ಸೂಪರ್ ಸ್ಟಾರ್ ಹೆಸರಿರೋ ಈ ನಾಯಕ ಯಾರ್ ಗೊತ್ತ..?

ಸೂಪರ್ ಸ್ಟಾರ್ ಹೆಸರಿರೋ ಈ ನಾಯಕ ಯಾರ್ ಗೊತ್ತ..?

ಕನ್ನಡದ ನಾಯಕ ನಟ ರಾಜವರ್ಧನ್ ಬಗ್ಗೆ ಬರೀಬೇಕು ಅನಿಸುತ್ತಿದೆ. ಒಳ್ಳೆ ಹೈಟು.. ಅದ್ಭುತ ಕಂಗಳೂ ಇವೆ. ಗುಡ್ ಲುಕಿಂಗ್ ಗಾಯ್ ಬೇರೆ.

6 ಅಡಿಗೂ ಮೇಲಿರೋ ಈ ನಾಯಕ ನಟನ ತಂದೆ ಡಿಂಗ್ರಿ ನಾಗರಾಜ್. ಇವರು ಯಾರು ಅಂತ ಹೇಳೋದೆೇ ಬೇಡ. ಕನ್ನಡ ಹಾಸ್ಯ ಲೋಕದಲ್ಲಿ ಗುರುತಿಸಿಕೊಂಡು ಜನಮಾನಸದಲ್ಲಿಯೇ ಇನ್ನೂ ಇದ್ದಾರೆ.

ಆದರೆ, ರಾಜವರ್ಧನ್ ಪಾಲಿಗೆ ಗೆಲುವು ಮರಿಚಿಗೆ ಆಗುತ್ತಿದಿಯೋ ಏನೋ ಅನಿಸುತ್ತದೆ. ಸೂಪರ್ ಸ್ಟಾರ್ ಆಗೋ ಎಲ್ಲ ಗುಣಗಳೂ ಇವೆ. ಬಿಚ್ಚುಗತ್ತಿ ಚಿತ್ರ ಕಂಡವರಿಗೆ ರಾಜವರ್ಧನ್ ಅಭಿನಯದ ಪರಿ ತಿಳಿದು ಬಿಡುತ್ತದೆ. ಡೈರೆಕ್ಟರ್ ಹರಿ ಸಂತೋಷ ನಿರ್ದೇಶನದ ಈ ಚಿತ್ರ ಚಿತ್ರದುರ್ಗದ ಪಾಳೇಗಾರ ಬಿಚ್ಚುಗತ್ತಿ ಭರಮಣ್ಣನ ಕಥೆ ಹೇಳಿತ್ತು.

ಈ ಸಿನಿಮಾ ಒಂದೇ ನೋಡಿ.. ಯುವ ನಾಯಕ ನಟನನ್ನ ಮೇನ್ ಸ್ಟ್ರೀಮ್ ಗೆ ಪರಿಚಯಿಸಿದೇ ಅಂತ ಹೇಳಬಹುದು.
ಹೀಗೆ ಹೇಳಲಿಕ್ಕೆ ಕಾರಣವೂ ಇದೆ.

ಈ ಹಿಂದೆ ಬಂದ ನೂರೊಂದು ನೆನಪು ಚಿತ್ರದಲ್ಲೂ ರಾಜವರ್ಧನ್ ಅದ್ಭುತವಾಗಿಯೇ ಕಾಣಿಸಿಕೊಂಡಿದ್ದರು. ಆ ದಿನಗಳು ಚೇತನ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಆದರೆ, ನೂರೊಂದು ನೆನಪು ಸಿನಿಮಾ ಅಷ್ಟೇನೂ ಜನರ ಮನವನ್ನ ಗೆಲಲ್ಲಿಲ್ಲ.

ರಾಜವರ್ಧನ್ ಸಿನಿ ಜರ್ನಿಯಲ್ಲಿ ಫ್ಲೈ ಅನ್ನೊ ಸಿನಿಮಾ ಕೂಡ ಇದೆ. ಇದು ರಾಜವರ್ಧನ್ ಮೊಟ್ಟ ಮೊದಲ ಸಿನಿಮಾ. ಈ ಚಿತ್ರ ಬಂತೋ ಇಲ್ವೊ ಗೊತ್ತೆ ಇಲ್ಲ. ಆದರೆ ರಾಜವರ್ಧನ್ ಪಯಣ ನಿಲ್ಲದೇ ಸಾಗಿದೆ.

ನೀನು ಹೀರೋ ಆಗ್ತೀಯಾ ಮುನ್ನುಗ್ಗು ಅಂತ ರಾಬರ್ಟ್ ಡೈರೆಕ್ಟರ್ ತರುಣ್ ಸುಧೀರ್ ಸ್ಪೂರ್ತಿ ನೀಡಿದ್ದೆ ತಡ.. ರಾಜವರ್ಧನ್ ರೆಡಿ ಆಗಿದ್ದು ಅಷ್ಟೇ ಸತ್ಯ. ಈ ಸತ್ಯ. ಸ್ಪೂರ್ತಿ ತುಂಬಿದ ಆ ಮಾತಿನ ಶಕ್ತಿ.. ಎಲ್ಲವೂ ಜೊತೆಗೂಡಿದ್ದರಿಂದ ರಾಜವರ್ಧನ್ ಕನ್ನಡ ಸಿನಿಮಾರಂಗದಲ್ಲಿ ಗಟ್ಟಿಯಾಗಿ ನೆಲೆಯೂರೋ ತಯಾರಿ ಮಾಡಿಕೊಳ್ತಿದ್ದಾರೆ.

ಬಿಚ್ಚುಗತ್ತಿ ಚಿತ್ರದ ಬಳಿಕ ರಾಜವರ್ಧನ್ ರನ್ನ ಈಗ ಮತ್ತೊಂದು ಚಿತ್ರ ಹುಡುಕಿಕೊಂಡು ಬಂದಿದೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಲ್ಲ. ಆದರೆ ಟೀಮ್ ಫೈನಲ್ ಆಗಿದೆ. ಕುಮರೇಶ್ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಅತೀ ದೊಡ್ಡ ಹಗರಣದ ನೈಜ ಕಥೆ ಸುತ್ತವೇ ಚಿತ್ರ ಇದೆ. ಸದ್ಯಕ್ಕೆ ಫಸ್ಟ್ ಲುಕ್ ರಿಲೀಸ್ ಆಗಿದೆ. ಬಾಕಿ ಮಾಹಿತಿ ಕೊಡ್ತೀನಿ ವೇಟ್ ಮಾಡಿ.

-ರೇವನ್ ಪಿ.ಜೇವೂರ್..

Previous ಇನ್ನುಮುಂದೆ ಆರಾಮವಾಗಿ ಬಾರ್ ನಲ್ಲಿ ಕುಳಿತು ಕುಡಿಯಬಹುದು
Next ಕುಡಿಯಲು ಬಾರ್ ಗೆ ಹೋಗುತ್ತಿರಾ ಹಾಗಾದ್ರೆ ಈ ಸುದ್ದಿ ಓದಲೇಬೇಕು

You might also like

0 Comments

No Comments Yet!

You can be first to comment this post!

Leave a Reply