆಲಸ ಮಾಡಿದ್ದಾರೆ. ಸಾಹಿತ್ಯ ಸಂಕಲನವನ್ನು ಗುರುಪಾದ ಗೌಡ ಅವರು ಮಾಡಿದ್ದಾರೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಚಿತ್ರ ತಂಡ ಎಲ್ಲಾ ರೀತಿಯ ಸೋಶಿಯಲ್ ಮೀಡಿಯಠ ಪ್ಲಾಟ್ ಫಾರ್ಮ ನಲ್ಲಿ ಬಿಡುಗಡೆ ಮಾಡಲಿದ್ದೆ.ಅದೇನೇ ಇರಲಿ ಉತ್ಸಾಹಿ ಯುವಕರು ಸೇರಿ ಹೀಗೊಂದು ಹೊಸ ಪ್ರಯೋಗ ಮಾಡಿದ್ದಾರೆ ಎಂದರೆ, ನಾವೆಲ್ಲ ಅವರ ಬೆಣ್ಣು ತಟ್ಟಿ ಬಳೆಸ ಬೇಕಿದೆ. ಉತ್ತರ ಕರ್ನಾಟಕದಲ್ಲಿ ಪ್ರತಿಭೆಗೆ ಕಡಿಮೆ ಇಲ್ಲಾ ಆದ್ರೆ ಅವಕಾಶ ಕೊರತೆ ಮಾತ್ರ ಯಾವಾಗಲೂ ಇದ್ದೇ ಇದೆ. ಆದ್ರೆ ಅವಕಾಶಕ್ಕೆ ಕಾದು ಕೂರದೆ ತಮ್ಮದೇ ದಾರಿ ಕಂಡು‌ಕೊಂಡಿ ಮುಂದೆ ಸಾಗಿದೆ ಈ ತಂಡ.

Previous ಬಿಜೆಪಿ ಮಾಜಿ ಶಾಸಕರ ಪುತ್ರ ನೇಣಿಗೆ ಶರಣು.
Next ಅನಧಿಕೃತ ಕಟ್ಟಡ ತೆರವುಗೊಳಿಸಿದ ಮೂಡಾ

You might also like

0 Comments

No Comments Yet!

You can be first to comment this post!

Leave a Reply