ಜನನ ಮರಣ ಪ್ರಮಾಣ ಪತ್ರಗಳಿಗೆ ಡಿಜಿಟಲ್ ಸಹಿ ಕಡ್ಡಾಯ

ಜನನ ಮರಣ ಪ್ರಮಾಣ ಪತ್ರಗಳಿಗೆ ಡಿಜಿಟಲ್ ಸಹಿ ಕಡ್ಡಾಯ

ಮಂಗಳೂರು-

 ಜಿಲ್ಲೆಯಲ್ಲಿ  ಜನನ ಮರಣ ಪ್ರಮಾಣ ಪತ್ರಗಳು ಕಡ್ಡಾಯವಾಗಿ ಡಿಜಿಟಲ್ ಸಹಿಯ ಮುಖಾಂತರ ವಿತರಣೆಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ ಜೆ. ರೂಪ ಹೇಳಿದರು.ಅವರು, ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜನನ ಮರಣ ನೋಂದಣಿ ಕುರಿತಾದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

 ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಲೆಕ್ಕಿಗರು ನೋಂದಣಾಧಿಕಾರಿಗಳಾಗಿದ್ದು, ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಜಿಲ್ಲಾ ಆಸ್ಪತ್ರೆಗಳಲ್ಲಿ ಸರ್ಕಾರಿ ವೈದ್ಯಾಧಿಕಾರಿ ಉಪನೋಂದಣಾಧಿಕಾರಿಯಾಗಿದ್ದಾರೆ. ಇನ್ನು ಮಹಾನಗರಪಾಲಿಕೆಯಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿ ನೋಂದಣಾಧಿಕಾರಿಯಾಗಿದ್ದು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಮತ್ತು ಅಧಿಸೂಚಿತ ಪ್ರದೇಶಗಳಲ್ಲಿ ಆರೋಗ್ಯ ನಿರೀಕ್ಷಕರು ನೋಂದಣಾಧಿಕಾರಿಗಳಾಗಿದ್ದು, ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರಿ ವೈದ್ಯರು ಉಪನೋಂದಣಾಧಿಕಾರಿಗಳಾಗಿದ್ದು ಇವರುಗಳು ಡಿಜಿಟಲ್ ‘ಕೀ’ ಯನ್ನು  ಅಳವಡಿಸಿಕೊಳ್ಳಬೇಕು. ಕಡ್ಡಾಯವಾಗಿ ಡಿಜಿಟಲ್ ಸಹಿಯ ಮುಖಾಂತರ ಜನನ ಮರಣ ಪ್ರಮಾಣ ಪತ್ರಗಳನ್ನು ನೀಡಬೇಕು. ಆದಷ್ಟು ಹಸ್ತ ಸಹಿಯನ್ನು ಕಡಿಮೆಗೊಳಿಸಬೇಕು ಎಂದು ಸೂಚಿಸಿದರು.

 ಸರ್ಕಾರದ ಆದೇಶದ ಪ್ರಕಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಜನನ ಮರಣ ಪ್ರಮಾಣ ಪತ್ರಗಳ ವಿತರಣಾಧಿಕಾರಿಗಳಾಗಿ ನೇಮಿಸಿದ್ದು, ಈ ಬಗ್ಗೆ ತಾಲೂಕು ಮಟ್ಟದಲ್ಲಿ ಎಲ್ಲಾ ಪಿ.ಡಿ.ಓಗಳಿಗೆ ಸೂಕ್ತ ತರಬೇತಿ ಜೊತೆಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಅವರು ಹೇಳಿದರು.

 2020ನೇ ಸಾಲಿನ ಜನವರಿಯಿಂದ ಆಗಸ್ಟ್ ವರೆಗಿನ ಅಂಕಿ ಅಂಶದ ಪ್ರಕಾರ ಜಿಲ್ಲೆಯ ನಗರ ಹಾಗೂ ಗ್ರಾಮಾಂತರಗಳಲ್ಲಿ 18,824 ಜನನ ಪ್ರಮಾಣ ಪತ್ರ ನೋಂದಣಿಯಾಗಿದ್ದು, 10,139 ಮರಣ ಪ್ರಮಾಣ ಪತ್ರ ನೋಂದಣಿಯಾಗಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಉದಯ್ ಶೆಟ್ಟಿ ಮಾಹಿತಿ ನೀಡಿದರು.

Previous ಕೊರೋನಾ ಸೋಂಕಿನಿಂದ ರಾಜ್ಯಸಭಾ ಸಂಸದ ಅಶೋಕ್​ ಗಸ್ತಿ ನಿಧನ
Next ಜಂತುಹುಳು ನಿವಾರಣೆಗೆ ಮನೆಮನೆಗೆ ಮಾತ್ರೆ ವಿತರಣೆ

You might also like

0 Comments

No Comments Yet!

You can be first to comment this post!

Leave a Reply