ರೈತರ ಬೆಳೆ ಸಮೀಕ್ಷೆ ತಿದ್ದುಪಡಿಗೆ “ಬೆಳೆ ದರ್ಶಕ್-2020 ಆ್ಯಪ್”

ರೈತರ ಬೆಳೆ ಸಮೀಕ್ಷೆ ತಿದ್ದುಪಡಿಗೆ “ಬೆಳೆ ದರ್ಶಕ್-2020 ಆ್ಯಪ್”

ಬಳ್ಳಾರಿ-

ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಸಮೀಕ್ಷೆಯನ್ನು ರೈತ ಬೆಳೆ ಸಮೀಕ್ಷೆ ಆ್ಯಪ್‍ನಲ್ಲಿ ಆಪ್‍ಲೋಡ್ ಮಾಡಿದ ವಿವರಗಳು ತಪ್ಪಾಗಿ ದಾಖಲಿಸಿದಲ್ಲಿ ಕೃಷಿ ಇಲಾಖೆಯಿಂದ “ಬೆಳೆ ದರ್ಶಕ್-2020” ಆ್ಯಪ್‍ನ ಮೂಲಕ ತಿದ್ದುಪಡಿ ಮಾಡಿಕೊಳ್ಳಬಹುದು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸೆ.22ರವರೆಗೆ 605705 ಪ್ಲಾಟ್‍ಗಳು ಬೆಳೆ ಸಮೀಕ್ಷೆ ಆ್ಯಪ್‍ಗೆ ಅಪ್ಲೋಡ್ ಆಗಿವೆ. ಕೃಷಿ ಕ್ಷೇತ್ರದಲ್ಲಿ ನವ್ಯ ತಂತ್ರಜ್ಞಾನ ಬಳಕೆ ಮತ್ತು ರೈತರಿಗೆ ಅನುಕೂಲ ಕಲ್ಪಿಸಲು ಹೊಸ ಹೊಸ ಹೆಜ್ಜೆಗಳನ್ನು ಇಡುತ್ತಿರುವ ಮತ್ತೊಂದು ಮಹತ್ವದ “ಬೆಳೆ ದರ್ಶಕ್-2020” ಆ್ಯಪ್‍ನ್ನು ಕೃಷಿ ಸಚಿವರು ಲೋಕಾರ್ಪಣೆಗೊಳಿಸಿದ್ದಾರೆ. ಬೆಳೆ ಸಮೀಕ್ಷೆ ಅಪ್ಲೋಡ್ ಮಾಡಲು ಸೆ.23ಕ್ಕೆ ಕೊನೆ ದಿನವಾಗಿದ್ದು, ರೈತರು ಆದಷ್ಟು ಬೇಗ ಸಮೀಕ್ಷೆ ಅಪ್ಲೋಡ್ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.

“ಬೆಳೆ ದರ್ಶಕ್-2020” ಹೆಸರಿನ ಈ ಆ್ಯಪ್ ಮೂಲಕ ರೈತರು ಅಪ್ಲೋಡ್ ಆಗಿರುವ ತಮ್ಮ ಬೆಳೆಗಳ ಮಾಹಿತಿಯನ್ನು ಪಡೆಯಬಹುದು. ಅಲ್ಲದೇ “ಬೆಳೆದರ್ಶಕ್-2020” ಆ್ಯಪ್‍ನಲ್ಲಿ ಅಪ್ಲೋಡ್ ಆದ ವಿವರಗಳು ಸರಿಯಾಗಿವೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ. ರೈತರಾಗಲಿ ಅಥವಾ ಖಾಸಗಿ ನಿವಾಸಿಗರು(Pಖ) ಒಂದು ವೇಳೆ ಬೆಳೆ ಸಮೀಕ್ಷೆ ಮಾಹಿತಿಯನ್ನು ತಪ್ಪಾಗಿ ದಾಖಲಿಸಿದ್ದಲ್ಲಿ ಆಕ್ಷೇಪಣೆ ಸಲ್ಲಿಸಿ ತಿದ್ದುಪಡಿಮಾಡಿಸಿಕೊಳ್ಳಲು “ಬೆಳೆ ದರ್ಶಕ-2020” ಆ್ಯಪ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

Previous ತುಂಬಿ ಹರಿಯುತ್ತಿರುವ ನದಿಯಲ್ಲಿ ಯುವಕರ ಹುಚ್ಚಾಟ
Next 1,536 ವಲಸೆ ಕಾರ್ಮಿಕ ಕುಟುಂಬದ ಮಕ್ಕಳಿಗೆ ಗಣಿ ಜಿಲ್ಲೆ ಸರ್ಕಾರಿ ಶಾಲೆಯಲ್ಲಿ ಪ್ರವೇಶ

You might also like

0 Comments

No Comments Yet!

You can be first to comment this post!

Leave a Reply