ಜಂತುಹುಳು ನಿವಾರಣೆಗೆ  ಮನೆಮನೆಗೆ ಮಾತ್ರೆ ವಿತರಣೆ

ಜಂತುಹುಳು ನಿವಾರಣೆಗೆ ಮನೆಮನೆಗೆ ಮಾತ್ರೆ ವಿತರಣೆ

ಮೈಸೂರು-

 ಬೆಳೆಯುವ ಮಕ್ಕಳಲ್ಲಿ ಇದ್ದಕ್ಕಿದ್ದಂತೆಯೆ ಅಪೌಷ್ಠಿಕತೆಯಿಂದ  ದೇಹದ ಬೆಳವಣಿಗೆ ಕುಂಠಿತ ಹಾಗೂ ಭೌದ್ಧಿಕ ಶಕ್ತಿಯಲ್ಲಿ ಕೊರತೆ ಕಾಣಿಸಿಕೊಂಡರೆ ಆ ಮಕ್ಕಳಲ್ಲಿ ಜಂತುಹುಳು ಸಮಸ್ಯೆ ಇದೆ ಎಂದರ್ಥ. ಈ ರೋಗಲಕ್ಷಣವು ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಳಪೆ ನೈರ್ಮಲ್ಯ, ಕೊಳಕು ಸ್ಥಿತಿ ಹಾಗೂ ಮಣ್ಣಿನ ಸಂಪರ್ಕದಿಂದ ಈ ಸೋಂಕು ಹರಡಿ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹಾಗಾಗಿ ಜಂತುಹುಳು ಸಮಸ್ಯೆಯಿಂದ ಯಾವ ಮಕ್ಕಳು ಬಳಲಬಾರದು ಎಂಬ ಉದ್ದೇಶದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ. 

 ಈ ಬಾರಿ ದೇಶಾದ್ಯಂತ 2020 ರ ಸೆಪ್ಟೆಂಬರ್  7 ರಿಂದ 21 ರವರೆಗೆ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಗುರಿಯಾಗಿರಿಸಿಕೊಳ್ಳಲಾಗಿದೆ. ಅಲ್ಲದೆ ಈ ಬಾರಿ ಕೋವಿಡ್-19 ಜಾಗತಿಕ ಪಿಡುಗು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಹಲವಾರು ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಿ ಕಾರ್ಯಕ್ರಮ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಜ್ಜಾಗಿದೆ.

 ಕೊವೀಡ್-19 ಮಾರ್ಗಸೂಚಿಯನ್ವಯ ಶಾಲೆಗಳು ತೆರೆಯದೇ ಇರುವುದರಿಂದ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆಯನ್ನು ಮನೆಮನೆಗೆ ನೀಡುವ ವ್ಯವಸ್ಥೆಯನ್ನು ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ತಲುಪಿಸುವಂತೆ ತೀರ್ಮಾನಿಸಲಾಗಿದೆ.

 ಜಂತುಹುಳು ನಿವಾರಣಾ ಮಾತ್ರೆಯಾದ ಅಲ್ಬೆಂಡಾಜೋಲ್-400 ಎಂ.ಜಿ ಮಾತ್ರೆಯು ಉಚಿತವಾಗಿ ನೀಡುತ್ತಾರೆ. ಮಾತ್ರೆಯನ್ನು ಅಗಿದು ತಿನ್ನುವುದು ಅಥವಾ ಚೀಪುವುದು. ಎರಡು ವರ್ಷದೊಳಗಿನ ಮಕ್ಕಳಿಗೆ ಮಾತ್ರೆಯನ್ನು ಪುಡಿ ಮಾಡಿ ತಿನ್ನಿಸಿ ನೀರು ಕುಡಿಸಬಹುದು.

Previous ಜನನ ಮರಣ ಪ್ರಮಾಣ ಪತ್ರಗಳಿಗೆ ಡಿಜಿಟಲ್ ಸಹಿ ಕಡ್ಡಾಯ
Next ಮೃಗಾಲಯಕ್ಕೆ ಹರಿದು ಬಂತು ನೆರವಿನ ಮಹಾಪೂರ

You might also like

0 Comments

No Comments Yet!

You can be first to comment this post!

Leave a Reply